ಸೌರ ಮಂಡಲದ ಹೊಸ ಅತಿಥಿ ಒಮುಮಾಮುವಾ! ನಾಸಾ ವಿಜ್ಞಾನಿಗಳಿಂದ ಪತ್ತೆ
ಸೌರ ಮಂಡಲಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಅದೊಂದು ಕ್ಷುದ್ರಗ್ರಹವಾಗಿದ್ದು ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ವಿಜ್ಞಾನಿಗಳು 'ಕ್ಷುದ್ರಗ್ರಹ 1I/2017 U1........

Published On :
ವಾಷಿಂಗ್ ಟನ್: ಸೌರ ಮಂಡಲಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಅದೊಂದು ಕ್ಷುದ್ರಗ್ರಹವಾಗಿದ್ದು ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ವಿಜ್ಞಾನಿಗಳು 'ಕ್ಷುದ್ರಗ್ರಹ 1I/2017 U1 ಅಥವಾ ಒಮುಮಾಮುವಾ ಎಂದು ಹೆಸರಿಸಿದ್ದಾರೆ. ಹವಾಯಿ ಭಾಷೆಯಲ್ಲಿ 'ಒಮುಮಾಮುವಾ' ಎಂದರೆ 'ಬಹಳ ದೂರದಿಂದ ಬಂದ ಪ್ರಥಮ ಸಂದೇಶ' ಎಂದು ಅರ್ಥವಿದೆ.
ವಿಜ್ಞಾನಿಗಳು ಹೇಳುವಂತೆ ನಮ್ಮ ಸೌರ ಮಂಡಲದೊಳಕ್ಕೆ ಬೇರೆ ಸೌರ ಮಂಡಲದಿಂದ ಬಂದ ಮೊದಲ ಕ್ಷುದ್ರಗ್ರಹ ಇದು. ಈ ಕಾರಣಕ್ಕೆ ವಿಜ್ಞಾನಿಗಳು ಇದರ ಕುರಿತಂತೆ ಸಾಕಷ್ಟು ಕುತೂಹಲ ಬೆಳೆಸಿಕೊಂಡಿದ್ದಾರೆ.
ವೈಜ್ಞಾನಿಕವಾಗಿ ಇದೊಂದು ಮಹತ್ವದ ಸಂಶೋಧನೆ ಎಂದಿರುವ ನಾಸಾ ಮತ್ತೊಂದು ಸೌರಮಂಡಲದಿಂದ ಪ್ರತ್ಯೇಕವಾಗಿ ಸಾವಿರಾರು ವರ್ಷಗಳ ಕಾಲ ಕ್ರಮಿಸಿ ಬಂದಿರುವ ಈ ಕ್ಷುದ್ರಗ್ರಹ 400 ಮೀಟರ್ ಉದ್ದ, 40 ಮೀಟರ್ ಅಗಲವಾಗಿದೆ. ವಿಚಿತ್ರ ಆಕಾರದಿಂದ ಕೂಡಿರುವ ಇದನ್ನು ಅ.19 ರಂದು ಹವಾಯಿಯಲ್ಲಿನ AN STARRS1 ದೂರದರ್ಶಕದ ಮೂಲಕ ಗುರುತಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
NasaನಾಸಾastronomersOumuamuaobject from another starಒಮುಮಾಮುವಾಬೇರೆ ಸೌರಮಂದಲದಿಂದ ಬಂದ ಕ್ಷುದ್ರಗ್ರಹಖಗೋಳಶಾಸ್ತ್ರಜ್ಞರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


