ಈಗೀಗ ಹಿರಿಯ ನಾಗರಿಕರಿಗೂ ಫೇಸ್ ಬುಕ್ ಅಂದ್ರೆ ಇಷ್ಚ
2004 ರಲ್ಲಿ ಪ್ರಾರಂಭವಾದ ಸಾಮಾಜಿಕ ಜಾಲತಾಣ ಫೇಸ್ ಬುಕ್, ಈ ವರೆಗೂ ಯುವಜನರನ್ನು ಮಾತ್ರ ಸೆಳೆಯುತ್ತಿತ್ತು.

ವಾಷಿಂಗ್ ಟನ್: 2004 ರಲ್ಲಿ ಪ್ರಾರಂಭವಾದ ಸಾಮಾಜಿಕ ಜಾಲತಾಣ ಫೇಸ್ ಬುಕ್, ಈ ವರೆಗೂ ಯುವಜನರನ್ನು ಮಾತ್ರ ಸೆಳೆಯುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್ ಗೆ ಹಿರಿಯ ನಾಗರಿಕರು ಸೇರ್ಪಡೆಯಾಗುತ್ತಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.
ಹಿರಿಯ ನಾಗರಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಫೇಸ್ ಬುಕ್ ಗೆ ಲಾಗ್ ಇನ್ ಆಗುತ್ತಿದ್ದು ಮುಂಚೂಣಿಯಲ್ಲಿರುವ ಸಾಮಾಜಿಕ ಜಾಲತಾಣದಲ್ಲಿ ಹಿರಿಯ ನಾಗರಿಕ ಸಂಖ್ಯೆ ಏರಿಕೆಯಾಗುತ್ತಿದೆ. ಈ ಬಗ್ಗೆ ಪೆನ್ ಸ್ಟೇಟ್ ಸಂಶೋಧಕರು ಸಮೀಕ್ಷೆ ನಡೆಸಿದ್ದಾರೆ. ಸಂಶೋಧಕ ಎನ್ ಹ್ವಾ ಜಂಗ್ ಪ್ರಕಾರ ಹಿರಿಯ ನಾಗರಿಕರು ತಮ್ಮ ಹಳೆಯ ಸ್ನೇಹಿತರೊಂದಿಗೆ, ಕುಟುಂಬ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಫೇಸ್ ಬುಕ್ ನ್ನು ಬಳಸುತ್ತಿದ್ದಾರಾಂತೆ.
ಹಿರಿಯ ನಾಗರಿಕರು ದಿನವೊಂದಕ್ಕೆ 2 .46 ಬಾರಿ ಫೇಸ್ ಬುಕ್ ಗೆ ಭೇಟಿ ನೀಡಿ ದಿನವೊಂದಕ್ಕೆ ಕನಿಷ್ಠ 35 ನಿಮಿಷಕ್ಕೂ ಹೆಚ್ಚು ಸಮಯ ಫೇಸ್ ಬುಕ್ ನಲ್ಲಿ ಕಳೆಯಲಿದ್ದಾರೆ ಎಂದು ಸಮೀಕ್ಷೆಯ ಮಾದರಿ ಸಂಗ್ರಹಗಳ ಮೂಲಕ ತಿಳಿದುಬಂದಿದೆ. ಮತ್ತೋಂದು ವಿಷೇಶ ವಿಷಯವೆಂದರೆ ಸಾಮಾಜಿಕ ಸಂಬಂಧಗಳಿಂದ ಹೆಚ್ಚು ಪ್ರೇರಣೆ ಪಡೆಯುವವ ಪ್ರವೃತ್ತಿ ಹೊಂದಿರುವ ಹಿರಿಯರು, ಜನರು ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯುವ ಕುತೂಹಲದಿಂದ ಫೇಸ್ ಬುಕ್ ಬಳಸುತ್ತಾರೆ ಎಂದು ಸಂಶೋಧಕ ಎಸ್ ಶಾಮ್ ಸುಂದರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


