ಆಪಲ್ ನಿಂದ ಐಫೋನ್ ಎಕ್ಸ್ (ಟೆನ್) ಸೇರಿ ಮೂರು ಹೊಸ ಮಾದರಿ ಐಫೋನ್ ಗಳ ಬಿಡುಗಡೆ
ಆಪಲ್ ಸಂಸ್ಥೆ ಮಂಗಳವಾರ ಮೂರು ಹೊಸ ಐಫೋನ್ ಮಾದರಿಗಳನ್ನು ಅನಾವರಣ ಮಾಡಿದೆ.
Published On :
ಕ್ಯುಪರ್ಟಿನೋ: ಆಪಲ್ ಸಂಸ್ಥೆ ಮಂಗಳವಾರ ಮೂರು ಹೊಸ ಐಫೋನ್ ಮಾದರಿಗಳನ್ನು ಅನಾವರಣ ಮಾಡಿದೆ. ಅದರಲ್ಲಿ ಟಾಪ್ ಆಫ್ ಲೈಮ್ ಹ್ಯಾಂಡ್ ಸೆಟ್ ಸಹ ಸೇರಿದೆ. ನಾವು ಕಳೆದ 10 ವರ್ಷಗಳಲ್ಲಿ ಸಾಕಷ್ಟು ಮುಂದೆ ಸಾಗಿ ಬಂದಿದ್ದೇವೆ ಎಂದು ಸಂಸ್ಥೆಯ ಸಿಇಓ ವಿವರಿಸಿದರು.
ಸಂಸ್ಥೆಯ ಸ್ಥಾಪಕ ನಿರ್ದೇಶಕರಾಗಿದ್ದ ಸ್ಟೀವ್ ಜಾಬ್ಸ್ ಗೆ ನಾವು ಈ ಸಂದರ್ಭ ದಲ್ಲಿ ಗೌರವಾರ್ಪಣೆ ಮಾಡುತ್ತೇವೆ. ಈ 10 ವರ್ಷಗಳಲ್ಲಿ ಸಂಸ್ಥೆ ಸಾಕಷ್ಟು ಐಫೋನ್ ಗಳನ್ನು ಬಿಡುಗಡೆಗೊಳಿಸಿದೆ, ಈಗ ಬಿಡುಗಡೆಗೊಳಿಸುತ್ತಿರುವ ಐಫೋನ್ ಅತ್ಯಂತ ಲ್ಹೊಸ ಮಾಡೆಲ್ ಜತೆಗೆ ದುಬಾರಿ ಬೆಲೆಯದ್ದಾಗಿದೆ. ಈ ನೂತನ ಐಫೋನ್ ನ ಸರಣಿ ಹೆಸರು - ಐಫೋನ್ ಎಕ್ಸ್ (ಟೆನ್).
ಐಫೋನ್ ಟೆನ್ ಆನ್ ಮಾದಲು ಹೋಮ್ ಬಟನ್ ಇರುವುದಿಲ್ಲ, ಜತೆಗೆ ಇದು ಎಡ್ಜ್ ಟು ಎಡ್ಜ್ ಸ್ಕ್ರೀನ್ ಹೊಂದಿರುತ್ತದೆ. ಮತ್ತು ಫೋನ್ ಅನ್ಲಾಕ್ ಮಾಡಲು ಫಿಸಿಕಲ್ ರೆಕಗ್ನಿಷನ್ ಮಾಡುವ ತಂತ್ರವನ್ನು ಅಳವಡಿಸಲಾಗಿದೆ. ಎಂದು ಸಿಇಒ ಟಿಮ್ ಕುಕ್ ವಿವರಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆ ಆಪಲ್ ಹೊಸ ಐಫೋನ್ 8 ಅನ್ನು ಮತ್ತು ಕ್ಯಾಮೆರಾ, ಡಿಸ್ಪ್ಲೆಮತ್ತು ಸ್ಪೀಕರ್ ಅಪ್ ಡೇಟ್ ಗಳ ಜೊತೆಗೆ ಐಫೋನ್ 8 ಪ್ಲಸ್ ಅನ್ನು ಅನಾವರಣಗೊಳಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

