ವಿಜ್ಞಾನ-ತಂತ್ರಜ್ಞಾನ

ಡ್ಯುಯಲ್ ಕ್ಯಾಮರ ಹೊಂದಿರುವ ಸ್ಯಾಮ್ ಸಂಗ್ ಜೆ7 ಡ್ಯುವೋ ಭಾರತದಲ್ಲಿ ಲಭ್ಯ

ಸ್ಯಾಮ್ ಸಂಗ್ ಗ್ಯಾಲೆಕ್ಸಿ ಜೆ ಶ್ರೇಣಿಯಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ, ಡ್ಯುಯಲ್ ಕ್ಯಾಮರ ಹೊಂದಿರುವ ಸ್ಯಾಮ್ ಸಂಗ್ ಜೆ ಡ್ಯುವೋ ಭಾರತದ ಮಾರುಕಟ್ಟೆ ಪ್ರವೇಶಿಸಿದೆ.

ಡ್ಯುಯಲ್ ಕ್ಯಾಮರ ಹೊಂದಿರುವ ಸ್ಯಾಮ್ ಸಂಗ್ ಜೆ7 ಡ್ಯುವೋ ಭಾರತದಲ್ಲಿ ಲಭ್ಯ
ಡ್ಯುಯಲ್ ಕ್ಯಾಮರ ಹೊಂದಿರುವ ಸ್ಯಾಮ್ ಸಂಗ್ ಜೆ7 ಡ್ಯುವೋ ಭಾರತದಲ್ಲಿ ಲಭ್ಯ
Published On :
ನವದೆಹಲಿ: ಸ್ಯಾಮ್ ಸಂಗ್ ಗ್ಯಾಲೆಕ್ಸಿ ಜೆ ಶ್ರೇಣಿಯಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ, ಡ್ಯುಯಲ್ ಕ್ಯಾಮರ ಹೊಂದಿರುವ ಸ್ಯಾಮ್ ಸಂಗ್ ಜೆ ಡ್ಯುವೋ  ಭಾರತದ ಮಾರುಕಟ್ಟೆ ಪ್ರವೇಶಿಸಿದೆ. 
16,990 ರೂಪಾಯಿ ಸ್ಯಾಮ್ ಸಂಗ್ ಡ್ಯುವೋ ಬೆಲೆಯಾಗಿದ್ದು, ಹಿಂಭಾಗದಲ್ಲಿ 13 ಮೆಗಾ ಪಿಕ್ಸಲ್ ಕ್ಯಮಾರಾ ಹಾಗೂ 5 ಮೆಗಾ ಪಿಕ್ಸಲ್ ಕ್ಯಾಮರ ಹೊಂದಿದ್ದು, ಮುಂಭಾಗದಲ್ಲಿ 8 ಮೆಗಾ ಪಿಕ್ಸಲ್ ಕ್ಯಾಮರ ಇದೆ. 
ಜೆ ಡ್ಯುವೋ ಬಿಡುಗಡೆ ನಾವು ನಮ್ಮ ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸುತ್ತೇವೆ ಎಂಬುದನ್ನು ತೋರುತ್ತದೆ ಎಂದು ಸ್ಯಾಮ್ ಸಂಗ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ಮೋಹನ್ ದೀಪ್ ಸಿಂಗ್ ಹೇಳಿದ್ದಾರೆ. 
ಕಪ್ಪು ಹಾಗೂ ಗೋಲ್ಡ್ ಬಣ್ಣಗಳಲ್ಲಿ ಸ್ಯಾಮ್ ಸಂಗ್ ಜೆ ಡ್ಯುವೋ ಮೊಬೈಲ್ ಲಭ್ಯವಿದ್ದು, 3000 ಎಂಎಹೆಚ್ ಬ್ಯಾಟರಿ ಸಾಮರ್ಥ್ಯ, 4 ಜಿಬಿ ರ್ಯಾಮ್, 32 ಜಿಪಿ ಇನ್ ಬಿಲ್ಟ್ ಹಾಗೂ 256 ಜಿಬಿ ವರೆಗೆ ವಿಸ್ತರಿಸಬಹುದಾದ  ಮೆಮೋರಿ ಹೊಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.