ವಿಜ್ಞಾನ-ತಂತ್ರಜ್ಞಾನ

ಭದ್ರತೆ ದೃಷ್ಟಿ: ಗೂಗಲ್ ಸ್ಟ್ರೀಟ್ ವ್ಯೂವ್ ಗೆ ಕೇಂದ್ರ ನಕಾರ

ಭಾರತದ ಕೆಲವು ನಗರಗಳು, ಪ್ರವಾಸಿ ತಾಣಗಳು, ಗುಡ್ಡಗಳು ಮತ್ತು ನದಿಗಳನ್ನು ತನ್ನ ‘ಸ್ಟ್ರೀಟ್‌ ವ್ಯೂ’ ಸೇವೆಯಲ್ಲಿ ಸೇರಿಸುವ ಗೂಗಲ್‌ನ ಯೋಜನೆಗೆ ಗೃಹ ..

ಭದ್ರತೆ ದೃಷ್ಟಿ: ಗೂಗಲ್ ಸ್ಟ್ರೀಟ್ ವ್ಯೂವ್ ಗೆ ಕೇಂದ್ರ ನಕಾರ
ಗೂಗಲ್
Published On :

ನವದೆಹಲಿ: ಭಾರತದ ಕೆಲವು ನಗರಗಳು, ಪ್ರವಾಸಿ ತಾಣಗಳು, ಗುಡ್ಡಗಳು ಮತ್ತು ನದಿಗಳನ್ನು ತನ್ನ ‘ಸ್ಟ್ರೀಟ್‌ ವ್ಯೂ’ ಸೇವೆಯಲ್ಲಿ ಸೇರಿಸುವ ಗೂಗಲ್‌ನ ಯೋಜನೆಗೆ ಗೃಹ ಸಚಿವಾಲಯ ಭದ್ರತೆಯ ಕಾರಣ ಮುಂದಿಟ್ಟು ಅನುಮತಿ ನಿರಾಕರಿಸಿದೆ.

ಭಾರತೀಯ ನಗರಗಳು, ಪ್ರವಾಸಿ ಕೇಂದ್ರ, ಬೆಟ್ಟ, ನದಿಗಳನ್ನು ಎಲ್ಲ ಕೋನಗಳಲ್ಲಿ ವೀಕ್ಷಿಸಬಹುದಾದ ಗೂಗಲ್ ಪ್ರಸ್ತಾವನೆಯನ್ನು ಭಾರತ ತಿರಸ್ಕರಿಸಿದೆ. ಅದರಲ್ಲೂ ಪ್ರತಿ ರಸ್ತೆಗಳ ನೇರಾನೇರ ಚಿತ್ರಣವನ್ನು ನೀಡುವುದು ಬೇಡವೇ ಬೇಡ ಎಂದಿದೆ.

ಈ ಆ್ಯಪ್‌ಗೆ ಅನುಮತಿ ನೀಡಬೇಕೆಂದು ಗೂಗಲ್‌ ಕಂಪೆನಿ ಏಪ್ರಿಲ್ 2015 ರಂದು ಮನವಿ ಸಲ್ಲಿಸಿತ್ತು. ಆದರೆ ಈ ತಂತ್ರಜ್ಞಾನದ ಬಗ್ಗೆ ವಿವರವಾಗಿ ಅಧ್ಯಯನ ನಡೆಸಿದ ಬಳಿಕವೇ ನಿರ್ಧಾರಕ್ಕೆ ಬರಲು ಸಚಿವಾಲಯ ತೀರ್ಮಾನಿಸಿತ್ತು.

ಯೋಜನೆಗೆ ಅನುಮತಿ ನೀಡಿದರೆ ದೇಶದ ಭದ್ರತೆಯ ಜತೆ ರಾಜಿ ಮಾಡಿಕೊಂಡಂತಾಗುತ್ತದೆ’ ಎಂಬ ಕಾರಣಕ್ಕೆ ಅನುಮತಿ ನೀಡದಿರಲು ಸರ್ಕಾರ ನಿರ್ಧರಿಸಿದೆ. ರಕ್ಷಣಾ ಸಚಿವಾಲಯ ಈ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿತ್ತಲ್ಲದೆ ಇದರಿಂದ ದೇಶದ ಭದ್ರತೆಗೆ ಗಂಭೀರ ಅಪಾಯವಿದೆ ಎಂದು ಹೇಳಿದೆ.

2008ರಲ್ಲಿ ಮುಂಬೈ ಮೇಲೆ ನಡೆದ ದಾಳಿ ಮಾದರಿಯ ಭಯೋತ್ಪಾದಕ ದಾಳಿಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಭದ್ರತಾ ಸಂಸ್ಥೆಗಳು ಸರ್ಕಾರವನ್ನು ಎಚ್ಚರಿಸಿದ್ದವು.  ಗೂಗಲ್‌ ಈ ತಂತ್ರಜ್ಞಾನವನ್ನು 2007ರಲ್ಲಿ ಜಗತ್ತಿಗೆ ಪರಿಚಯಿಸಿತ್ತು. ಆರಂಭದಲ್ಲಿ ಅಮೆರಿಕದ ನಗರಗಳನ್ನು ಇದರಲ್ಲಿ ಸೇರಿಸಿತ್ತು. ಆ ಬಳಿಕ ಈ ಸೇವೆಯನ್ನು ಇತರ ದೇಶಗಳಿಗೂ ವಿಸ್ತರಿಸಿತ್ತು. ಅಮೆರಿಕ, ಕೆನಡಾ ಮತ್ತು ಯೂರೋಪಿನ ಹಲವಾರು ದೇಶಗಳಲ್ಲಿ ‘ಸ್ಟ್ರೀಟ್‌ವ್ಯೂ’ ಆ್ಯಪ್‌ ಸಾಕಷ್ಟು ಜನಪ್ರಿಯತೆ ಪಡೆದಿದೆ.

2011 ರಲ್ಲಿ ಗೂಗಲ್‌ ಭಾರತದಲ್ಲೂ ಇದನ್ನು ಪ್ರಾಯೋಗಿಕವಾಗಿ ಪರಿಚಯಿಸಿ ತಾಜ್‌ಮಹಲ್‌, ಕೆಂಪು ಕೋಟೆ ಮತ್ತು ಕುತುಬ್‌ ಮಿನಾರ್‌ ಸೇರಿದಂತೆ ಕೆಲವು ತಾಣಗಳನ್ನು ಆ್ಯಪ್‌ಗೆ ಸೇರಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.