ವಿಜ್ಞಾನ-ತಂತ್ರಜ್ಞಾನ

ಎಚ್ಚರ! ನಿಷೇಧಿತ ಸೈಟ್ ಗಳಿಗಾಗಿ ಶೋಧ ನಡೆಸಿದರೆ 3 ವರ್ಷ ಜೈಲು

ಪೋರ್ನೋಗ್ರಫಿ, ಕಾನೂನು ಬಾಹಿರ ಅಂತರ್ಜಾಲ ಬಳಕೆ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ನಿಷೇಧಿತ ವೆಬ್ ಸೈಟ್ ಗಳಿಗಾಗಿ ಹುಡುಕಾಟ ನಡೆಸುವವರಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಕುರಿತು ನಿರ್ಧಾರ ಕೈಗೊಂಡಿದೆ.

ಎಚ್ಚರ! ನಿಷೇಧಿತ ಸೈಟ್ ಗಳಿಗಾಗಿ ಶೋಧ ನಡೆಸಿದರೆ 3 ವರ್ಷ ಜೈಲು
ವೆಬ್ ಸೈಟ್ ಗಳ ನಿಷೇಧ (ಸಂಗ್ರಹ ಚಿತ್ರ)
Published On :

ನವದೆಹಲಿ: ಪೋರ್ನೋಗ್ರಫಿ, ಕಾನೂನು ಬಾಹಿರ ಅಂತರ್ಜಾಲ ಬಳಕೆ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ನಿಷೇಧಿತ ವೆಬ್ ಸೈಟ್ ಗಳಿಗಾಗಿ ಹುಡುಕಾಟ ನಡೆಸುವವರಿಗೆ  3 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಕುರಿತು ನಿರ್ಧಾರ ಕೈಗೊಂಡಿದೆ.

ಕಾನೂನು ಬಾಹಿರ ಅಂತರ್ಜಾಲ ಬಳಕೆ ಕುರಿತಂತೆ ಕಠಿಣ ಕಾನೂನು ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರ ಕಳೆದ 2015ರ ಆಗಸ್ಟ್ ನಲ್ಲಿ 857ಕ್ಕೂ ಅಧಿಕ ಅನಧಿಕೃತ ವೆಬ್ ಸೈಟ್ ಗಳ  ಮೇಲೆ ನಿಷೇಧ ಹೇರಿತ್ತು. ಇದಲ್ಲದೆ 170ಕ್ಕೂ ಅಧಿಕ ಪೋರ್ನೋಗ್ರಫಿ ಸೈಟ್ ಗಳನ್ನು ಕೂಡ ಕೇಂದ್ರ ಸರ್ಕಾರ ಭಾರತದಲ್ಲಿ ನಿಷೇಧ ಹೇರಿತ್ತು. ಹೀಗಿದ್ದೂ ಪ್ರಾಕ್ಸಿ ಸರ್ವರ್ ಗಳ ಮೂಲಕ  ಅಂತರ್ಜಾಲ ಬಳಕೆದಾರರು ಈ ನಿಷೇಧಿತ ವೆಬ್ ಸೈಟ್ ಗಳ ಬಳಕೆ ಮಾಡುತ್ತಿರುವುದರಿಂದ ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.

ಈ ನಿಷೇಧಿತ ವೆಬ್ ಸೈಟ್ ಗಳ ಯುಆರ್ ಎಲ್ (URL) ಗಳನ್ನು ನಿಷೇಧ ಮಾಡುವುದಷ್ಟೇ ಅಲ್ಲದೇ ಈ ಯುಆರ್ ಎಲ್ ಗಳ ಶೋಧ ನಡೆಸುವವರ ವಿರುದ್ಧವೂ ಕೇಂದ್ರ ಸರ್ಕಾರ ದೂರು  ದಾಖಲಿಸಿಕೊಂಡು ಇಂತಹವರಿಗೆ 3 ವರ್ಷಗಳ ಜೈಲು ಶಿಕ್ಷೆವಿಧಿಸುವುದಾಗಿ ತಿಳಿಸಿದೆ. ಪ್ರಕರಣ ಗಂಭೀರವಾಗಿದ್ದರೆ ಜೈಲು ಶಿಕ್ಷೆಯೊಂದಿಗೆ 3 ಲಕ್ಷ ರು.ಗಳ ದಂಡ ವಿಧಿಸಲೂ ಕೂಡ ಸರ್ಕಾರ  ನಿರ್ಧರಿಸಿದೆ. ನಿಷೇಧಿತ ಯುಆರ್ ಎಲ್ ಗಳಿಗಾಗಿ ಜಾಲಾಡುವ ಕಂಪ್ಯೂಟರ್ ಗಳ ಐಪಿ ಅಡ್ರೆಸ್ ಜಾಡು ಹಿಡಿದು, ಅದರ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್ ಪೊಲೀಸರಿಗೆ  ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.