ಪೃಥ್ವಿ-೨ ಜೋಡಿ ಕ್ಷಿಪಣಿ ಯಶಸ್ವಿ ಪರೀಕ್ಷೆ ನಡೆಸಿದ ಭಾರತ
ದೇಶೀಯವಾಗಿ ಅಭಿವೃದ್ಧಿಪಡಿಸಿರುವ, ಅಣುಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಪೃಥ್ವಿ-೨ ಜೋಡಿ ಕ್ಷಿಪಣಿಯನ್ನು ಒರಿಸ್ಸಾದ ಚಂಡಿಪುರ್ ನಿಂದ ಭಾರತ ಸೋಮವಾರ ಯಶಸ್ವಿಯಾಗಿ

Published On :
ಭುವನೇಶ್ವರ: ದೇಶೀಯವಾಗಿ ಅಭಿವೃದ್ಧಿಪಡಿಸಿರುವ, ಅಣುಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಪೃಥ್ವಿ-೨ ಜೋಡಿ ಕ್ಷಿಪಣಿಯನ್ನು ಒರಿಸ್ಸಾದ ಚಂಡಿಪುರ್ ನಿಂದ ಭಾರತ ಸೋಮವಾರ ಯಶಸ್ವಿಯಾಗಿ ಪರೀಕ್ಷಿಸಿದೆ.
ಮಧ್ಯಮ ವ್ಯಾಪ್ತಿಯ ನೆಲದಿಂದ ನೆಲಕ್ಕೆ ಜಿಗಿರುವ ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸೇನೆ ಸುಮಾರು ಬೆಳಗ್ಗೆ ೯:೩೫ ಕ್ಕೆ ಯಶಸ್ವಿಯಾಗಿ ಪರೀಕ್ಷಿಸಿತು ಎಂದು ಮೂಲಗಳು ತಿಳಿಸಿವೆ.
೩೫೦ ಕಿಮಿ ದೂರದ ಗುರಿಗೆ ಹೊಡೆಯುವ ಶಕ್ತಿ ಹೊಂದಿರುವ ಈ ಕ್ಷಿಪಣಿಗಳು ೫೦೦ ರಿಂದ ೧೦೦೦ ಕೆಜಿ ಭಾರದ ಶಸ್ತ್ರಾಸ್ತ್ರಗಳನ್ನು ಹೊರಬಲ್ಲವಾಗಿವೆ ಮತ್ತು ಇವುಗಳಿಗೆ ಜೋಡಿ ಎಂಜಿನ್ ಗಳನ್ನೂ ಕೂಡಿಸಲಾಗಿದೆ.
ಈ ಸಂಪೂರ್ಣ ಚಟುವಟಿಕೆಗಳನ್ನು ಸೇನೆಯ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ನಡೆಸಿದ್ದು, ಡಿ ಆರ್ ಡಿ ಒ ಮೇಲುಸ್ತುವಾರಿಯಲ್ಲಿ ಇದು ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


