ಬರೊಬ್ಬರಿ ಸಾವಿರ ಪ್ರೊಸೆಸರ್ ನ ಮೈಕ್ರೋಚಿಪ್ ಆವಿಷ್ಕರಿಸಿದ ವಿಜ್ಞಾನಿಗಳು
ಬರೊಬ್ಬರಿ ಒಂದು ಸಾವಿರ ಪ್ರೊಸೆಸರ್ ಗಳುಳ್ಳ ಜಗತ್ತಿನ ಮೊದಲ ಮೈಕ್ರೋ ಚಿಪ್ ಅನ್ನು ಅಮೆರಿಕದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ...

ಲಾಸ್ ಏಂಜಲೀಸ್: ಬರೊಬ್ಬರಿ ಒಂದು ಸಾವಿರ ಪ್ರೊಸೆಸರ್ ಗಳುಳ್ಳ ಜಗತ್ತಿನ ಮೊದಲ ಮೈಕ್ರೋ ಚಿಪ್ ಅನ್ನು ಅಮೆರಿಕದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.
ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ಈ ವಿಶೇಷ ಮೈಕ್ರೋ ಚಿಪ್ ಅನ್ನು ಅಭಿವೃದ್ಧಿ ಪಡಿಸಿದ್ದು, ಇದು ಪ್ರತೀ ಸೆಕೆಂಡಿಗೆ ಲಕ್ಷ ಕೋಟಿ ಸೂಚನೆಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ‘ಕಿಲೊಕೋರ್’ ಚಿಪ್ ಎಂದು ಕರೆಯಲಾಗುವ ಈ ಚಿಪ್ ನಲ್ಲಿ 62.1 ಕೋಟಿ ಟ್ರಾನ್ಸಿಸ್ಟರ್‌ಗಳಿದ್ದು, ಆಧುನಿಕ ಲ್ಯಾಪ್‌ಟಾಪ್‌ಗಳಿಗಿಂತ 100 ಪಟ್ಟು ಹೆಚ್ಚು ವೇಗವಾಗಿ ಮತ್ತು ದಕ್ಷತೆಯಿಂದ ಸೂಚನೆಗಳನ್ನು ನಿರ್ವಹಿಸಬಲ್ಲವು ಎಂದು ಹೇಳಲಾಗುತ್ತಿದೆ.
ಈ ವಿಶಿಷ್ಟ ಮೈಕ್ರೋ ಚಿಪ್ ಅಭಿವೃದ್ಧಿ ಪಡಿಸಿದ ತಂಡದ ಸದ್ಯಸ್ಯರಾದ ಬೆವೆನ್ ಬಾಸ್ ಅವರು ಹೇಳಿರುವಂತೆ, ಅತ್ಯಂತ ವೇಗವಾಗಿ ಕಾರ್ಯ ನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿದೆ. ಅಂತೆಯೇ ಸೆಕೆಂಡ್ ಗೆ ಲಕ್ಷ ಕೋಟಿ ಸೂಚನೆ ನಿರ್ವಹಿಸುವ ಚಿಪ್ ಇದಕ್ಕೇ ಕೇವಲ 0.7 ವ್ಯಾಟ್ ವಿದ್ಯುತ್ ಮಾತ್ರ ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ. ಅಂತೆಯೇ ಈ ವಿಶಿಷ್ಟ ಚಿಪ್ ವೈರ್ ಲೆಸ್ ಕೋಡಿಂಗ್ ಮತ್ತು ಡಿಕೋಡಿಂಗ್ ವ್ಯವಸ್ಥೆ ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಇಂತಹ ಚಿಪ್ ಗಳನ್ನು ಸಾಮಾನ್ಯವಾಗಿ ವೈಜ್ಞಾನಿಕ ಸಂಶೋಧನೆಗಳಿಗೆ ಮತ್ತು ವಾಣಿಜ್ಯಾತ್ಮಕ ಬಳಕೆ ಗೆ ಉಪಯೋಗಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


