ವಿಜ್ಞಾನ-ತಂತ್ರಜ್ಞಾನ

ಹೆಚ್ಚಿನ ಪರೀಕ್ಷೆಗೆ ಜಿಸ್ಯಾಟ್-11 ಉಪಗ್ರಹವನ್ನು ಹಿಂಪಡೆದ ಇಸ್ರೊ

ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೊ) ಫ್ರೆಂಚ್ ಗಯಾನಾದಲ್ಲಿನ ಕೋರೌದಲ್ಲಿನ ಏರಿಯನ್ ಸ್ಪೇಸ್ ನ ...

ಹೆಚ್ಚಿನ ಪರೀಕ್ಷೆಗೆ ಜಿಸ್ಯಾಟ್-11 ಉಪಗ್ರಹವನ್ನು ಹಿಂಪಡೆದ ಇಸ್ರೊ
ಸಾಂದರ್ಭಿಕ ಚಿತ್ರ
Published On :

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೊ) ಫ್ರೆಂಚ್ ಗಯಾನಾದಲ್ಲಿನ ಕೋರೌದಲ್ಲಿನ ಏರಿಯನ್ ಸ್ಪೇಸ್ ನ ರಾಕೆಟ್ ಬಂದರಿನಿಂದ ಸಂವಹನ ಉಪಗ್ರಹ ಜಿಸ್ಯಾಟ್ -11ನ್ನು ಹಿಂಪಡೆದಿದೆ.

ಬೆಂಗಳೂರಿನಲ್ಲಿರುವ ಇಸ್ರೊ ಕೇಂದ್ರದಲ್ಲಿ ಜಿಸ್ಯಾಟ್-11 ಉಪಗ್ರಹದ ಹೆಚ್ಚುವರಿ ತಾಂತ್ರಿಕ ತಪಾಸಣೆಯಿಂದಾಗಿ ಆರಂಭದಲ್ಲಿ ಮೇ 25ರಂದು ಏರಿಯನ್ 5ನ್ನು ಉಡಾಯಿಸಲು ಯೋಜಿಸಲಾಗಿತ್ತು. ನಂತರ ವಿಎ243ಯ ಉಡಾವಣೆಯನ್ನು ಮುಂದೂಡಲಾಗಿದೆ ಎಂದು ಏರಿಯನ್ ಸ್ಪೇಸ್ ತಿಳಿಸಿದೆ.

ಜಿಸ್ಯಾಟ್-11ನ್ನು ಆರಂಭದಲ್ಲಿ ಮೇ ಮಧ್ಯಭಾಗದಲ್ಲಿ ಉಡಾಯಿಸಲು ಯೋಜಿಸಲಾಗಿತ್ತು. ಉಪಗ್ರಹ ಮಾರ್ಚ್ ತಿಂಗಳಲ್ಲಿ ಏರಿಯನ್ ಸ್ಪೇಸ್ ನ ರಾಕೆಟ್ ಬಂದರನ್ನು ಸೇರಿತ್ತು.
ಜಿಸ್ಯಾಟ್ -11ನ್ನು ಇಸ್ರೋ ಕೇಂದ್ರ ವಿನ್ಯಾಸಗೊಳಿಸಿ ಜೋಡಿಸಿ ಸಂಯೋಜಿಸಿದ್ದು ಇದರ ಭಾರ ಅಂದಾಜು ಸುಮಾರು 5,870 ಕೆಜಿ ತೂಕವಿದೆ.

ಈ ಪ್ರಮುಖ ಸಂವಹನ ಉಪಗ್ರಹವು ಭಾರತದ ಪ್ರಧಾನ ಭೂಭಾಗ ಮತ್ತು ಸಮೀಪದಲ್ಲಿರುವ ದ್ವೀಪಗಳ ಮೇಲೆ ಬಹು-ಕ್ರೀಡಾ ಕಿರಣಗಳ ಪ್ರಸಾರವನ್ನು ಒದಗಿಸುವುದು, ಈಗಿರುವ ಇನ್ಸ್ಯಾಟ್/ ಜಿಸ್ಯಾಟ್ ಉಪಗ್ರಹ ವ್ಯವಸ್ಥೆಗಳೊಂದಿಗೆ ಹೋಲಿಸಿದರೆ ಗಮನಾರ್ಹ ಪ್ರಯೋಜನಗಳನ್ನು ತರುತ್ತದೆ ಎಂದು ಏರಿಯಾನ್ಸ್ಪೇಸ್ ಹೇಳಿಕೆಯಲ್ಲಿ ತಿಳಿಸಿದೆ.

ಹೊಸ ವಿನ್ಯಾಸ ವ್ಯವಸ್ಥೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಅಂಶಗಳೊಂದಿಗೆ ಜಿಎಸ್ಎಟಿ -11 ಒಂದೇ ವೇದಿಕೆಯಡಿ ಬಳಕೆದಾರರಿಗೆ 12 ಜಿಬಿಪಿಎಸ್ ಸಾಮರ್ಥ್ಯವನ್ನು ಉತ್ಪಾದಿಸುತ್ತದೆ.

ಹೆಚ್ಚಿನ ತಂತ್ರಜ್ಞಾನ ತಪಾಸಣೆಗೆ 5.8 ಟನ್ ತೂಕದ ಜಿಸ್ಯಾಟ್-11ನ್ನು ಏಕೆ ಹಿಂಪಡೆದಿದೆ ಎಂಬುದಕ್ಕೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.