ವಿಜ್ಞಾನ-ತಂತ್ರಜ್ಞಾನ

ಲಾವಾ ಕಂಪನಿಯಿಂದ ರೂ.6,299 ಗಳಿಗೆ ಟ್ಯಾಬ್ ಲೆಟ್ ಬಿಡುಗಡೆ

ದೇಶಿಯ ಮೊಬೈಲ್ ತಯಾರಕ ಕಂಪನಿ ಲಾವಾ 6,299 ರೂ ಗಳಿಗೆ ಹೊಸ ಟ್ಯಾಬ್ ಲೆಟ್ ನ್ನು ಬಿಡುಗಡೆ ಮಾಡಿದೆ.

ಲಾವಾ ಕಂಪನಿಯಿಂದ ರೂ.6,299 ಗಳಿಗೆ ಟ್ಯಾಬ್ ಲೆಟ್ ಬಿಡುಗಡೆ
Published On :
ನವದೆಹಲಿ: ದೇಶಿಯ ಮೊಬೈಲ್ ತಯಾರಕ ಕಂಪನಿ ಲಾವಾ 6,299 ರೂ ಗಳಿಗೆ ಹೊಸ ಟ್ಯಾಬ್ ಲೆಟ್ ಐವರಿ ಪಿಒಪಿ ನ್ನು ಬಿಡುಗಡೆ ಮಾಡಿದೆ. 
ಲಾವಾ ಹೊಸದಾಗಿ ಬಿಡುಗಡೆ ಮಾಡಿರುವ ಟ್ಯಾಬ್ಲೆಟ್ 7 ಇಂಚು ಹೆಚ್ ಡಿ ಡಿಸ್ಪ್ಲೆ, ನೆಮಾಟಿಕ್ ತಂತ್ರಜ್ಞಾನ ಹೊಂದಿದ್ದು, 1.0 ಗಿಗಾ ಹರ್ಟ್ಸ್ ಕೋರ್-ಪ್ರೊಸೆಸರ್, 1 ಜಿಬಿ ರಾಮ್, 32 ಜಿಬಿ ವರೆಗೆ ವಿಸ್ತರಿಸಬಹುದಾದ 16 ಜಿಬಿ ಆಂತರಿಕ ಮೆಮೊರಿ ಅಥವಾ ಇಂಟರ್ನಲ್ ಮೆಮೊರಿ ಹೊಂದಿದೆ. 
ಆಂಡ್ರಾಯ್ಡ್ 5.1 ಒಎಸ್ ನ್ನು ಹೊಂದಿರುವ ಲಾವಾ ಟ್ಯಾಬ್ ಲೆಟ್, ಹಲವು ವೈವಿಧ್ಯಮಯ ಆಯ್ಕೆಗಳನ್ನು ಹೊಂದಿದ್ದು ಜನರಿಗೆ ಮೆಚ್ಚುಗೆಯಾಗುವ ವಿಶ್ವಾಸವಿದೆ ಎಂದು ಸಂಸ್ಥೆಯ ಟ್ಯಾಬ್ ಲೆಟ್ ಹಾಗೂ ಐಟಿ ಉತ್ಪನ್ನಗಳ ವಿಭಾಗದ ಮುಖ್ಯಸ್ಥ ರಮಣ್ ಶರ್ಮ ಹೇಳಿದ್ದಾರೆ. ಲಾವಾ ಬಿಡುಗಡೆ ಮಾಡಿರುವ ಟ್ಯಾಬ್ ಲೆಟ್ 5 ಎಂಪಿ ಕ್ಯಾಮರಾ ಹಾಗೂ 3.2 ಎಂಪಿ ಮುಂಭಾಗದ ಕ್ಯಾಮರಾ ಹೊಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.