ಸಾಬ್ ನ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಯನ್ನು ನಿರ್ವಹಿಸಲಿರುವ ಹೆಚ್ಎಎಲ್
ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ತಯಾರಿಸಿರುವ ಧ್ರುವ್ ಅತ್ಯಾಧುನಿಕ ಲಘು ಹೆಲಿಕಾಫ್ಟರ್ ಗಾಗಿ ಸಾಬ್ ನ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಯನ್ನು ಹೆಚ್ಎಎಲ್ ನಿರ್ವಹಣೆ ಮಾಡಲಿದೆ.

Published On :
ಬೆಂಗಳೂರು: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ತಯಾರಿಸಿರುವ ಧ್ರುವ್ ಅತ್ಯಾಧುನಿಕ ಲಘು ಹೆಲಿಕಾಫ್ಟರ್ ಗಾಗಿ ಸಾಬ್ ನ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಯನ್ನು ಹೆಚ್ಎಎಲ್ ನಿರ್ವಹಣೆ ಮಾಡಲಿದೆ.
ಹೆಚ್ಎಎಲ್ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಯನ್ನು ನಿರ್ವಣೆ ಮಾಡುವುದನ್ನು ಸ್ವೀಡನ್ ದೇಶದ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಸಾಬ್ ತಿಳಿಸಿದೆ. ಹೆಚ್ಎಎಲ್ ನ ಏವಿಯಾನಿಕ್ಸ್ ವಿಭಾಗದೊಂದಿಗೆ ಸುಮಾರು 8.5 ಮಿಲಿಯನ್ (57 ಕೋಟಿ) ಮೊತ್ತದ ಒಪ್ಪಂದಕ್ಕೆ ಸ್ವೀಡನ್ ಕಂಪನಿ ಸಹಿ ಹಾಕಿದ್ದು, ಹೆಚ್ಎಎಲ್ ಐಡಿಎಎಸ್ ವ್ಯವಸ್ಥೆಯನ್ನು ನಿರ್ವಹಿಸಲಿದೆ ಎಂದು ಸಾಬ್ ಏರೋ ಇಂಡಿಯಾ-2017 ಎಕ್ಸ್ ಪೋ ನಲ್ಲಿ ತಿಳಿಸಿದೆ.
ಮಿಲಿಟರಿ ಯುದ್ಧ ವಿಮಾನವನ್ನು ಎದುರಾಗುವ ಕ್ಷಿಪಣಿ ದಾಳಿಗಳಿಂದ ರಕ್ಷಿಸಲು ಐಡಿಎಎಸ್ ವ್ಯವಸ್ಥೆ ಸಹಕಾರಿಯಾಗಿರಲಿದೆ. ತಂತ್ರಜ್ಞಾನ ವರ್ಗಾವಣೆ ಅಡಿಯಲ್ಲಿ ಹೆಚ್ಎಎಲ್ ಹಾಗೂ ಸಾಬ್ ಒಪ್ಪಂದಕ್ಕೆ ಸಹಿ ಹಾಕಿದ್ದು, ಹೈದರಾಬಾದ್ ನ ಹೆಚ್ಎಎಲ್ ಯುನಿಟ್ ಗೆ ತಂತ್ರಜ್ಞಾನವನ್ನು ವರ್ಗಾವಣೆ ಮಾಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
HALಹೆಚ್ಎಎಲ್SaabDhruvAdvanced Light Helicopterಸಾಬ್ ನ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಧ್ರುವ ಲಘು ಹೆಲಿಕಾಫ್ಟರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


