ಫೇಸ್ ಬುಕ್ ನಲ್ಲಿ ದಿನಕ್ಕೆರಡು ಕಾಮೆಂಟ್ ಮಾಡಿ, ಚಿಂತೆಗಳನ್ನು ದೂರವಿಡಿ!
ಪ್ರತಿ ದಿನ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಎರಡು ಕಾಮೆಂಟ್ ಮಾಡುವುದು ನಿಮ್ಮ ಚಿಂತೆಗಳನ್ನೆಲ್ಲವನ್ನು ದೂರ ಮಾಡಬಲ್ಲದು ಎನ್ನುತ್ತಿದೆ ಹೊಸ ಸಂಶೋಧನೆ.

ನ್ಯೂಯಾರ್ಕ್: ಪ್ರತಿ ದಿನ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಎರಡು ಕಾಮೆಂಟ್ ಮಾಡುವುದು ನಿಮ್ಮ ಚಿಂತೆಗಳನ್ನೆಲ್ಲವನ್ನು ದೂರ ಮಾಡಬಲ್ಲದು ಎನ್ನುತ್ತಿದೆ ಹೊಸ ಸಂಶೋಧನೆ.
ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುವುದು ಭಾವನೆ, ಯೋಗಕ್ಷೇಮ ಮತ್ತು ತೃಪ್ತಿದಾಯಕ ಮನಸ್ಥಿತಿಯ ಮೇಲೆ ಪರಿಣಾಮ ಬೀರಲಿದೆ ಎಂದು ಪೆನ್ಸಿಲ್ವೇನಿಯಾದ ಪಿಟ್ಸ್ ಬರ್ಗ್ ನಲ್ಲಿರುವ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದ ಸಂಶೋಧನಾ ವರದಿ ತಿಳಿಸಿದೆ.
ತಮಗೆ ಪರಿಚಯವಿರುವವರು ತಮ್ಮ ಬಗ್ಗೆ ಮಾಡುವ ವ್ಯಕ್ತಿಗತ ಪೋಸ್ಟ್ ಗಳು ಅಥವಾ ಕಾಮೆಂಟ್ ಗಳಿಂದ ಜನರಿಗೆ ಸಂತೋಷವಾಗಲಿದ್ದು. ಫೇಸ್ ಬುಕ್ ನಲ್ಲಿ ಕಾಮೆಂಟ್ ಗಳ ಮೂಲಕ ಸಂವಹನ ನಡೆಸುವುದರಿಂದ ಚಿಂತೆಗಳು ದೂರವಾಗುತ್ತದೆ ಎಂದು ಅಧ್ಯಯನ ವರದಿ ಹೇಳಿದೆ.
ಕಂಪ್ಯೂಟರ್ ಮಿಡಿಯೇಟೆಡ್ ಕಮ್ಯುನಿಕೇಶನ್ ನ ಜರ್ನಲ್ ನಲ್ಲಿ ಅಧ್ಯಯನ ವರದಿ ಪ್ರಕಟವಾಗಿದ್ದು, 91 ರಾಷ್ಟ್ರಗಳ 1,910 ಫೇಸ್ ಬುಕ್ ಬಳಕೆದಾರರನ್ನು ಪ್ರತಿ ತಿಂಗಳಿಗೆ ಒಂದು ಬಾರಿಯಂತೆ ಮೂರೂ ತಿಂಗಳು ಸಮೀಕ್ಷೆಗೆ ಒಳಪಡಿಸಲಾಗಿದೆ, ಈ ಸಮೀಕ್ಷೆ ವೇಳೆ ಫೇಸ್ ಬುಕ್ ಸಂವಹನದಿಂದ ಮನಸ್ಸನ್ನು ಚಿಂತೆಯಿಂದ ದೂರವಿಡಬಹುದು ಎಂಬುದನ್ನು ಕಂಡುಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


