ವಿಜ್ಞಾನ-ತಂತ್ರಜ್ಞಾನ

ಹೆಚ್ ಎಎಲ್ ನಿಂದ ಹೆಚ್ ಟಿಟಿ-40 ಮೊದಲ ಮಾದರಿ ಬಿಡುಗಡೆ: ಮೇಕ್ ಇನ್ ಇಂಡಿಯಾ ಸಂಬಂಧ ಮಹತ್ವದ ಹೆಜ್ಜೆ

ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಹೆಚ್ ಎಎಲ್ ) ಹಿಂದುಸ್ಥಾನ್ ಟರ್ಬೊ ಪ್ರೋಪ್ ಟ್ರೈನರ್( ಹೆಚ್ ಟಿಟಿ-40 ) ರ ಮೊದಲ ಮಾದರಿಯನ್ನು ಬಿಡುಗಡೆ ಮಾಡಿದೆ.

ಹೆಚ್ ಎಎಲ್ ನಿಂದ ಹೆಚ್ ಟಿಟಿ-40 ಮೊದಲ ಮಾದರಿ ಬಿಡುಗಡೆ: ಮೇಕ್ ಇನ್ ಇಂಡಿಯಾ ಸಂಬಂಧ ಮಹತ್ವದ ಹೆಜ್ಜೆ
ಹೆಚ್ ಟಿಟಿ-40
Published On :

ಬೆಂಗಳೂರು: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಹೆಚ್ ಎಎಲ್)  ಹಿಂದುಸ್ಥಾನ್ ಟರ್ಬೊ ಪ್ರೋಪ್ ಟ್ರೈನರ್( ಹೆಚ್ ಟಿಟಿ-40 ) ರ ಮೊದಲ ಮಾದರಿಯನ್ನು ಬಿಡುಗಡೆ ಮಾಡಿದೆ.
ಹೆಚ್ ಟಿ ಟಿ-40 ತರಬೇತಿ ನೀಡುವುದಕ್ಕೆ ಬಳಸಲಾಗುವ ವಿಮಾನವಾಗಿದ್ದು ಎರಡು ಆಸನಗಳನ್ನು ಮಾತ್ರ ಹೊಂದಿದೆ. ಹೆಚ್ ಟಿಟಿ-40 ಬಗ್ಗೆ ಹೆಚ್‌ಎಎಲ್‌ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಟಿ. ಸುವರ್ಣ ರಾಜು ಮಾತನಾಡಿದ್ದು, ಹೆಚ್ ಟಿಟಿ-40 ಮೊದಲ ಮಾದರಿಯ ನಿರ್ಮಾಣದ  ಶ್ರಮ ಹೆಚ್ ಎಎಲ್ ನಲ್ಲಿ ನಡೆಯುತ್ತಿರುವ ನವೀಕೃತ ಹಾಗೂ ಪುನಶ್ಚೇತನಗೊಳಿಸುವ ವಿಧಾನಗಳ ಸಂಕೇತವಾಗಿದೆ ಎಂದು ಹೇಳಿದ್ದಾರೆ. ಪೂರ್ಣಪ್ರಮಾಣದಲ್ಲಿ ನಿರ್ಮಾಣವಾಗಿರುವ ಹೆಚ್ ಟಿಟಿ-40 ನ್ನು ಮತ್ತಷ್ಟು ಆಧುನಿಕಗೊಳಿಸಿ ಶಸ್ತ್ರಸಜ್ಜಿತಗೊಳಿಸಲಾಗುವುದು ಎಂದು ಟಿ ಸುವರ್ಣ ರಾಜು ತಿಳಿಸಿದ್ದಾರೆ.   
ಟರ್ಬೊ ಪ್ರೋಪ್ ಟ್ರೈನರ್ ಬಿಡುಗಡೆ ವೇಳೆ ಹೆಚ್ ಎ ಎಲ್ ನ ಆಡಳಿತಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಪ್ರಾಥಮಿಕ ಹಂತದ ಹಾರಾಟಕ್ಕೆ ಟರ್ಬೊ ಪ್ರೋಪ್ ಟ್ರೈನರ್ ಸಿದ್ಧಗೊಂಡಿದ್ದು, ರೂಕಿ ಪೈಲಟ್ ಗಳಿಗೆ ಮೊದಲ ಹಂತದ ತರಬೇತಿ ನೀಡಲು ಹೆಚ್ ಟಿ ಟಿ-40 ಯನ್ನು ಬಳಕೆ ಮಾಡಲಾಗುತ್ತದೆ. ಹೆಚ್ ಟಿ ಟಿ-40  ಬಿಡುಗಡೆ  ಮೇಕ್ ಇನ್ ಇಂಡಿಯಾಗೆ ಸಂಬಂಧಿಸಿದಂತೆ ಹೆಚ್ಎಎಲ್ ನ ಮಹತ್ವದ ಹೆಜ್ಜೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.