ಮೊಬೈಲ್ ಬ್ಯಾಟರಿಗಳಿಂದ ಹೊಮ್ಮುತ್ತಿದೆ 100 ಕ್ಕೂ ಹೆಚ್ಚು ವಿಧದ ವಿಷಕಾರಿ ಅನಿಲ!
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬ್ಯಾಟರಿಗಳು ಸಿಡಿಯುತ್ತಿರುವ ವರದಿಯ ಬೆನ್ನಲ್ಲೇ ಬ್ಯಾಟರಿಗಳಿಗೆ ಸಂಬಂಧಿಸಿದ ಮತ್ತೊಂದು ಆಘಾತಕಾರಿ ಅಧ್ಯಯನ ವರದಿ ಬಹಿರಂಗವಾಗಿದೆ.

ಲಂಡನ್: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬ್ಯಾಟರಿಗಳು ಸಿಡಿಯುತ್ತಿರುವ ವರದಿಯ ಬೆನ್ನಲ್ಲೇ ಬ್ಯಾಟರಿಗಳಿಗೆ ಸಂಬಂಧಿಸಿದ ಮತ್ತೊಂದು ಆಘಾತಕಾರಿ ಅಧ್ಯಯನ ವರದಿ ಬಹಿರಂಗವಾಗಿದೆ.
ಸ್ಮಾರ್ಟ್ ಫೋನ್, ಟ್ಯಾಬ್ ಲೆಟ್ ಸೇರಿದಂತೆ ಜನರು ಪ್ರತಿ ದಿನ ಬಳಸುವ ಉಪಕರಣಗಳ ಬ್ಯಾಟರಿಗಳಿಂದ ಅಪಾಯಕಾರಿ ಅನಿಲ ವಾತಾವರಣ ಸುರುತ್ತಿದೆ ಎಂದು ಎನ್ ಬಿಸಿ ಡಿಫೆನ್ಸ್ ಹಾಗೂ ಚೀನಾದ ತ್ಸಿಂಗುಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಲಿಥಿಯಂ ಅಯೋನ್ ಬ್ಯಾಟರಿಗಳಿಂದ 100 ಕ್ಕೂ ಹೆಚ್ಚು ವಿಧದ ವಿಷಕಾರಿ ಅನಿಲ ಹೊರಸೂಸಲ್ಪಡುತ್ತಿರುವುದನ್ನು ಗುರುತಿಸಿರುವ ವಿಜ್ಞಾನಿಗಳು ತಮ್ಮ ಉಪಕರಣಗಳ ಬ್ಯಾಟರಿಯಿಂದ ಉತ್ಪಾದನೆಯಾಗಿಟ್ಟುರುವ ಹಲವು ವಿಧದ ಅಪಾಯಕಾರಿ ಅನಿಲಗಳ ಬಗ್ಗೆ ಬಳಕೆದಾರರಿಗೆ ಅರಿವೇ ಇಲ್ಲ ಎಂದು ಹೇಳಿದ್ದಾರೆ.
ಬ್ಯಾಟರಿಗಳಿಂದ ಹೊರಸೂಸಲ್ಪಡುತ್ತಿರುವ ವಿಷಕಾರಿ ಅನಿಲಗಳಿಂದ ಚರ್ಮ, ಕಣ್ಣು, ಮೂಗು ಹಾಗೂ ವಾತಾವರಣಕ್ಕೆ ತೀವ್ರ ಹಾನಿ ಉಂಟು ಮಾಡುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. " ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಸರ್ಕಾರಗಳು ಲಿಥಿಯಂ ಅಯೋನ್ ಬ್ಯಾಟರಿಗಳನ್ನು ಉತ್ತೇಜಿಸುತ್ತಿವೆ. ಆದರೆ ಇವುಗಳಿಂದ 100 ಕ್ಕೂ ಹೆಚ್ಚು ವಿಧದ ವಿಷಕಾರಿ ಅನಿಲ ಹೊರಬರುತ್ತಿದೆ. 2006 ರಲ್ಲಿ ಡೆಲ್ ಸಂಸ್ಥೆ 4 ಮಿಲಿಯನ್ ಲ್ಯಾಪ್ ಟಾಪ್ ಗಳನ್ನು ಗ್ರಾಹಕರಿಂದ ವಾಪಸ್ ಪಡೆದಿತ್ತು. ಪ್ರಸಕ್ತ ವರ್ಷದಲ್ಲಿ ಸ್ಯಾಮ್ ಸ್ಯಾಂಗ್ ನೋಟ್ 7 ಮೊಬೈಲ್ ಗಳಲ್ಲಿ ಬ್ಯಾಟರಿ ಸ್ಫೋಟಗೊಂಡಿದ್ದರ ಪರಿಣಾಮ ಸ್ಯಾಮ್ ಸಂಗ್ ಸಹ ಗ್ಯಾಲೆಕ್ಸಿ ನೋಟ್ 7 ಸರಣಿಯ ಮೊಬೈಲ್ ಗಳನ್ನು ಗ್ರಾಹಕರಿಂದ ವಾಪಸ್ ಪಡೆದಿದೆ. ಸ್ಮಾರ್ಟ್ ಫೋನ್, ಟ್ಯಾಬ್ ಲೆಟ್, ಗಳ ಬ್ಯಾಟರಿಗಳು ಸಂಪೂರ್ಣವಾಗಿ ಚಾರ್ಜ್ ಆಗಿದ್ದರೆ ಹೆಚ್ಚು ವಿಷಕಾರಿ ಅನಿಲಗಳನ್ನು ಹೊರಸೂಸುತ್ತವೆ. ಆದರೆ ಶೇ.50 ಹಾಗೂ ಅದಕ್ಕಿಂತ ಕಡಿಮೆ ಚಾರ್ಜ್ ಆಗಿದ್ದರೆ ಕಡಿಮೆ ಅನಿಲ ಹೊರಸೂಸುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಧ್ಯಯನ ವರದಿಯನ್ನು ಆಧರಿಸಿ ವಿಜಾನಿಗಳು ಲಿಥಿಯಂ ಅಯೋನ್ ಬ್ಯಾಟರಿಗಳ ಸುರಕ್ಷತೆಯನ್ನು ಹೆಚ್ಚಿಸುವುದರ ಬಗ್ಗೆ ಮತ್ತಷ್ಟು ಸಂಶೋಧನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


