ವಾಟ್ಸಪ್ ಅಪ್ ಬಳಕೆದಾರರು ಇನ್ನು ತಮ್ಮ ನೆಚ್ಚಿನ ಚಾಟ್ ಆನ್ನು ಪಿನ್ ಮಾಡಬಹುದು!
ಖ್ಯಾತ ಮೆಸೆಜಿಂಗ್ ಆ್ಯಪ್ ವಾಟ್ಸಪ್ ಮತ್ತಷ್ಟು ಬಳಕೆದಾರ ಸ್ನೇಹಿಯಾಗುತ್ತಿದ್ದು, ನೂತನ ಅಪ್ ಡೇಟ್ ನಲ್ಲಿ ಬಳಕೆದಾರರು ತಮ್ಮ ನೆಚ್ಚಿನ ಚಾಟ್ ಅನ್ನು ಪಿನ್ ಮಾಡಿಕೊಂಡು ಮೊದಲು ವೀಕ್ಷಿಸಬಹುದಾಗಿದೆ.

ನವದೆಹಲಿ: ಖ್ಯಾತ ಮೆಸೆಜಿಂಗ್ ಆ್ಯಪ್ ವಾಟ್ಸಪ್ ಮತ್ತಷ್ಟು ಬಳಕೆದಾರ ಸ್ನೇಹಿಯಾಗುತ್ತಿದ್ದು, ನೂತನ ಅಪ್ ಡೇಟ್ ನಲ್ಲಿ ಬಳಕೆದಾರರು ತಮ್ಮ ನೆಚ್ಚಿನ ಚಾಟ್ ಅನ್ನು ಪಿನ್ ಮಾಡಿಕೊಂಡು ಮೊದಲು ವೀಕ್ಷಿಸಬಹುದಾಗಿದೆ.
ಈಗಾಗಲೇ ಸಾಕಷ್ಟು ಬಳಕೆದಾರ ಸ್ನೇಹಿ ಆಪ್ಶನ್ ಗಳ ಮೂಲಕ ಗ್ರಾಹಕರ ಗಮನ ಸೆಳೆದಿರುವ ಖ್ಯಾತ ಮೆಸೆಜಿಂಗ್ ಆ್ಯಪ್ ಮತ್ತೊಂದು ನೂತನ ಆಯ್ಕೆ ಮತ್ತು ಅಪ್ ಡೇಟ್ ನೊಂದಿಗೆ ಮತ್ತಷ್ಟು ಬಳಕೆದಾರ ಸ್ನೇಹಿಯಾಗಲಿದೆ. ನೂತನ ಅಪ್ ಡೇಟ್ ನಲ್ಲಿ ಬಳಕೆದಾರರು ತಮ್ಮ ನೆಚ್ಚಿನ ಚಾಟ್ ಗಳನ್ನು ಚಾಟ್ ಪಟ್ಟಿಯಲ್ಲಿ ಪಿನ್ ಮಾಡಬಹುದಾಗಿದೆ. ಹೀಗಿ ಪಿನ್ ಮಾಡಿದ ಚಾಟ್ ಮೊದಲ ಸ್ಥಾನದಲ್ಲಿ ಗೋಚರವಾಗಲಿದೆ.
ಈಗಾಗಲೇ ಇಂತಹ ಆಯ್ಕೆ ಫೇಸ್ ಬುಕ್ ನಲ್ಲಿದ್ದು, ನಮಗೆ ಇಷ್ಟವಾದ ಪೋಸ್ಟ್ ಗಳನ್ನು ನಾವು ಫೇಸ್ ಬುಕ್ ನಲ್ಲಿ ಪಿನ್ ಟು ಟಾಪ್ ಆಯ್ಕೆ ಮಾಡುವ ಮೂಲಕ ಮೊದಲಿಗೆ ಕಾಣುವಂತೆ ಮಾಡಬಹುದಾಗಿದೆ. ಸುದ್ದಿ ಸಂಸ್ಥೆಗಳು ಹಾಗೂ ಖ್ಯಾತನಾಮರು ತಮ್ಮ ಪ್ರಮುಖ ಪೋಸ್ಟ್ ಗಳನ್ನು ಪಿನ್ ಮಾಡುವ ಮೂಲಕ ಅದು ಹೆಚ್ಚು ಜನರ ತಲುಪುತಿತ್ತು. ಇದೀಗ ಇದೇ ಮಾದರಿಯನ್ನು ವಾಟ್ಸಪ್ ಕೂಡ ತನ್ನ ಚಾಟ್ ಆಯ್ಕೆಗೆ ಸೇರಿಸುತ್ತಿದ್ದು, ನೂತನ ವಾಟ್ಸಪ್ ಬೇಟಾ ವರ್ಷನ್ ನ .17.162 ಅಥವಾ 2.17.163ರಲ್ಲಿ ಲಭ್ಯವಾಗಲಿದೆ.
ಇದಲ್ಲದೇ ಚಾಟ್ ಅನ್ನು ಡಿಲೀಟ್ ಮಾಡುವ ಅಥವಾ ಮ್ಯೂಟ್ ಮಾಡುವ ಮತ್ತು ಆರ್ಕೈವ್ ಗೆ ಸೇರಿಸುವ ಆಯ್ಕೆ ಕೂಡ ಮುಂದುವರೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


