1 ,284 ಹೊಸ ಗ್ರಹಗಳನ್ನು ಪತ್ತೆ ಮಾಡಿದ ನಾಸಾದ ಕೆಪ್ಲರ್!
ನಾಸಾದ ದೂರದರ್ಶಕ ಕೆಪ್ಲರ್ 1,284 ಹೊಸ ಗ್ರಹಗಳನ್ನು ಪತ್ತೆ ಮಾಡಿದ್ದು ಮತ್ತೊಂದು ಭೂಮಿಯನ್ನು ಪತ್ತೆ ಮಾಡುವ ವಿಜ್ಞಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ವಾಷಿಂಗ್ ಟನ್: ನಾಸಾದ ದೂರದರ್ಶಕ ಕೆಪ್ಲರ್ 1,284 ಹೊಸ ಗ್ರಹಗಳನ್ನು ಪತ್ತೆ ಮಾಡಿದ್ದು ಮತ್ತೊಂದು ಭೂಮಿಯನ್ನು ಪತ್ತೆ ಮಾಡುವ ವಿಜ್ಞಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
ಭೂಮಿ ಇರುವ ಸೌರಮಂಡಲದ ಹೊರಗೆ ಕೆಪ್ಲರ್ ದೂರದರ್ಶಕ ಪತ್ತೆ ಮಾಡಿರುವ 1,284 ವಸ್ತುಗಳೂ ಗ್ರಹಗಳೇ ಎಂಬುದನ್ನು ಪ್ರಿನ್ಸ್ಟನ್ ವಿಶ್ವವಿದ್ಯಾಲಯ ಹಾಗೂ ನಾಸಾ ಸ್ಪಷ್ಟಪಡಿಸಿದೆ. ವಾಶಿಂಗ್ ಟನ್ ನಲ್ಲಿರುವ ನಾಸಾದ ವಿಜ್ಞಾನಿ ಎಲ್ಲಾನ್ ಸ್ಟೋಫಾನ್, ಇದೂ ಸೇರಿದಂತೆ ಕೆಪ್ಲರ್ ಈವರೆಗೂ 2 ,300 ಗ್ರಹಗಳನ್ನು ಪತ್ತೆ ಮಾಡಿದೆ ಎಂದು ತಿಳಿಸಿದ್ದಾರೆ.
ಕೆಪ್ಲರ್ ನ ಈ ಅನ್ವೇಷಣೆ, ಮತ್ತೊಂದು ಭೂಮಿಯನ್ನು ಮುಂದೊಂದು ದಿನ ಶೋಧಿಸಲು ಸಹಕಾರಿಯಾಗಲಿದೆ ಎಂದು ಸ್ಟೋಫಾನ್ ಅಭಿಪ್ರಾಯಪಟ್ಟಿದ್ದಾರೆ. ಕೆಪ್ಲರ್ ಗುರುತಿಸುವ ಸಿಗ್ನಲ್ ಗಳನ್ನು ವಿಶ್ಲೇಷಿಸಲು ಪ್ರಿನ್ಸ್ಟನ್ ವಿಶ್ವವಿದ್ಯಾಲಯ ಹೊಸ ತಂತ್ರಜ್ಞಾನ ರೂಪಿಸಿದ್ದು ಈ ಮೂಲಕವೇ ಕೆಲ್ಪರ್ ಕಳಿಸುವ ಸಿಗ್ನಲ್ ಗಳನ್ನು ಆಧರಿಸಿ ಯಾವುದು ಗ್ರಹ- ಯಾವುದು ಗ್ರಹವಲ್ಲ ಎಂಬುದನ್ನು ವಿಶ್ಲೇಷಿಸುತ್ತದೆ. ವಾಸಯೋಗ್ಯ ಗ್ರಹಗಳ ಪತ್ತೆಗಾಗಿ 2009 ರಲ್ಲಿ ನಾಸಾ ಕೆಪ್ಲರ್ ಮಿಷನ್ ನ್ನು ಪ್ರಾರಂಭಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


