ಮೊದಲ ಬಾರಿಗೆ ಲೋಗೋವನ್ನು ಬದಲಿಸಿದ ಯುಟ್ಯೂಬ್
ಗೂಗಲ್-ಮಾಲೀಕತ್ವದ ಯುಟ್ಯೂಬ್ ಅದರ ಐಕಾನ್ ಲೋಗೋವನ್ನು ರಿಫ್ರೆಶ್ ಮಾಡಿದೆ

Published On :
ಸ್ಯಾನ್ ಫ್ರಾನ್ಸಿಸ್ಕೋ: ಗೂಗಲ್-ಮಾಲೀಕತ್ವದ ಯುಟ್ಯೂಬ್ ಅದರ ಐಕಾನ್ ಲೋಗೋವನ್ನು ರಿಫ್ರೆಶ್ ಮಾಡಿದೆ ಮತ್ತು ಅದರ ಡೆಸ್ಕ್ ಟಾಪ್ ಮತ್ತು ಅಪ್ಲಿಕೇಷನ್ ಗಳಿಗೆ ಪ್ರಮುಖ ಬದಲಾವಣೆಗಳನ್ನು ಪರಿಚಯಿಸಿದೆ.
ಯುಟ್ಯೂಬ್ ಇದೇ ಮೊದಲ ಬಾರಿಗೆ ತನ್ನ ಲೋಗೋ ಅಥವಾ ಚಿಹ್ನೆಯನ್ನು ಬದಲಿಸಿಕೊಂಡಿದೆ. ಲೋಗೊನೊಂದಿಗೆ ಬಳಕೆ ಮತ್ತು ಬಣ್ಣದಲ್ಲೂ ಕೆಲವು ಬದಲಾವಣೆ ಮಾಡಲಾಗಿದೆ.
ಈ ಹಿಂದಿನ ಲೋಗೋದಲ್ಲಿ ಬಿಳಿ ಬಣ್ಣದಲ್ಲಿದ್ದ 'ಟ್ಯೂಬ್' ಪದವನ್ನು ಕೆಂಪು ಬಣ್ಣ ಆವರಿಸಿತ್ತು ಹಾಗೂ 'ಯು' ಪದ ಕಪ್ಪು ಅಕ್ಷಗಳಿಂದ ಕೂಡಿತ್ತು.
ಪುಟ್ಟ ಪರದೆಗಳಲ್ಲಿಯೂ ಸ್ಪಷ್ಟವಾಗಿ ಕಾಣುವಂತೆ ಗೂಗಲ್ ಈಗ ಹೊಸ ಲೋಗೋ ವಿನ್ಯಾಸಗೊಳಿಸಿದೆ. ಕಪ್ಪು ಬಣ್ಣದ ಅಕ್ಷಗಳಿಂದ ಕೂಡಿರುವ ಯುಟ್ಯೂಬ್ ಪದ ಹಾಗೂ ಅದರ ಎಡಬದಿಗೆ ಪ್ಲೇ ಗುರುತು ಇಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


