ವಿಜ್ಞಾನ-ತಂತ್ರಜ್ಞಾನ

ಚಂದ್ರಯಾನ-2: ಇಸ್ರೋದ ಮಹತ್ವದ ಘಟ್ಟದ ಪರೀಕ್ಷೆ ಅಭೂತಪೂರ್ವ ಯಶಸ್ವಿ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2ಗೆ ಸಂಬಂಧಿಸಿದ ಮಹತ್ವದ ಪರೀಕ್ಷೆಯೊಂದು ಅಭೂತಪೂರ್ವ ಯಶಸ್ಸು ಸಾಧಿಸಿದೆ.

ಚಂದ್ರಯಾನ-2: ಇಸ್ರೋದ ಮಹತ್ವದ ಘಟ್ಟದ ಪರೀಕ್ಷೆ ಅಭೂತಪೂರ್ವ ಯಶಸ್ವಿ
ಸಂಗ್ರಹ ಚಿತ್ರ
Published On :
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2ಗೆ ಸಂಬಂಧಿಸಿದ ಮಹತ್ವದ ಪರೀಕ್ಷೆಯೊಂದು ಅಭೂತಪೂರ್ವ ಯಶಸ್ಸು ಸಾಧಿಸಿದೆ.
ಚಂದ್ರಯಾನ-2ರ ತಾಲೀಮು ನಡೆಸುತ್ತಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ)ಗೆ ಮಹತ್ವದ ಮುನ್ನಡೆ ದೊರತಿದ್ದು, ಚಂದ್ರನ ಅಂಗಳದಲ್ಲಿ ಸೂಕ್ಷ್ಮ ಹಾಗೂ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡುವ ಸಂಬಂಧ ತಾನು ನಡೆಸಿದ ಮಹತ್ವದ ಪ್ರಯೋಗವು ಯಶಸ್ವಿಯಾಗಿದೆ ಎಂದು ಇಸ್ರೋ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಇಸ್ರೋ ಪಿತಾಮಾಹ ವಿಕ್ರಮ್ ಸಾರಾಭಾಯಿ ಹೆಸರಲ್ಲಿರುವ ಈ ಲ್ಯಾಂಡರ್ ಅನ್ನು ಇಂದು ಪರೀಕ್ಷೆಗೊಳಪಡಿಸಲಾಗಿತ್ತು. ಲ್ಯಾಡರ್ ನ ಲ್ಯಾಪ್ಟ್ ಅನ್ನು ಇಂದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಈ ಲ್ಯಾಪ್ಟ್ ಪರೀಕ್ಷೆ ಯಶಸ್ವಿಯಾಗಿದೆ ಎಂದು ಇಸ್ರೋ ಹೇಳಿದೆ.
ಗುರುತ್ವಾಕರ್ಷಣ ಬಲದ ವ್ಯತ್ಯಾಸ ಹಾಗೂ ಧ್ರವ ಇಂಧನದ ಬಳಕೆ ಸಂಬಂಧ ಈ ಲ್ಯಾಪ್ಟ್ ಪರೀಕ್ಷೆ ನಡೆಸಲಾಗಿದ್ದು, ನಿರೀಕ್ಷೆಯನ್ನೂ ಮೀರಿ ಪರೀಕ್ಷೆ ಯಶಸ್ಸು ಕಂಡಿದೆ. ಮೂಲಗಳ ಪ್ರಕಾರ ತಮಿಳುನಾಡಿನ ಮಹೇಂದ್ರಗಿರಿಯ ಇಸ್ರೋದ ವಿಶೇಷ ಪ್ರಯೋಗಾಲಯದಲ್ಲಿ ಈ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಈ ಮೂಲಕ, ಚಂದ್ರಯಾನ-2ಕ್ಕೆ ಸಂಬಂಧಿಸಿದ ಎಲ್ಲ ಮೂರೂ ಪ್ರಯೋಗಗಳೂ ಯಶಸ್ವಿಯಾಗಿ ಮುಗಿದಿದ್ದು, ಜನವರಿ 2019ರಲ್ಲಿ ಉಡಾವಣೆ ಮಾಡುವ ಲೆಕ್ಕಾಚಾರವನ್ನು ಇಸ್ರೋ ಹೊಂದಿದೆ.
ಇನ್ನು 2008ರ ಅಕ್ಟೋಬರ್ ನಲ್ಲಿ ಇಸ್ರೋ ಚಂದ್ರಯಾನ-1 ಉಡಾವಣೆ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.