ಕನ್ಯಾ ಸಂತಾನೋತ್ಪತ್ತಿ ಸರ್ಪಗಳಲ್ಲಿ ಸಾಮಾನ್ಯ: ಅಧ್ಯಯನ
ಪಾರ್ಥೆನೋಜೆನೆಸಿಸ್ ಎಂದು ಕರೆಯಲಾಗುವ ಲೈಂಗಿಕ ಕ್ರಿಯೆಯಿಲ್ಲದೆ ಸಂತಾನೋತ್ಪತ್ತಿ ಸರ್ಪಗಳಲ್ಲಿ ಸಾಮಾನ್ಯ ಎನ್ನುತ್ತದೆ ಹೊಸ ಅಧ್ಯಯನವೊಂದು.

ನ್ಯೂಯಾರ್ಕ್: ಪಾರ್ಥೆನೋಜೆನೆಸಿಸ್ ಎಂದು ಕರೆಯಲಾಗುವ ಲೈಂಗಿಕ ಕ್ರಿಯೆಯಿಲ್ಲದೆ ಸಂತಾನೋತ್ಪತ್ತಿ ಸರ್ಪಗಳಲ್ಲಿ ಸಾಮಾನ್ಯ ಎನ್ನುತ್ತದೆ ಹೊಸ ಅಧ್ಯಯನವೊಂದು.
ಆ ಸಂಶೋಧನೆ ಅಕಶೇರುಕಗಳ ವಿಕಸನದ ಸಿದ್ದಾಂತಕ್ಕೆ ಹೆಚ್ಚಿನ ಮಾಹಿತಿ ಒದಗಿಸಲು ಸಾಧ್ಯವಾಗಿದೆ.
ಸ್ವಾಭಾವಿಕ ಪ್ರದೇಶಗಳಲ್ಲಿ ವಾಸವಾಗಿರುವ ಬೋವಾ, ಪೈಥಾನ್, ಮಂಡಲ, ಕೆರೆ ಹಾವುಗಳ ಮೇಲೆ ನಡೆದಿರುವ ಈ ಸಂಶೋಧನೆಯಲ್ಲಿ ಹಿಂದಿನ ಸಿದ್ಧಾಂತಗಳನ್ನು ತಲೆಕೆಳಕು ಮಾಡುವ ಈ ಹೊಸ ಸಿದ್ಧಾಂತ ಬೆಳಕಿಗೆ ಬಂದಿದೆ.
ಈ ಸಂತಾನೋತ್ಪತ್ತಿ ಸಿದ್ಧಾಂತ ಇನ್ನೂ ಶೈಶಾವಸ್ಥೆಯಲ್ಲಿದ್ದು, ಈ ಸಂಶೋಧನೆ ಹಾವುಗಳಲ್ಲಿ ಪಾರ್ಥೆನೋಜೆನೆಸಿಸ್ ಹೇಗೆ ವಿಕಸನವಾಯಿತು ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅಗತ್ಯ ಮಾಹಿತಿ ಒದಗಿಸಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಈ ಅಧ್ಯಯನ ಬಯಲಾಜಿಕಲ್ ಜರ್ನಲ್ ಆಫ್ ದ ಲಿನ್ನೆಯನ್ ಸೊಸೈಟಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


