ವಿಜ್ಞಾನ-ತಂತ್ರಜ್ಞಾನ

ಸೇನೆಗೆ ನೆರವಾಗಲಿರುವ ಇಸ್ರೋ ಸಂವಹನ ಉಪಗ್ರಹ ಜಿಸ್ಯಾಟ್-7ಎ ಉಡಾವಣೆ ಯಶಸ್ವಿ

ಸಂಪರ್ಕ ಜಾಲ ಒದಗಿಸಲು ಸೇನೆಗೆ ನೆರವಾಗಲಿರುವ ಜಿಸ್ಯಾಟ್-7ಎ ಉಪಗ್ರಹವನ್ನು ಇಸ್ರೋ ಡಿ.19 ರಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಸೇನೆಗೆ ನೆರವಾಗಲಿರುವ ಇಸ್ರೋ ಸಂವಹನ ಉಪಗ್ರಹ ಜಿಸ್ಯಾಟ್-7ಎ ಉಡಾವಣೆ ಯಶಸ್ವಿ
ಸೇನೆಗೆ ನೆರವಾಗಲಿರುವ ಇಸ್ರೋ ಉಪಗ್ರಹ ಉಡಾವಣೆ ಯಶಸ್ವಿ
Published On :
ಶ್ರೀಹರಿಕೋಟಾ: ಸಂಪರ್ಕ ಜಾಲ ಒದಗಿಸಲು ಸೇನೆಗೆ ನೆರವಾಗಲಿರುವ ಜಿಸ್ಯಾಟ್-7ಎ ಉಪಗ್ರಹವನ್ನು ಇಸ್ರೋ ಡಿ.19 ರಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ. 
4.10ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದ್ದು, ವಾಯುಪಡೆಯ ಸಂಪರ್ಕ ಹಾಗೂ ಸಂವಹನ ಸಾಮರ್ಥ್ಯಗಳನ್ನು ಈ ಉಪಗ್ರಹದ ಸಹಾಯದಿಂದ ಮತ್ತಷ್ಟು ಪರಿಣಮಾಕಾರಿಯಾಗಿಸಬಹುದಾಗಿದೆ. 
ದೇಶದ 35ನೇ ಸಂವಹನ ಉಪಗ್ರಹ ಇದಾಗಿದ್ದು,  2,250 ಕೆ.ಜಿ ತೂಕ ಹೊಂದಿದ್ದು  ಜಿಎಸ್ ಎಲ್ ವಿ-ಎಫ್ 11 ರಾಕೆಟ್ ಮೂಲಕ ಭೂಸ್ಥಿರ ಕಕ್ಷೆಗೆ ಸೇರಿಸಲಾಗಿದೆ.  8 ವರ್ಷಗಳ ಕಾಲ ಕಾರ್ಯನಿರ್ವಹಿಸಲಿರುವ ಈ ಉಪಗ್ರಹ ಭಾರತೀಯ ಭೂ ಪ್ರದೇಶದಲ್ಲಿ ಗ್ರಾಹಕರಿಗೆ ಕ್ಯು-ಬ್ಯಾಂಡ್ ಸೇವೆಯನ್ನು ಕಲ್ಪಿಸುವಲ್ಲಿ ನೆರವಾಗಲಿದೆ ಎಂದು ಇಸ್ರೋ ತಿಳಿಸಿದೆ. 
ರೇಡಾರ್ ಸ್ಟೇಷನ್ಸ್ ಗಳ, ಏರ್ ಬೊರ್ನ್ ವಾರ್ನಿಂಗ್ ಅಂಡ್ ಕಂಟ್ರೋಲ್ ಏರ್ ಕ್ರಾಫ್ಟ್ ಮತ್ತು ವಾಯುನೆಲೆಗಳ ಮಧ್ಯೆ ಸುಧಾರಿತ ಸಂಪರ್ಕ ಜಾಲ ಒದಗಿಸಲು ಉಪಗ್ರಹ ಉಡಾವಣೆ ಸೇನೆಗೆ ಸಹಕಾರಿಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.