ಚಂದ್ರನಲ್ಲೂ 4ಜಿ ಮೊಬೈಲ್ ನೆಟ್ವರ್ಕ್, ಭೂಮಿಗೆ ಬರಲಿದೆ ಎಚ್ಡಿ ವಿಡಿಯೋ!
ಮುಂದಿನ ವರ್ಷದಿಂದ ಚಂದ್ರನಲ್ಲೂ 4ಜಿ ನೆಟ್ವರ್ಕ್ ಲಭ್ಯವಾಗಲಿದ್ದು, ಭೂಮಿಗೆ ಎಚ್ ಡಿ ಗುಣಮಟ್ಟದ.....

Published On :
ನವದೆಹಲಿ: ಮುಂದಿನ ವರ್ಷದಿಂದ ಚಂದ್ರನಲ್ಲೂ 4ಜಿ ನೆಟ್ವರ್ಕ್ ಲಭ್ಯವಾಗಲಿದ್ದು, ಭೂಮಿಗೆ ಎಚ್ ಡಿ ಗುಣಮಟ್ಟದ ವಿಡಿಯೋಗಳನ್ನು ತರೆಸಿಕೊಳ್ಳಬಹುದಾಗಿದೆ.
ಬಾಹ್ಯಾಕಾಶದಲ್ಲಿ ಸ್ಥಾಪಿಸಲಾಗುತ್ತಿರುವ ಮೊದಲ 4ಜಿ ನೆಟ್ವರ್ಕ್ ಇದಾಗಲಿದ್ದು, ವೊಡಾಫೋನ್ ಸ್ಥಾಪಿಸಲಿರುವ 1800 ಮೆಗಾರ್ಹ್ಜಟ ಫ್ರೀಕ್ವೆನ್ಸಿ ಬ್ಯಾಂಡ್ನ ನೆಟ್ವರ್ಕ್ ಮೂಲಕ ಚಂದ್ರನಿಂದ ಹೈ ಡಿಫಿನೇಷನ್ ಲೈವ್ಸ್ಟ್ರೀಮ್ ಪ್ರಸಾರ ಸಾಧ್ಯವಾಗಲಿದೆ.
ವೋಡಾಫೋನ್, ನೋಕಿಯಾ ಹಾಗೂ ಕಾರು ಉತ್ಪಾದಕ ಸಂಸ್ಥೆ ಆಡಿ ಸಂಸ್ಥೆ ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಜರ್ಮನಿಯ ಬರ್ಲಿನ್ ಮೂಲದ ವಿಜ್ಞಾನಿಗಳ ಕನಸಿನ ಮೂನ್ ಮಿಷನ್ ಯೋಜನೆಗೆ ಖಾಸಗಿ ಸಂಸ್ಥೆಗಳು ಹಣ ಹೂಡಿಕೆ ಮಾಡಿವೆ. ಹೀಗಾಗಿ, ಮುಂದಿನ ವರ್ಷ ಚಂದ್ರನಲ್ಲೂ ಮೊಬೈಲ್ ನೆಟ್ವರ್ಕ್ ಸಿಗಲಿದೆ.
ಬರ್ಲಿನ್ ಮೂಲದ ಕಂಪನಿ ಪಿಟಿಎಸ್ ಸೈಂಟಿಸ್ಟ್ಸ್ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ರಾಬರ್ಟ್ ಬೊಹ್ಮೆ ಅವರು ಈ ಬಗ್ಗೆ ಮಾತನಾಡಿ, ಕೇಪ್ ಕ್ಯಾನವರಲ್ ನಿಂದ 2019ರಲ್ಲಿ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ಮೂಲಕ ಇದನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.
ಮೊಟ್ಟ ಮೊದಲ ಎಚ್ ಡಿ ವಿಡಿಯೋ ಫೀಡ್ ಚಂದ್ರನಿಂದ ಭೂಮಿಗೆ ಸಿಗಲಿದ್ದು, ಬರ್ಲಿನ್ ನ ಮಿಷನ್ ಕಂಟ್ರೋಲ್ ಕೇಂದ್ರದಿಂದ ವಿಶ್ವದೆಲ್ಲೆಡೆ ಪ್ರಸಾರವಾಗಲಿದೆ. ಇದು ಟೆಲಿಕಾಂ ಕ್ಷೇತ್ರದಲ್ಲಿ ಹೊಸದೊಂದು ಕ್ರಾಂತಿಯಾಗಲಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


