ವಿಜ್ಞಾನ-ತಂತ್ರಜ್ಞಾನ

ಜಗತ್ತಿನಾದ್ಯಂತ ವಾಟ್ಸ್ ಆಪ್ ತಾಂತ್ರಿಕ ದೋಷ ಎದುರಿಸಿದ ಗ್ರಾಹಕರು

ಮೇ.17 ರಂದು ಜಗತ್ತಿನಾದ್ಯಂತ ಇರುವ ವಾಟ್ಸ್ ಆಪ್ ಗ್ರಾಹಕರು ತಾಂತ್ರಿಕ ದೋಷ ಎದುರಿಸಿದ್ದಾರೆ.

ಜಗತ್ತಿನಾದ್ಯಂತ ವಾಟ್ಸ್ ಆಪ್ ತಾಂತ್ರಿಕ ದೋಷ ಎದುರಿಸಿದ ಗ್ರಾಹಕರು
ವಾಟ್ಸ್ ಆಪ್
Published On :
ಲಂಡನ್: ಮೇ.17 ರಂದು ಜಗತ್ತಿನಾದ್ಯಂತ ಇರುವ ವಾಟ್ಸ್ ಆಪ್ ಗ್ರಾಹಕರು ತಾಂತ್ರಿಕ ದೋಷ ಎದುರಿಸಿದ್ದಾರೆ. 
ಮೆಸೇಜ್ ಗಳನ್ನು ಸ್ವೀಕರಿಸುವುದಕ್ಕೆ ಹಾಗೂ ಲಾಗ್ ಇನ್ ಆಗುವ ವಿಚಾರದಲ್ಲಿ ತಾಂತ್ರಿಕ ದೋಷ ಎದುರಿಸಿದ್ದು, ವಾಟ್ಸ್ ಆಪ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಇಂಡಿಪೆಂಡೆಂಟ್ ವರದಿ ಪ್ರಕಟಿಸಿದೆ. 
ಡೌನ್ ಡಿಟೆಕ್ಟರ್ ಎಂಬ ವೆಬ್ ಸೈಟ್ ನ ಪ್ರಕಾರ ಮಲೇಷ್ಯಾ ಹಾಗೂ ಸ್ಪೇನ್ ಗಳಲ್ಲಿ ಅತಿ ಹೆಚ್ಚು ತಾಂತ್ರಿಕ ದೋಷ ಎದುರಾದ ಪ್ರಕರಣಗಳು ವರದಿಯಾಗಿದ್ದು, ಕೆಲವೇ ವಾರಗಳಲ್ಲಿ ಎರಡನೇ ಬಾರಿಗೆ ಗ್ರಾಹಕರು ಈ ಸಮಸ್ಯೆ ಎದುರಿಸಿದ್ದಾರೆ ಎಂದು ತಿಳಿದುಬಂದಿದೆ. 
ಮೆಸೇಜ್ ಕಳಿಸುವುದಕ್ಕೆ ಹಾಗೂ ಸ್ವೀಕರಿಸುವುದಕ್ಕೆ ಸಾಧ್ಯವಾಗದೇ ತಾಂತ್ರಿಕ ದೋಷ ಎದುರಿಸಿದ್ದ ಗ್ರಾಹಕರು ಟ್ವಿಟರ್ ನಲ್ಲಿ ವಾಟ್ಸ್ ಆಪ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಬೇರೆ ಮೆಸೆಜಿಂಗ್ ಆಪ್ ಗೆ ವರ್ಗಾವಣೆಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಮಲೇಷ್ಯಾ ಹಾಗೂ ಸ್ಪೇನ್ ನಲ್ಲಿ ಆದಂತೆಯೇ ಜರ್ಮನಿ ಹಾಗೂ ಯೂರೋಪ್ ಗಳಲ್ಲೂ ಸಹ ವಾಟ್ಸ್ ಆಪ್ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.