ಭೂಕಂಪನ ಪತ್ತೆಗೆ ಬಂತು ಹೊಸ ಆ್ಯಪ್
ಇನ್ನು ಮುಂದೆ ನಮ್ಮ ಮೊಬೈಲ್ ಮೂಲಕವೇ ನಾವು ಭೂಕಂಪನ ಪ್ರಮಾಣವನ್ನು ತಿಳಿಯಬಹುದಾಗಿದೆ. ಈ ಅತ್ಯುನ್ನತ ಆ್ಯಪ್ ಅನ್ನು ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದ ಬರ್ಕ್ಲಿ ಭೂಕಂಪಶಾಸ್ತ್ರೀಯ ಪ್ರಯೋಗ..

ಈಗಂತೂ ಸ್ಮಾರ್ಟ್ ಫೋನ್ ಯುಗ. ನಮಗೇನೇ ಮಾಹಿತಿ ಬೇಕಿದ್ದರೂ ಬೆರಳ ತುದಿಯಲ್ಲೇ ದೊರೆಯುತ್ತದೆ. ಒಂದೊಂದು ಮಾಹಿತಿಗೂ ಒಂದು ಆ್ಯಪ್. ಇದೀಗ ಈ ಸರಣಿಗೆ ಹೊಸ ಆ್ಯಪ್ ವೊಂದು ಸೇರ್ಪಡೆಯಾಗಿದ್ದು, ಈ ಆ್ಯಪ್ ಸಾಮಾನ್ಯ ಆ್ಯಪ್ ಅಲ್ಲ. ಇದು ಭೂಕಂಪನವನ್ನು ಪತ್ತೆ ಮಾಡುವ ಬಹುಪಯೋಗಿ ಆ್ಯಪ್. ಹಿಂದೆಲ್ಲಾ ಎಲ್ಲೆಲ್ಲಿ ಭೂಕಂಪನವಾಗಿದೆ. ಎಷ್ಟರಮಟ್ಟಿಗೆ ಭೂಕಂಪನ ಸಂಭವಿಸಿದೆ ಎಂದು ತಿಳಿಯಲು ನಾವು ಒಂದೋ ಹವಾಮಾನ ಇಲಾಖೆ ಅಥವಾ ಭೂಕಂಪನ ಮಾಪನ ಇಲಾಖೆಯಿಂದ ತಿಳಿಯಬೇಕಿತ್ತು.
ಇನ್ನು ಮುಂದೆ ನಮ್ಮ ಮೊಬೈಲ್ ಮೂಲಕವೇ ನಾವು ಭೂಕಂಪನ ಪ್ರಮಾಣವನ್ನು ತಿಳಿಯಬಹುದಾಗಿದೆ. ಈ ಅತ್ಯುನ್ನತ ಆ್ಯಪ್ ಅನ್ನು ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದ ಬರ್ಕ್ಲಿ ಭೂಕಂಪಶಾಸ್ತ್ರೀಯ ಪ್ರಯೋಗಾಲಯದ ತಜ್ಞರು ಅಭಿವೃದ್ಧಿಪಡಿಸಿದ್ದು, ಈ ಅತ್ಯಾಧುನಿಕ ಆ್ಯಪ್ ನ ಸಹಾಯದಿಂದಾಗಿ ನಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಭೂಕಂಪನದ ಪ್ರಮಾಣವನ್ನು ಕಂಡು ಹಿಡಿಯಬಹುದಾಗಿದೆ. ಅಲ್ಲದೆ ಮೊಬೈಲ್ ನಲ್ಲಿರುವ ಜಿಪಿಎಸ್ ತಂತ್ರಜ್ಞಾನದ ಮೂಲಕ ಭೂಕಂಪನದ ಕೇಂದ್ರ ಬಿಂದುವನ್ನು ಕೂಡ ನಿಖರವಾಗಿ ಗುರುತಿಸಬಹುದು ಎಂದು ಇದನ್ನು ಅಭಿವೃದ್ಧಿ ಪಡಿಸಿರುವ ಬರ್ಕ್ಲಿ ಭೂಕಂಪಶಾಸ್ತ್ರೀಯ ಪ್ರಯೋಗಾಲಯದ ತಜ್ಞರು ಹೇಳಿದ್ದಾರೆ.
ಬರ್ಕ್ಲಿ ಭೂಕಂಪಶಾಸ್ತ್ರೀಯ ಪ್ರಯೋಗಾಲಯದ ತಜ್ಞ ಅಭಿವೃದ್ಧಿಪಡಿಸಿರುವ ಈ ಅ್ಯಪ್ ಅನ್ನು ಮೈಶೇಕ್ ಎಂದು ನಾಮಕರಣ ಮಾಡಲಾಗಿದ್ದು, ಪ್ರಸ್ತುತ ಇದನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿಯೂ ಬಿಡುಗಡೆ ಮಾಡಲಾಗಿದೆ. ಎಲ್ಲ ಬಗೆಯ ಆ್ಯಂಡ್ರಾಯ್ಡ್ ಫೋನ್ ಗಳಲ್ಲಿ ಇದು ಕಾರ್ಯನಿರ್ವಹಿಸಬಹುದಾಗಿದ್ದು, ಬ್ಯಾಕ್ ಗ್ರೌಂಡ್ ಅಪ್ಲಿಕೇಷನ್ ನಂತೆ ಇದು ತನ್ನ ಕಾರ್ಯವನ್ನು ನಿರಂತರವಾಗಿ ಮಾಡುತ್ತದೆ. ಮೊಬೈಲ್ ಇರುವ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ರೀತಿಯ ಸಣ್ಣಪುಟ್ಟ ಕಂಪನಗಳ ಸಂಭವಿಸಿದರೂ ಇದು ತಕ್ಷಣವೇ ರೆಕಾರ್ಡ್ ಮಾಡಿಕೊಳ್ಳುತ್ತದೆ.
ಅಲ್ಲದೆ ಅದರ ಪ್ರಮಾಣವನ್ನು ಮೊಬೈಲ್ ನಲ್ಲಿ ತೋರಿಸುತ್ತದೆ. ಸಾಮಾನ್ಯವಾಗಿ ಆ್ಯಂಡ್ರಾಯ್ಡ್ ಫೋನ್ ಗಳಲ್ಲಿ ಗೇಮ್ ಗಳಿಗೆ ಬಳಕೆ ಮಾಡಲಾಗುವ ಆಕ್ಸಲೆರೋ ಮೀಟರ್ ಗಳನ್ನೇ ಬಳಕೆ ಮಾಡಿಕೊಂಡು ಕಂಪನದ ತೀವ್ರತೆಯನ್ನು ಅಳೆಯಬಹುದಾಗಿದೆ ಎಂದು ತಜ್ಞರು ಹೇಳಿದ್ದಾರೆ. ಕಂಪನ ಹಲವು ಕಿಲೋಮೀಟರ್ ದೂರದಲ್ಲಿ ಸಂಭವಿಸಿದರೂ ಇದು ಮೊದಲೇ ಎಚ್ಚರಿಕೆ ರವಾನಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


