ವಿಜ್ಞಾನ-ತಂತ್ರಜ್ಞಾನ

ಇನ್‌ಸ್ಟಾಗ್ರಾಂನಲ್ಲಿ 'ಬಗ್' ಪತ್ತೆ ಹಚ್ಚಿದ 10ರ ಹರೆಯದ ಪೋರನಿಗೆ 10,000 ಡಾಲರ್ ಬಹುಮಾನ

ಹತ್ತರ ಹರೆಯದ ಬಾಲಕ ಇನ್‌ಸ್ಟಾಗ್ರಾಂನಲ್ಲಿರುವ 'ಬಗ್‌' ಪತ್ತೆ ಹಚ್ಚಿದ್ದು, ಈತನಿಗೆ ಫೇಸ್‌ಬುಕ್ ಕಂಪನಿ 10,000 ಡಾಲರ್ ...

ಇನ್‌ಸ್ಟಾಗ್ರಾಂನಲ್ಲಿ 'ಬಗ್' ಪತ್ತೆ ಹಚ್ಚಿದ 10ರ ಹರೆಯದ ಪೋರನಿಗೆ 10,000 ಡಾಲರ್ ಬಹುಮಾನ
ಇನ್‌ಸ್ಟಾಗ್ರಾಂ
Published On :
ವಾಷಿಂಗ್ಟನ್: ಹತ್ತರ ಹರೆಯದ ಬಾಲಕ ಇನ್‌ಸ್ಟಾಗ್ರಾಂನಲ್ಲಿರುವ 'ಬಗ್‌' ಪತ್ತೆ ಹಚ್ಚಿದ್ದು, ಈತನಿಗೆ ಫೇಸ್‌ಬುಕ್ ಕಂಪನಿ 10,000 ಡಾಲರ್ ( ಸರಿಸುಮಾರು 6.6 ಲಕ್ಷ ರು) ಬಹುಮಾನ ನೀಡಿದೆ. 
ಫೇಸ್ ಬುಕ್‌ನಲ್ಲಿಯೂ ಇದೇ ಕಂಪನಿಯ ಇನ್ನಿತರ ವೆಬ್‌ಸೈಟ್‌ಗಳಲ್ಲಿಯೂ ಇರುವ ಸುರಕ್ಷಾ ಲೋಪವನ್ನು ತೋರಿಸಿಕೊಡುವವರಿಗೆ ನೀಡುವ ಬಹುಮಾನ ನೀಡುವ 
ಬಿಗ್ ಬೌಂಡಿ ಎಂಬ ಯೋಜನೆಯನ್ನು ಪ್ರಸ್ತುತ ಕಂಪನಿ 5 ವರ್ಷಗಳ ಹಿಂದೆ ಆರಂಭಿಸಿತ್ತು. ಅತೀ ಹೆಚ್ಚು ಬಾರಿ ಸುರಕ್ಷಾ ಲೋಪಗಳನ್ನು ಪತ್ತೆ ಹಚ್ಚಿದವರು ಭಾರತೀಯರೇ ಆಗಿದ್ದರು.
ಈ ರೀತಿ ಬಹುಮಾನ ಪಡೆದವರಲ್ಲಿ ಅತೀ ಕಿರಿಯವ ಎಂದರೆ ಫಿನ್ ಲ್ಯಾಂಡ್‌ನ ಜಾನ್ ಎಂಬಾತ. ಇನ್‌ಸ್ಟಾಗ್ರಾಂನಲ್ಲಿ ಲಾಗಿನ್ ಮಾಡದೆಯೆ ಅಲ್ಲಿರುವ ಕಾಮೆಂಟ್‌ಗಳನ್ನು, ಫೋಟೋ ಶೀರ್ಷಿಕೆಗಳನ್ನು  ಡಿಲೀಟ್ ಮಾಡಲು ಸಾಧ್ಯವಾಗುವಂತೆ ಮಾಡುವ ಬಗ್‌ನ್ನು ಜಾನ್ ಎಂಬ ಹತ್ತರ ಹರೆಯದ ಈ ಪೋರ ಪತ್ತೆ ಹಚ್ಚಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.