ವಿಜ್ಞಾನ-ತಂತ್ರಜ್ಞಾನ

ನಿದ್ರಾ ಮಾಪಕ ಬೆಡ್ಡಿಟ್ ನ್ನು ಖರೀದಿಸಿದ ಆಪಲ್

ಅಮೆರಿಕ ಟೆಕ್ ಉದ್ಯಮದ ಅಗ್ರಗಣ್ಯ ಸಂಸ್ಥೆ ಆಪಲ್ ಬೆಡ್ಡಿಟ್ ಎಂಬ ಸ್ಲೀಪ್ ಮಾನಿಟರ್ (ನಿದ್ರಾ ಮಾಪಕ) ಸಾಧನ ಹಾಗೂ ಆಪ್ ನ್ನು ಖರೀದಿಸಿದೆ.

ನಿದ್ರಾ ಮಾಪಕ ಬೆಡ್ಡಿಟ್ ನ್ನು ಖರೀದಿಸಿದ ಆಪಲ್
ಬೆಡ್ಡಿಟ್
Published On :
ಅಮೆರಿಕ ಟೆಕ್ ಉದ್ಯಮದ ಅಗ್ರಗಣ್ಯ ಸಂಸ್ಥೆ ಆಪಲ್ ಬೆಡ್ಡಿಟ್ ಎಂಬ ಸ್ಲೀಪ್ ಮಾನಿಟರ್ (ನಿದ್ರಾ ಮಾಪಕ) ಸಾಧನ ಹಾಗೂ ಆಪ್ ನ್ನು ಖರೀದಿಸಿದೆ. 
ಖರೀದಿಯ ಮೊತ್ತ ಹಾಗೂ ಇನ್ನಿತರ ವಿವರಗಳು ಇನ್ನಷ್ಟೇ ಮಾಧ್ಯಮಗಳಿಗೆ ಸಿಗಬೇಕಿದೆ. ಕೆಲಸದ ಒತ್ತಡ, ಕುಟುಂಬದ ಸಮಸ್ಯೆ, ಆರ್ಥಿಕ  ಬಿಕ್ಕಟ್ಟು ಹೀಗೆ ಇನ್ನೂ ಅನೇಕ ಸಮಸ್ಯೆಗಳಿಂದಾಗಿ ಹಲವು ಜನರಿಗೆ ನಿದ್ರೆ ಬಾರದಂತಾಗಿರುವ ಪರಿಸ್ಥಿತಿ ಉಂಟಾಗಿದ್ದು,  ನಿದ್ರೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಲು ಸ್ಲೀಪ್ ಮಾನಿಟರ್ ನಿದ್ರಾ ಮಾಪಕ ಸಾಧನವನ್ನು ತಯಾರಿಸಲಾಗಿತ್ತು. 
ಫಿನ್‌ಲ್ಯಾಂಡ್‌ನ  ಹೆಲ್ಸಿಂಕಿ  (Helsinki) ವಿಶ್ವವಿದ್ಯಾಲಯದ ತಂತ್ರಜ್ಞರ ತಂಡ 2007 ರಲ್ಲಿ ಕಂಡು ಹಿಡಿದಿದ್ದ ‘ಬೆಡ್ಡಿಟ್’(Beddit) ಸಾಧನ ಹಾಗೂ ಆಪ್ ನ್ನು ಆಪಲ್ ಸಂಸ್ಥೆ ಖರೀದಿಸಿದೆ. ಬೆಡ್ಡಿಟ್ ಆಪ್ ವ್ಯಕ್ತಿಯ ನಿದ್ರೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನೂ ನಿಖರವಾಗಿ ಮೊಬೈಲ್‌ ನಲ್ಲಿರುವ ಆ್ಯಪ್‌ಗೆ ರವಾನಿಸುತ್ತದೆ. ಆ ಮಾಹಿತಿಗಳಿಗೆ ಅನುಗುಣವಾಗಿ ನಮ್ಮ ದೈನಂದಿನ ನಿದ್ರೆಯ ಪ್ರಮಾಣ ತಿಳಿಯುತ್ತದೆ. ಅಷ್ಟೇ ಅಲ್ಲದೇ ನಿದ್ರೆಗೆ ಬೇಕಾದ ಅಗತ್ಯ ಸಲಹೆ, ಸೂಚನೆಗಳನ್ನು ಈ ಆ್ಯಪ್ ನೀಡುತ್ತದೆ.
ಬೆಡ್ಡಿಟ್ ನ ವೆಬ್ ಸೈಟ್ ನಲ್ಲಿ ಈ ಸಾಧನವನ್ನು ಆಪಲ್ ಸಂಸ್ಥೆ ಖರೀದಿಸಿದೆ ಎಂಬ ಮಾಹಿತಿ ಅಪ್ ಡೇಟ್ ಆಗಿದ್ದು, ಬೆಡ್ಡಿಟ್ ಆಪ್ ನಲ್ಲಿರುವ ಮಾಹಿತಿಯನ್ನು ಆಪಲ್ ನ ಹೆಲ್ತ್ ಆಪ್ ನಲ್ಲಿಯೂ ಹಂಚಿಕೆ ಮಾಡಬಹುದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.