ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್ 'ಸ್ಪೇಸ್ ಎಕ್ಸ್' ಉಡಾವಣೆಗೆ ಸಜ್ಜು!
ಚಂದ್ರ ಅಥವಾ ಮಂಗಳ ಗ್ರಹಕ್ಕೆ ಜನರನ್ನು ಕೊಂಡೊಯ್ಯಬಲ್ಲಾ ವಿಶ್ವದ ಅತ್ಯಂತ ಶಕ್ತಿಯುತ ರಾಕೆಟ್ ಸ್ಪೆಸ್ ಎಕ್ಸ್ ನ ಮೊದಲ ಪ್ರಾಯೋಗಿಕ ಪರೀಕ್ಷೆ ನಾಳೆ ನಡೆಯಲಿದೆ.

ಪ್ತೋರಿಡಾ:ಚಂದ್ರ ಅಥವಾ ಮಂಗಳ ಗ್ರಹಕ್ಕೆ ಜನರನ್ನು ಕೊಂಡೊಯ್ಯಬಲ್ಲಾ ವಿಶ್ವದ ಅತ್ಯಂತ ಶಕ್ತಿಯುತ ರಾಕೆಟ್ ಸ್ಪೆಸ್ ಎಕ್ಸ್ ನ ಮೊದಲ ಪ್ರಾಯೋಗಿಕ ಪರೀಕ್ಷೆ ನಾಳೆ ನಡೆಯಲಿದೆ. ಪ್ಲೋರಿಡಾದ ಕೇಪ್ ಕ್ಯಾನಾವೆರಲ್ ನಿಂದ ಸ್ಥಳೀಯ ಕಾಲಮಾನ 1-30ಕ್ಕೆ ಸ್ಪೇಷ್ ಎಕ್ಸ್ ಪಾಯಿಸಡ್ ರಾಕೆಟನ್ನು ಉಡಾಯಿಸಲಾಗುತ್ತಿದೆ ಎಂದು ಸ್ಪೆಷ್ ಎಕ್ಸ್ ಪಾಯ್ ಸಡ್ ಕಂಪನಿ ಸಿಇಓ ಎಲೋನ್ ಮಾಸ್ಕ್ ತಿಳಿಸಿದ್ದಾರೆ.
ಸೂರ್ಯ, ಮಂಗಳ ಗ್ರಹಗಳ ಸಮಾಂತರದ ಕಕ್ಷೆಯಲ್ಲಿ ಗಮ್ಯವಾದ ಸ್ಥಳವಕಾಶವಿದೆ. ಆದರೆ, ಎಲ್ಲಾ ಕೆಂಪುಗ್ರಹಗಳಲ್ಲೂ ಈ ರೀತಿಯಲ್ಲಿಲ್ಲ ಎಂದು ಎಲೋನ್ ಮಾಸ್ಕ್ ತಿಳಿಸಿದ್ದಾರೆ. ಮೊದಲ ಪ್ರಯತ್ನ ವಿಫಲವಾಗದಂತೆ ಮುಂಜಾಗ್ರತೆ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ನಾಸಾದೊಂದಿಗಿನ 1.6 ಬಿಲಿಯನ್ ಡಾಲರ್ ಒಪ್ಪಂದೊಂದಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಈಗಾಗಲೇ ಸರಕನ್ನು ಸಾಗಿಸಲಾಗಿದೆ. ಈ ಪ್ರಾಯೋಗಿಕ ಪರೀಕ್ಷೆ ಸ್ಪೆಷ್ ಎಕ್ಸ್ ಗೆ ಭಾರೀ ಯಶಸ್ಸು ತಂದುಕೊಡಲಿದೆ ಎಂದು ಮಾಸ್ಕ್ ವಿಶ್ವಾಸ ವ್ಯಕ್ಕಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


