ವಿಶ್ವದ ಅತ್ಯಂತ ಬಲಶಾಲಿ ರಾಕೆಟ್ 'ಸ್ಪೇಸ್ ಎಕ್ಸ್' ನ ಫಾಲ್ಕನ್ ಯಶಸ್ವೀ ಉಡಾವಣೆ!
ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂದೇ ಖ್ಯಾತಿ ಗಳಿಸಿರುವ ಅಮೆರಿಕದ ಸ್ಪೇಸ್ ಎಕ್ಸ್ ಸಂಸ್ಥೆಯ ಫಾಲ್ಕನ್ ಯಶಸ್ವೀ ಉಡಾವಣೆಯಾಗಿದ್ದು, ಭವಿಷ್ಯದ ಮಂಗಳ ಗ್ರಹಕ್ಕೆ ಮಾನವ ಸಹಿತ ಪ್ರಯಾಣಕ್ಕೆ ಒಂದು ಹೆಜ್ಜೆ ಸನ್ನಿಹಿತವಾದಂತಾಗಿದೆ.

Published On :
ಫ್ಲೋರಿಡಾ: ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂದೇ ಖ್ಯಾತಿ ಗಳಿಸಿರುವ ಅಮೆರಿಕದ ಸ್ಪೇಸ್ ಎಕ್ಸ್ ಸಂಸ್ಥೆಯ ಫಾಲ್ಕನ್ ಯಶಸ್ವೀ ಉಡಾವಣೆಯಾಗಿದ್ದು, ಭವಿಷ್ಯದ ಮಂಗಳ ಗ್ರಹಕ್ಕೆ ಮಾನವ ಸಹಿತ ಪ್ರಯಾಣಕ್ಕೆ ಒಂದು ಹೆಜ್ಜೆ ಸನ್ನಿಹಿತವಾದಂತಾಗಿದೆ.
ಅಮೆರಿಕದ ಖ್ಯಾತ ಉದ್ಯಮಿ ಇಯಾನ್ ಮಸ್ಕ್ ಅವರ ಕನಸಿನ ಯೋಜನೆ 'ಸ್ಪೇಸ್ ಎಕ್ಸ್'ಗೆ ಜೀವ ತುಂಬಲಿರುವ ಫಾಲ್ಕನ್ ರಾಕೆಟ್ ಅನ್ನು ಇಂದು ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ನಿಲ್ದಾಣದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಈ ಕಾರ್ಯಾಚರಣೆಯನ್ನು ಸ್ಪೇಸ್ ಎಕ್ಸ್ ಸಂಸ್ಥೆ ನೇರ ಪ್ರಸಾರ ಮಾಡಿದ್ದು, ನಿರೀಕ್ಷಿತ ಸಮಯಕ್ಕೆ ನಿಖರವಾಗಿ ರಾಕೆಟ್ ತಲುಪಿದೆ ಎಂದು ವಿಜ್ಞಾನಿಗಳು ತಿಳಸಿದ್ದಾರೆ. ರಾಕೆಟ್ ಗೆ ಅಳವಡಿಸಲಾಗಿದ್ದ ಪ್ರಬಲಶಾಲಿ 27 ಎಂಜಿನ್ ಗಳ 9 ಬೂಸ್ಟರ್ ಗಳು ಮೂರು ವಿವಿಧ ಸ್ಥರಗಳಲ್ಲಿ ಕಾರ್ಯ ನಿರ್ವಹಿಸಿ ರಾಕೆಟ್ ಅನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ರವಾನೆ ಮಾಡಿತು.
ಬಾಹ್ಯಾಕಾಶಕ್ಕೆ ಸ್ಪೋರ್ಟ್ಸ್ ಕಾರು!
ಇನ್ನು ಫಾಲ್ಕನ್ ರಾಕೆಟ್ ತನ್ನೊಂದಿಗೆ ಟೆಸ್ಲಾ ಸಂಸ್ಥೆಯ ಸ್ಪೋರ್ಟ್ಸ್ ಕಾರನ್ನೂ ಕೂಡ ಬಾಹ್ಯಾಕಾಶಕ್ಕೆ ಹೊತ್ಯೊಯ್ದಿತ್ತು.ಡಮ್ಮಿ ಚಾಲಕ (ಬೊಂಬೆ)ನಿದ್ದ ಕೆಂಪು ಬಣ್ಣದ ಟೆಸ್ಲಾ ಕಾರನ್ನು ಫಾಲ್ಕನ್ ರಾಕೆಟ್ ಹೊತ್ತೊಯ್ದು ಯಶಸ್ವಿಯಾಗಿ ಕಾರನ್ನು ಬಾಹ್ಯಾಕಾಶ ಕಕ್ಷೆಗೆ
ಇನ್ನು ಫಾಲ್ಕನ್ ರಾಕೆಟ್ ನ ಎಂಜಿನ್ ಮೂರು ಎಂಜಿನ್ ಗಳ ಪೈಕಿ ಎರಡು ಎಂಜಿನ್ ಗಳ ಯಶಸ್ವಿಯಾಗಿ ಭೂಮಿಗೆ ಮರಳಿದ್ದು, ಅಟ್ಲಾಂಟಿಕ್ ಸಾಗರದಲ್ಲಿರುವ ಸ್ಪೇಸ್ ಎಕ್ಸ್ ನ ನೌಕೆಯತ್ತ ಬರಬೇಕಿದ್ದ ಮೂರನೇ ಎಂಜಿನ್ ಇನ್ನಷ್ಟೇ ಆಗಮಿಸಬೇಕಿದೆ. ಇನ್ನು ವಿಜ್ಞಾನಿಗಳು ತಿಳಿಸಿರುವಂತೆ ಫಾಲ್ಕನ್ ರಾಕೆಟ್ ಪ್ರಸ್ತುತ ಉಡಾವಣೆಯಲ್ಲಿ ಹೊತ್ತು ಸಾಗಿದೆ ಭಾರಕ್ಕಿಂತ ದುಪ್ಪಟ್ಟು ಭಾರದ ಇಂಧನ ಮತ್ತು ಇತರೆ ವಸ್ತುಗಳನ್ನು ಹೊತ್ತು ಸಾಗುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ.
ಒಟ್ಟಾರೆ ಉದ್ಯಮಿ ಇಯಾನ್ ಮಸ್ಕ್ ಅವರ ಕನಸಿನ ಯೋಜನೆ ಸ್ಪೇಸ್ ಎಕ್ಸ್ ಗೆ ಫಾಲ್ಕನ್ ರಾಕೆಟ್ ಯಶಸ್ವೀ ಉಡಾವಣೆ ಜೀವ ತುಂಬಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Floridaಫ್ಲೋರಿಡಾscience and technologyವಿಜ್ಞಾನ ಮತ್ತು ತಂತ್ರಜ್ಞಾನSpace X ProjectFalcon Rockethumans to Marsಸ್ಪೇಸ್ ಎಕ್ಸ್ ಯೋಜನೆಫಾಲ್ಕನ್ ರಾಕೆಟ್ಮಾನವ ಸಹಿತ ಮಂಗಳಯಾನ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


