ಮಾರ್ಕ್ ಜ್ಯೂಕರ್ ಬರ್ಗ್ ಟ್ವಿಟ್ಟರ್ ಮತ್ತು ಪಿಂಟರೆಸ್ಟ್ ಖಾತೆಗಳು ಹ್ಯಾಕ್
ಸಾಮಾಜಿಕ ಅಂತರ್ಜಾಲ ಫೇಸ್ಬುಕ್ ಸಹ ಸಂಸ್ಥಾಪಕ ಮತ್ತು ಸಿ ಇ ಒ ಮಾರ್ಕ್ ಜ್ಯೂಕರ್ ಬರ್ಗ್ ಅವರ ಟ್ವಿಟ್ಟರ್ ಮತ್ತು ಪಿಂಟರೆಸ್ಟ್ ಖಾತೆಗಳನ್ನು ಕಳೆದ ವಾರಾಂತ್ಯದಲ್ಲಿ ಹ್ಯಾಕ್ ಮಾಡಲಾಗಿದೆ ಎಂದು...

ನ್ಯೂಯಾರ್ಕ್: ಸಾಮಾಜಿಕ ಅಂತರ್ಜಾಲ ಫೇಸ್ಬುಕ್ ಸಹ ಸಂಸ್ಥಾಪಕ ಮತ್ತು ಸಿ ಇ ಒ ಮಾರ್ಕ್ ಜ್ಯೂಕರ್ ಬರ್ಗ್ ಅವರ ಟ್ವಿಟ್ಟರ್ ಮತ್ತು ಪಿಂಟರೆಸ್ಟ್ ಖಾತೆಗಳನ್ನು ಕಳೆದ ವಾರಾಂತ್ಯದಲ್ಲಿ ಹ್ಯಾಕ್ ಮಾಡಲಾಗಿದೆ ಎಂದು ಮಾಧ್ಯಮ ವರದಿ ತಿಳಿಸದೆ.
ಕೆಲವು ತಿಂಗಳ ಹಿಂದೆ ಲಿಂಕ್ಡಿನ್ ಪಾಸ್ವರ್ಡ್ ಗಳಿಗೆ ಸಂಬಂಧಿಸಿದಂತೆ ಇದ್ದ ತೊಂದರೆಯಿಂದ ಇದು ಸಾಧ್ಯವಾಗಿದೆ ಎಂದು 'ಅವರ್ ಮೈನ್ ಟೀಮ್' ಎಂದು ಹೇಳಿಕೊಂಡಿರುವ ಹ್ಯಾಕರ್ ತಂಡ ತಿಳಿಸಿದೆ ಎಂದು ಭಾನುವಾರ ಮಾಧ್ಯವೊಂದು ವರದಿ ಮಾಡಿದೆ.
ಇದಕ್ಕಾಗಿ 'ಅವರ್ ಮೈನ್ ಟೀಮ್' ನ ಟ್ವಿಟ್ಟರ್ ಖಾತೆಯನ್ನು ವಜಾಗೊಳಿಸಲಾಗಿದೆ.
"ಟ್ವಿಟ್ಟರ್ ನಮ್ಮ ಖಾತೆಯನ್ನು ವಜಾಗೊಳಿಸಿದೆ. ನಾವು ಅದನ್ನು ಹಿಂಪಡೆಯಲು ಪ್ರಯತ್ನಿಸುತ್ತೇವೆ ಸಾಧ್ಯವಾಗದಿದ್ದರೆ ಇದೆ ನಮ್ಮ ನೂತನ ಖಾತೆ" ಎಂದು 'ಅವರ್ ಮೈನ್ ಟೀಮ್' ಹೊಸ ಖಾತೆಯಿಂದ ಟ್ವೀಟ್ ಮಾಡಿದೆ.
ಕಳೆದ ತಿಂಗಳು ಹಲವಾರು ಲಿಂಕ್ಡಿನ್ ಖಾತೆಯ ಪಾಸ್ವರ್ಡ್ ಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


