ವಿಶ್ವಾದ್ಯಂತ ಯೂಟ್ಯೂಬ್ ಸ್ಥಗಿತ, ಸಮಸ್ಯೆ ಸರಿಪಡಿಸಿದ್ದೇವೆ ಎಂದ ಸಂಸ್ಥೆ!
ಖ್ಯಾತ ವಿಡಿಯೋ ಜಾಲತಾಣ ಯೂಟ್ಯೂಬ್ ಮಂಗಳವಾರ ರಾತ್ರಿ ಸ್ಥಗಿತವಾಗಿತ್ತು.

Published On :
ವಾಷಿಂಗ್ಟನ್: ಖ್ಯಾತ ವಿಡಿಯೋ ಜಾಲತಾಣ ಯೂಟ್ಯೂಬ್ ಮಂಗಳವಾರ ರಾತ್ರಿ ಸ್ಥಗಿತವಾಗಿತ್ತು.
ವಿಶ್ವದ ಪ್ರಖ್ಯಾತ ಮತ್ತು ಬಹು ದೊಡ್ಡ ವಿಡಿಯೋ ಜಾಲ ಯ್ಯೂಟ್ಯೂಬ್ನಲ್ಲಿ ಜಗತ್ತಿನಾದ್ಯಂತ ಮಂಗಳವಾರ ರಾತ್ರಿ ತಾಂತ್ರಿಕದೋಷ ಎದುರಿಸಿತ್ತು. ಹೀಗಾಗಿ ವಿಡಿಯೋ ಪ್ಲೇ ಮಾಡಲು ಮತ್ತು ಅಪ್ಲೋಡ್ ಮಾಡಲು ಬಳಕೆದಾರರಿಗೆ ತೊಡಕುಂಟಾಗಿತ್ತು. ಯ್ಯೂಟ್ಯೂಬ್ ತೆರೆದುಕೊಳ್ಳಲು ಸಮಸ್ಯೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಮತ್ತು ಎರರ್ ಕೋಡ್ ಕಾಣಿಸಿಕೊಳ್ಳುತ್ತಿದ್ದರಿಂದ ಜಗತ್ತಿನಾದ್ಯಂತ ಅಸಂಖ್ಯ ಬಳಕೆದಾರರು ಈ ಬಗ್ಗೆ ಯ್ಯೂಟ್ಯೂಬ್ ಗೆ ವರದಿ ಮಾಡಿದ್ದರು.
ಈ ಬಗ್ಗೆ ಬಳಕೆದಾರರಿಂದ ವರದಿ ಪಡೆದ ಕೂಡಲೇ ಎಚ್ಚೆತ್ತ ಸಂಸ್ಥೆ ವರದಿ ಮಾಡಿದ್ದಕ್ಕಾಗಿ ಧನ್ಯವಾದಗಳು. ಶೀಘ್ರ ಸಮಸ್ಯೆ ಸರಿಪಡಿಸುತ್ತೇವೆ ಎಂದು ಟ್ವೀಟ್ ಮಾಡಿದೆ. ಅಂತೆಯೇ ಸತತ ಪ್ರಯತ್ನಗಳ ನಂತರ ಯ್ಯೂಟ್ಯೂಬ್ ಸಮಸ್ಯೆಯನ್ನು ಬುಧವಾರ ಬೆಳಗ್ಗೆ 8 ಗಂಟೆ ಹೊತ್ತಿಗೆ ಸರಿಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
YouTubeWashingtonವಾಷಿಂಗ್ಟನ್ಯೂಟ್ಯೂಬ್science and technologyವಿಜ್ಞಾನ ಮತ್ತು ತಂತ್ರಜ್ಞಾನVideo Searchವಿಡಿಯೋ ಸರ್ಚ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


