ಆಪಲ್, ಸ್ಯಾಮ್ ಸಂಗ್ ಸಂಸ್ಥೆಗಳಿಗೆ ಮಿಲಿಯನ್ ಗಟ್ಟಲೆ ದಂಡ!
ಮೊಬೈಲ್ ಗಳಲ್ಲಿ ಸಾಫ್ಟ್ ವೇರ್ ಅಪ್ಡೇಟ್ ಮಾಡಲು ಪ್ರೇರೇಪಿಸಿ ಮೊಬೈಲ್ ನಿಧಾನಗೊಳಿಸುತ್ತಿದ್ದ ಆಪಲ್, ಸ್ಯಾಮ್ ಸಂಗ್ ಸಂಸ್ಥೆಗಳಿಗೆ ಇಟಾಲಿಯ ಸಂಸ್ಥೆಯೊಂದು ಮಿಲಿಯನ್ ಗಟ್ಟಲೆ ದಂಡ ವಿಧಿಸಿದೆ.

Published On :
ರೋಮ್: ಮೊಬೈಲ್ ಗಳಲ್ಲಿ ಸಾಫ್ಟ್ ವೇರ್ ಅಪ್ಡೇಟ್ ಮಾಡಲು ಪ್ರೇರೇಪಿಸಿ ಮೊಬೈಲ್ ನಿಧಾನಗೊಳಿಸುತ್ತಿದ್ದ ಆಪಲ್, ಸ್ಯಾಮ್ ಸಂಗ್ ಸಂಸ್ಥೆಗಳಿಗೆ ಇಟಾಲಿಯ ಸಂಸ್ಥೆಯೊಂದು ಮಿಲಿಯನ್ ಗಟ್ಟಲೆ ದಂಡ ವಿಧಿಸಿದೆ.
ಎರಡೂ ಸಂಸ್ಥೆಗಳೂ ಅಪ್ರಾಮಾಣಿಕ ವಾಣಿಜ್ಯ ಆಚರಣೆಗಳಲ್ಲಿ ತೊಡಗಿವೆ ಎಂದು ಇಟಾಲಿಯ ಎಜಿಸಿಎಂ ಆರೋಪಿಸಿದ್ದು, ಆಪಲ್ ಹಾಗೂ ಸ್ಯಾಮ್ ಸಂಗ್ ಸಂಸ್ಥೆಗಳಿಗೆ ಅನುಕ್ರಮವಾಗಿ 10 ಮಿಲಿಯನ್ ಹಾಗೂ 5 ಮಿಲಿಯನ್ ಯುರೋಗಳ ದಂಡವನ್ನು ವಿಧಿಸಿದೆ. ಆಪಲ್ ಹಾಗೂ ಸ್ಯಾಮ್ ಸಂಗ್ ಸಂಸ್ಥೆಗಳು ಗ್ರಾಹಕರಿಗೆ ಪದೇ ಪದೇ ಸಾಫ್ಟ್ ವೇರ್ ಅಪ್ ಡೇಟ್ ಮಾಡುವುದಕ್ಕೆ ಪ್ರೇರೇಪಿಸುತ್ತಿತ್ತು. ಇದರಿಂದಾಗಿ ಫೋನ್ ಚಟುವಟಿಕೆ ನಿಧಾನವಾಗಿ ಮೊಬೈಲ್ ಬದಲಾವಣೆ ಮಾಡುವ ಅನಿವಾರ್ಯತೆ ಸೃಷ್ಟಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


