ಆ್ಯಪಲ್ ಸಂಸ್ಥೆಯ ಉತ್ಪನ್ನಗಳ ಬಗ್ ಸಂಶೋಧಕರಿಗೆ 2 ಲಕ್ಷ ಡಾಲರ್ ಬಹುಮಾನ
ಐಫೋನ್ ನಲ್ಲಿ ಸೂಕ್ಷ್ಮ ಬಗ್ ಕಂಡು ಹಿಡಿಯುವ ಸಂಶೋಧಕರಿಗೆ 2 ಲಕ್ಷ ಡಾಲರ್ ಬಹುಮಾನ ನೀಡುವುದಾಗಿ Apple Inc ಹೇಳಿದೆ. ಐಫೋನ್ ಮತ್ತು ಐಪ್ಯಾಡ್...

ಐಫೋನ್ ನಲ್ಲಿ ಸೂಕ್ಷ್ಮ ಬಗ್ ಕಂಡು ಹಿಡಿಯುವ ಸಂಶೋಧಕರಿಗೆ 2 ಲಕ್ಷ ಡಾಲರ್ ಬಹುಮಾನ ನೀಡುವುದಾಗಿ Apple Inc ಹೇಳಿದೆ. ಐಫೋನ್ ಮತ್ತು ಐಪ್ಯಾಡ್ ಉತ್ಪನ್ನಗಳಲ್ಲಿನ ನ್ಯೂನತೆಗಳನ್ನು ಕಂಡು ಹಿಡಿಯುವ ಸಂಶೋಧಕರಿಗೆ ಈ ಮೊತ್ತವನ್ನು ಆಫರ್ ಮಾಡಲಾಗಿದೆ.
ಐಫೋನ್ ಐದು ನಿರ್ದಿಷ್ಟ ವಿಭಾಗಗಳಲ್ಲಿನ ಭದ್ರತೆ ಬಗ್ ಕಂಡು ಹಿಡಿಯಲು 24 ಮಂದಿ ಸಂಶೋಧಕರನ್ನು ಆಪಲ್ ಸಂಸ್ಥೆ ಆಹ್ವಾನಿಸಿದೆ. ಈ ಹಿಂದೆ ಆ್ಯಪಲ್ ಐಫೋನ್ ನಲ್ಲಿನ ಬಗ್ ಕಂಡುಹಿಡಿದಿದ್ದ ಸಂಶೋಧಕರನ್ನೇ ಈ ಯೋಜನೆಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆ ಹೇಳಿದೆ.
ಐಫೋನ್ ಉತ್ಪನ್ನಗಳಲ್ಲಿ ನಿರ್ಧಿಷ್ಟ ಪ್ರೋಗ್ರಾಮ್ ಗಳನ್ನು ಮಾಡುವಂತೆ ಇತರೆ ಕಂಪನಿಗಳು ಉಪದೇಶ ನೀಡಿದ್ದು ಈ ಹಿನ್ನೆಲೆಯಲ್ಲಿ ಆ್ಯಪಲ್ ಸಂಸ್ಥೆ ಈ ನಿರ್ಧಾರಕ್ಕೆ ಬಂದಿವೆ.
ಪ್ರೋಗ್ರಾಂಗಳು ಮುಕ್ತವಾಗಿದ್ದರೆ ಅವುಗಳನ್ನು ನಿಭಾಯಿಸುವುದು ಕಷ್ಟದ ಕೆಲಸ. ಹೀಗಾಗಿ ನಿರ್ದಿಷ್ಟ ಮಟ್ಟದ ಪ್ರೋಗ್ರಾಮ್ ಗಳನ್ನು ಮಾಡಿದಾಗ ಭದ್ರತಾ ಬಗ್ ನಿಂದ ಸುರಕ್ಷಿಸಬಹುದಾಗಿದೆ ಎಂದು ಭದ್ರತಾ ವಿಶ್ಲೇಷಕ ರಿಚ್ ಮೊಗುಲ್ ಹೇಳಿದ್ದಾರೆ.
ಜಗತ್ತಿನಾದ್ಯಂತ ಮುಕ್ತ ಪ್ರೋಗ್ರಾಂಗಳನ್ನು ಹೊಂದಿರುವ ಫೇಸ್ ಬುಕ್ ಕಳೆದ 5 ವರ್ಷದಲ್ಲಿ ಬಗ್ ಕಂಡುಹಿಡಿದ ಸಂಶೋಧಕರಿಗೆ ಸರಿಸುಮಾರು 4 ಬಿಲಿಯನ್ ಹಣವನ್ನು ವ್ಯಹಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


