ವಿಜ್ಞಾನ-ತಂತ್ರಜ್ಞಾನ

ಚೀನಾ ಮೇಡ್ ಮೊಬೈಲ್ ಗಳಿಗೆ ಪೈಪೋಟಿ ನೀಡಲಿದೆಯೇ ಸ್ಯಾಮ್ ಸಂಗ್ ಮಲ್ಟಿ ಕ್ಯಾಮರಾ ಮೊಬೈಲ್ ಗಳು?

ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಚೀನಾ ಉತ್ಪಾದಿತ ಮೊಬೈಲ್ ಗಳ ಪ್ರಾಬಲ್ಯ ಹೆಚ್ಚುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಸ್ಯಾಮ್ ಸಂಗ್ ಚೀನಾ ಕಂಪನಿಗಳಿಗೆ ಪ್ರಬಲ ಪೈಪೋಟೀಯೊಡ್ಡಲು ಸಜ್ಜುಗೊಂಡಿದೆ.

ಚೀನಾ ಮೇಡ್ ಮೊಬೈಲ್ ಗಳಿಗೆ ಪೈಪೋಟಿ ನೀಡಲಿದೆಯೇ ಸ್ಯಾಮ್ ಸಂಗ್ ಮಲ್ಟಿ ಕ್ಯಾಮರಾ ಮೊಬೈಲ್ ಗಳು?
ಚೀನಾ ಮೇಡ್ ಮೊಬೈಲ್ ಗಳಿಗೆ ಪೈಪೋಟಿ ನೀಡಲಿದೆಯೇ ಸ್ಯಾಮ್ ಸಂಗ್ ಮಲ್ಟಿ ಕ್ಯಾಮರಾ ಮೊಬೈಲ್ ಗಳು?
Published On :
ನವದೆಹಲಿ: ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಚೀನಾ ಉತ್ಪಾದಿತ ಮೊಬೈಲ್ ಗಳ ಪ್ರಾಬಲ್ಯ ಹೆಚ್ಚುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಸ್ಯಾಮ್ ಸಂಗ್ ಚೀನಾ ಕಂಪನಿಗಳಿಗೆ ಪ್ರಬಲ ಪೈಪೋಟೀಯೊಡ್ಡಲು ಸಜ್ಜುಗೊಂಡಿದೆ. 
ಕ್ಯಾಮರವನ್ನು ಪ್ರಧಾನ ಅಂಶವನ್ನಾಗಿ ಪರಿಗಣಿಸಿರುವ ಸ್ಯಾಮ್ ಸಂಗ್, ತನ್ನ ಕೆಲವೊಂದು ನೀತಿಗಳನ್ನು ಬದಲಾವಣೆ ಮಾಡಿಕೊಂಡು ಚೀನಾ ಸಂಸ್ಥೆಗಳಿಗೆ ಪೈಪೋಟಿ ನೀಡಲು ಸಜ್ಜುಗೊಂಡಿದೆ. ಈ ಹಿನ್ನೆಲೆಯಲ್ಲಿ ಸ್ಯಾಮ್ ಸಂಗ್ ಮಲ್ಟಿ ಕ್ಯಾಮರ ವ್ಯವಸ್ಥೆಯನ್ನು ಹೊಂದಿರುವ ಗ್ಯಾಲೆಕ್ಸಿ ಎ7 ನ್ನು ಘೋಷಣೆ ಮಾಡಿದೆ. 
ಇನ್ನು ಗ್ಯಾಲೆಕ್ಸಿ ಎ9 ಮೊಬೈಲ್ ಫೋನ್ ನಾಲ್ಕು-ಹಿಂಭಾಗದ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿರಲಿದ್ದು, ಎ7 ಬೆಲೆ ಸುಮಾರು 30,000 ರೂಪಾಯಿಗಳಿಗಿಂತ ಕಡಿಮೆ ಇರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ತ್ರಿವಳಿ ಕ್ಯಾಮರಾ ವ್ಯವಸ್ಥೆ ಹೊಂದಿರಲಿರುವ ಈ ಮೊಬೈಲ್ ನಲ್ಲಿ ಉತ್ತಮ ಗುಣಮಟ್ಟದ ಫೋಟೊಗಳನ್ನು ಸೆರೆ ಹಿಡಿಯಬಹುದಾಗಿದೆ ಎಂದು ಸಂಸ್ಥೆ ತಿಳಿಸಿದ್ದು ಚೀನಾ ಮೊಬೈಲ್ ಗಳಿಗೆ ಪೈಪೋಟಿ ನೀಡಲು ಸಜ್ಜುಗೊಂಡಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.