ವಾಟ್ಸ್ ಆಪ್ ನಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ಸೌಲಭ್ಯ: ಏಕಕಾಲಕ್ಕೆ 4 ಜನರೊಂದಿಗೆ ಮಾತಾಡಲು ಸಾಧ್ಯ!
ಹಲವು ಬದಲಾವಣೆಗಳನ್ನು ಮಾಡುತ್ತಿರುವ ವಾಟ್ಸ್ ಆಪ್ ತನ್ನ ಗ್ರಾಹಕರಿಗೆ ಗ್ರೂಪ್ ವಿಡಿಯೋ, ವಾಯ್ಸ್ ಕರೆ ಮಾಡುವ ಸೌಲಭ್ಯವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದೆ.

Published On :
ನವದೆಹಲಿ: ಹಲವು ಬದಲಾವಣೆಗಳನ್ನು ಮಾಡುತ್ತಿರುವ ವಾಟ್ಸ್ ಆಪ್ ತನ್ನ ಗ್ರಾಹಕರಿಗೆ ಗ್ರೂಪ್ ವಿಡಿಯೋ, ವಾಯ್ಸ್ ಕರೆ ಮಾಡುವ ಸೌಲಭ್ಯವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದೆ.
ಐಒಎಸ್ ಹಾಗೂ ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಈ ಸೌಲಭ್ಯ ಜು.31 ರಿಂದ ಲಭ್ಯವಿದ್ದು, ಏಕ ಕಾಲಕ್ಕೆ 4 ಜನರೊಂದಿಗೆ ಮಾತನಾಡುವುದಕ್ಕೆ ಸಾಧ್ಯವಿದೆ. ಒನ್-ಆನ್-ಒನ್ ವಾಯ್ಸ್ ಅಥವಾ ವಿಡಿಯೋ ಕರೆ ಆಯ್ಕೆ ಮಾಡಿ ನ್ಯೂ ಆಡ್ ಪಾರ್ಟಿಸಿಪೆಂಟ್ ಆಯ್ಕೆ ಮಾಡಿದರೆ ಕರೆ ಮಾಡಬಹುದು ಎಂದು ವಾಟ್ಸ್ ಆಪ್ ಹೇಳಿಕೆ ನೀಡಿದೆ.
ಪ್ರಸ್ತುತ ವಾಟ್ಸ್ ಆಪ್ ಬಳಕೆದಾರರು 2 ಬಿಲಿಯನ್ ನಿಮಿಷಕ್ಕೂ ಹೆಚ್ಚು ನಿಮಿಷಗಳನ್ನು ಪ್ರತಿನಿತ್ಯ ವಾಟ್ಸ್ ಆಪ್ ಕರೆಯಲ್ಲಿ ಕಳೆಯುತ್ತಾರೆ. 2014 ರಲ್ಲಿ ಕರೆ ಸೌಲಭ್ಯ 2016 ರಲ್ಲಿ ವಿಡಿಯೋ ಕರೆ ಸೌಲಭ್ಯವನ್ನು ವಾಟ್ಸ್ ಆಪ್ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


