ಮೇಡ್ ಫಾರ್ ಇಂಡಿಯಾ ಸ್ಕೈಪ್ ಲೈಟ್ ಆಪ್ ಬಿಡುಗಡೆ ಮಾಡಿದ ಮೈಕ್ರೋಸಾಫ್ಟ್
ಭಾರತಕ್ಕಾಗಿಯೇ ಪ್ರತ್ಯೇಕವಾಗಿ ತಯಾರಿಸಲಾದ ಸ್ಕೈಪ್ ಲೈಟ್ ಆಪ್ ನ್ನು ಮೈಕ್ರೋಸಾಫ್ಟ್ ಸಂಸ್ಥೆ ಫೆ.22 ರಂದು ಬಿಡುಗಡೆ ಮಾಡಿದೆ.

Published On :
ಮುಂಬೈ: ಭಾರತಕ್ಕಾಗಿಯೇ ಪ್ರತ್ಯೇಕವಾಗಿ ತಯಾರಿಸಲಾದ ಸ್ಕೈಪ್ ಲೈಟ್ ಆಪ್ ನ್ನು ಮೈಕ್ರೋಸಾಫ್ಟ್ ಸಂಸ್ಥೆ ಫೆ.22 ರಂದು ಬಿಡುಗಡೆ ಮಾಡಿದೆ.
13 ಎಂಬಿ ಯಷ್ಟಿರುವ ಸ್ಕೈಪ್ ಲೈಟ್ ಆಪ್ ಆಂಡ್ರಾಯ್ಡ್ ನಲ್ಲಿ ಮಾತ್ರ ಲಭ್ಯವಿದ್ದು, ಡಾಟಾ ಉಳಿತಾಯಕ್ಕಾಗಿಯೇ ತಯಾರಿಸಲಾಗಿರುವ ಆಪ್ ಆಗಿದೆ ಎಂದು ಮೈಕ್ರೋಸಾಫ್ಟ್ ನ ಸಿಇಒ ಸತ್ಯ ನಾದೆಳ್ಲ ತಿಳಿಸಿದ್ದಾರೆ.
ಕಡಿಮೆ ಗಾತ್ರ ಹೊಂದಿರುವ ಆಪ್ ಭಾರತದ ಗುಜರಾತಿ, ಬೆಂಗಾಲಿ, ಹಿಂದಿ, ಮರಾಠಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಲಭ್ಯವಿದೆ. ಡಾಟಾ ಬಳಕೆಯನ್ನು ಕಡಿಮೆಗೊಳಿಸುವುದು ಹಾಗೂ ಎಷ್ಟು ಡಾಟಾ ಖರ್ಚಾಗಿದೆ ಎಂಬ ಬಗ್ಗೆ ಮಾಹಿತಿ ಪಡೆಯಬಹುದಾಗಿರುವುದು ಸ್ಕೈಪ್ ಲೈಟ್ ನ ವಿಶೇಷತೆಯಾಗಿದೆ. ಅಷ್ಟೇ ಅಲ್ಲದೇ ಇಂಟರ್ ನೆಟ್ ಬಳಕೆಯಲ್ಲಿಯೂ ಎರಡು ವಿಭಾಗಗಳಿದ್ದು, ಮೊಬೈಲ್ ಡಾಟಾ ಬಳಕೆ ಹಾಗೂ ವೈಫೈ ಡಾಟಾ ಬಳಕೆ ಎರಡರ ಬಗ್ಗೆಯೂ ಪ್ರತ್ಯೇಕ ಮಾಹಿತಿ ನೀಡುತ್ತದೆ.
ಫೋನ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳದೇ ಮಲ್ಟಿಮೀಡಿಯಾ ಫೈಲ್ ಗಳನ್ನು ಮತ್ತೊಬ್ಬರಿಗೆ ಫಾರ್ವರ್ಡ್(ಕಳಿಸುವುದು) ಮಾಡುವ ಆಯ್ಕೆ ಇರುವುದು ಸ್ಕೈಪ್ ಲೈಟ್ ನ ವಿಶೇಷಗಳಲ್ಲಿ ಒಂದಾಗಿದೆ. ಇಂಟಿಗ್ರೇಟೆಡ್ ಕಾಲಿಂಗ್ ವೈಶಿಷ್ಟ್ಯ ಹೊಂದಿರುವ ಸ್ಕೈಪ್ ಲೈಟ್ ಆಪ್ ನ್ನು ಡಿಫಾಲ್ಟ್ ಕಾಲಿಂಗ್ ಹಾಗೂ ಮೆಸೇಜಿಂಗ್ ಆಪ್ ನ್ನಾಗಿ ಬಳಕೆ ಮಾಡಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


