ಇಂದು ವರ್ಷದ ಮೊದಲ ಸೂರ್ಯಗ್ರಹಣ; ಜಪಾನ್ ನಲ್ಲಿ ಗೋಚರ, ಭಾರತಕ್ಕಿಲ್ಲ ಆತಂಕ
ಹೊಸ ವರ್ಷದ ಆರಂಭದಲ್ಲೇ ಇಂದು ಮೊದಲ ಸೂರ್ಯಗ್ರಹಣ ಸಂಭವಿಸಿದ್ದು, ಜಪಾನ್ ದೇಶದಲ್ಲಿ ಗ್ರಹಣ ಗೋಚರವಾಗಿದೆ.

Published On :
ನವದೆಹಲಿ: ಹೊಸ ವರ್ಷದ ಆರಂಭದಲ್ಲೇ ಇಂದು ಮೊದಲ ಸೂರ್ಯಗ್ರಹಣ ಸಂಭವಿಸಿದ್ದು, ಜಪಾನ್ ದೇಶದಲ್ಲಿ ಗ್ರಹಣ ಗೋಚರವಾಗಿದೆ.
ಭಾರತೀಯ ಕಾಲಮಾನದ ಅನ್ವಯ ಇಂದು ಬೆಳಗ್ಗೆ 5 ಗಂಟೆಯಿಂದ 9:18 ರವರೆಗೆ ಪಾರ್ಶ್ವ ಸೂರ್ಯಗ್ರಹಣ ಸಂಭವಿಸಿದ್ದು, ಈಶಾನ್ಯ ಏಷ್ಯಾದ ಸೈಬೀರಿಯಾ, ಮಂಗೋಲಿಯಾ, ಉತ್ತರ ಫೆಸಿಫಿಕ್, ಚೀನಾ, ಕೊರಿಯಾ, ಜಪಾನ್ ರಾಷ್ಟ್ರಗಳಲ್ಲಿ ಗೋಚರಿಸಿದೆ.
ಇನ್ನು ಸೂರ್ಯನ ಗ್ರಹಣದ ನಂತರ ಇದೇ ತಿಂಗಳ 21 ರಂದು ಚಂದ್ರಗ್ರಹಣ ಜರುಗಲಿದ್ದು, ವರ್ಷದ ಮೊದಲ ಚಂದ್ರಗ್ರಹಣ 21ರ ರಾತ್ರಿ 9:03 ರಿಂದ 12:20 ಗಂಟೆಗಳವರೆಗೆ ಇರುತ್ತದೆ. ಸೂರ್ಯ ಗ್ರಹಣದಂತೆ, ಚಂದ್ರಗ್ರಹಣವೂ ಭಾರತದಲ್ಲಿ ಗೋಚರಿಸುವುದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


