ವಿಜ್ಞಾನ-ತಂತ್ರಜ್ಞಾನ

ಟ್ವೀಟರ್ ಬಳಕೆದಾರರು ಹೊಸ ನಿಯಮ ಉಲ್ಲಂಘಿಸಿದರೆ ವೆರಿಫಿಕೇಷನ್ ಬ್ಯಾಡ್ಜ್ ಗೆ ಕತ್ತರಿ!

ಬಳಕೆದಾರರು ಹೊಸ ನಿಯಮಗಳನ್ನು ಉಲ್ಲಂಘಿಸಿದರೆ ಅಂತವರ ವೆರಿಫಿಕೇಷನ್ ಬ್ಯಾಡ್ಜ್ ಅನ್ನು ತೆಗೆದುಹಾಕುವುದಾಗಿ ಟ್ವೀಟರ್ ಘೋಷಿಸಿದೆ...

ಟ್ವೀಟರ್ ಬಳಕೆದಾರರು ಹೊಸ ನಿಯಮ ಉಲ್ಲಂಘಿಸಿದರೆ ವೆರಿಫಿಕೇಷನ್ ಬ್ಯಾಡ್ಜ್ ಗೆ ಕತ್ತರಿ!
ಟ್ವೀಟರ್
Published On :
ಸ್ಯಾನ್ ಫ್ರಾನ್ಸಿಸ್ಕೋ: ಬಳಕೆದಾರರು ಹೊಸ ನಿಯಮಗಳನ್ನು ಉಲ್ಲಂಘಿಸಿದರೆ ಅಂತವರ ವೆರಿಫಿಕೇಷನ್ ಬ್ಯಾಡ್ಜ್ ಅನ್ನು ತೆಗೆದುಹಾಕುವುದಾಗಿ ಟ್ವೀಟರ್ ಘೋಷಿಸಿದ್ದು ಖಾತೆಯ ಪರಿಶೀಲನ ವ್ಯವಸ್ಥೆಯಲ್ಲಿ ಪುನಃ ಕಾರ್ಯನಿರ್ವಹಿಸುತ್ತಿದೆ ಎಂದಿದೆ. 
ಪರಿಶೀಲಿಸಿದ ಖಾತೆಗಳ ಆರಂಭಿಕ ಪರಿಶೀಲನೆಯನ್ನು ನಾವು ನಡೆಸುತ್ತಿದ್ದೇವೆ. ಈ ಹೊಸ ಮಾರ್ಗಸೂಚಿಗಳಲ್ಲಿನ ನಿಯಮಗಳನ್ನು ಯಾರು ಅನುಸರಿಸುವುದಿಲ್ಲವೋ ಅಂತಹವರ ಖಾತೆಗಳನ್ನು ತೆಗೆದು ಹಾಕುವುದಾಗಿ ಸಂಸ್ಥೆ ಹೇಳಿದೆ. 
ಹೊಸ ಪ್ರೋಗ್ರಾಂ ಕುರಿತಂತೆ ನಾವು ಕೆಲಸ ಮಾಡುತ್ತಿದ್ದೇವೆ. ಅವುಗಳ ಪರಿಶೀಲನೆಯನ್ನು ಮುಂದುವರಿಸುತ್ತೇವೆ ಮತ್ತು ಕ್ರಮಕೈಗೊಳ್ಳುತ್ತೇವೆ ಎಂದು official @TwitterSupport account ಪೋಸ್ಟ್ ಮಾಡಿದೆ. 
ಖಾತೆ ವೆರಿಫಿಕೇಷನ್ ಪ್ರಯೋಗವನ್ನು ಟ್ವೀಟರ್ ಈ ಹಿಂದೆ ಗಣ್ಯ ವ್ಯಕ್ತಿಗಳ ಹೆಸರಿನ ಪಕ್ಕದಲ್ಲಿ ನೀಲಿ ಬಣ್ಣದ ಗುರುತು ಅಮಾನುತ ಮಾಡಿತ್ತು. ವರ್ಜಿನಿಯಾದ ಚಾರ್ಲೋಟ್ಟೆಸ್ವಿಲ್ಲೆಯ ವ್ಯಕ್ತಿಯೊರ್ವರಿಗೆ ಸೇರಿದ ಖಾತೆಯ ಪರಿಶೀಲನೆ ಕುರಿತಂತೆ ಜನರು ಟೀಕಿಸಿದ್ದು ಆ ನಂತರ ಈ ಪ್ರಕರಣೆ ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.