ಧರಿಸಲು ಸಾಧ್ಯವಾಗುವ ರೋಬೋಟ್ ತಯಾರಿಸುತ್ತಿರುವ ಹುಂಡೈ!
ಹುಂಡೈಸಂಸ್ಥೆ ಮಿಲಿಟರಿ ಹಾಗೂ ಉತ್ಪಾದನೆ ವಲಯದಲ್ಲಿ ಉಪಯೋಗವಾಗುವಂತಹ ವೇರಿಂಗ್ (ಧರಿಸಬಹುದಾದ) ರೋಬೋಟ್ ಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಸಿಯೋಲ್: ದಕ್ಷಿಣ ಕೊರಿಯಾದ ವಾಹನ ಉತ್ಪಾದಕ ಸಂಸ್ಥೆ ಹುಂಡೈ ಸಂಸ್ಥೆ ಮಿಲಿಟರಿ ಹಾಗೂ ಉತ್ಪಾದನೆ ವಲಯದಲ್ಲಿ ಉಪಯೋಗವಾಗುವಂತಹ ವೇರಿಂಗ್ (ಧರಿಸಬಹುದಾದ) ರೋಬೋಟ್ ಗಳನ್ನು ಅಭಿವೃದ್ಧಿಪಡಿಸುತ್ತಿದೆ.
ವಾಣಿಜ್ಯ ಉದ್ದೇಶಗಳಿಗಾಗಿ ತಯಾರಿಸಲಾಗಿರುವ ಈ ರೋಬೋಟ್ ಗಳು ವಸ್ತುಗಳ ಚಲನಶೀಲತೆಯನ್ನು ಹೆಚ್ಚಿಸುವುದು ಸೇರಿದಂತೆ ವಿಭಿನ್ನ ಕ್ಷೇತ್ರಗಳಲ್ಲಿ ಬಳಕೆಯಾಗಲಿವೆ ಎಂದು ಹುಂಡೈ ಸಂಸ್ಥೆ ತಿಳಿಸಿದೆ.

ಹಾಲಿವುಡ್ ಚಿತ್ರ ಐರನ್ ಮ್ಯಾನ್ ನಲ್ಲಿ ಕಾಣಸಿಗುವ ಉಡುಪಿನ ಮಾದರಿಯಲ್ಲೇ ಈ ಹುಂಡೈ ಸಂಸ್ಥೆಯೂ ವೇರಿಂಗ್( ಧರಿಸಬಹುದಾದ) ರೋಬೋಟ್ ನ್ನು ಅಭಿವೃದ್ಧಿಪಡಿಸಿದೆ.
ರೋಬೋಟ್ ನ್ನು ನಿಯಂತ್ರಿಸುವ ವ್ಯಕ್ತಿಯ ದೈಹಿಕ ಬಲವನ್ನು ಹೆಚ್ಚಿಸಿ 60 ಕೆಜಿಯಷ್ಟು ತೂಕವಿರುವ ವಸ್ತುವನ್ನು ಎತ್ತುವುದನ್ನು ಈ ರೋಬೋಟ್ ಸಾಧ್ಯಮಾಡಲಿದೆ ಎಂದು ತಿಳಿದುಬಂದಿದೆ. ದೈಹಿಕ ನ್ಯೂನತೆಗಳುಳ್ಳ ವ್ಯಕ್ತಿಗಳಿಗೆ ಹಾಗೂ ವೃದ್ಧರಿಗೆ ಈ ರೋಬೋಟ್ ನಿಂದ ಸಾಕಷ್ಟು ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


