ಎಂಟು ವಲಯಗಳಲ್ಲಿ ಏರ್ ಸೆಲ್ 4ಜಿ ಸ್ಪೆಕ್ಟ್ರಮ್ ಖರೀದಿಸಿದ ಏರ್ ಟೆಲ್
ದೇಶದ ಎಂಟು ಟೆಲಿಕಾಂ ವಲಯಗಳಲ್ಲಿ ಏರ್ ಸೆಲ್ ನ 4ಜಿ ಸ್ಪೆಕ್ಟ್ರಮ್ ಹಕ್ಕುಗಳನ್ನು ಪಡೆದುಕೊಳ್ಳಲು ಭಾರ್ತಿ ಏರ್ ಟೆಲ್ ...

ನವದೆಹಲಿ: ದೇಶದ ಎಂಟು ಟೆಲಿಕಾಂ ವಲಯಗಳಲ್ಲಿ ಏರ್ ಸೆಲ್ ನ 4ಜಿ ಸ್ಪೆಕ್ಟ್ರಮ್ ಹಕ್ಕುಗಳನ್ನು ಪಡೆದುಕೊಳ್ಳಲು ಭಾರ್ತಿ ಏರ್ ಟೆಲ್ 3 ಸಾವಿರದ 500 ಕೋಟಿ ರೂಪಾಯಿಗಳನ್ನು ಪಾವತಿಸಲಿದೆ.
ಮೊಬೈಲ್ ಸೇವೆಗಳನ್ನು ಅತ್ಯಂತ ವೇಗವಾಗಿ ಒದಗಿಸಲು ಇದರಿಂದ ಅನುಕೂಲವಾಗಲಿದೆ.
ಭಾರ್ತಿ ಏರ್ ಟೆಲ್ ಮತ್ತು ಅದರ ಅಂಗಸಂಸ್ಥೆಯಾದ ಭಾರ್ತಿ ಹೆಕ್ಸಕಾಮ್ ಲಿಮಿಟೆಡ್ ಏರೆಸೆಲ್ ಲಿಮಿಟೆಡ್ ಮತ್ತು ಅದರ ಅಂಗಸಂಸ್ಥೆಯಾದ ಡಿಶ್ ನೆಟ್ ವೈರ್ ಲೆಸ್ ಲಿಮಿಟೆಡ್ ಮತ್ತು ಏರ್ ಸೆಲ್ ಸೆಲ್ಯುಲಾರ್ ಲಿಮಿಟೆಡ್ ಜೊತೆಗೆ ಮುಖ್ಯ ಒಪ್ಪಂದಕ್ಕೆ ಸಹಿ ಹಾಕಿವೆ.
ತಮಿಳುನಾಡು, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಅಸ್ಸಾಂ, ಈಶಾನ್ಯ, ಆಂಧ್ರ ಪ್ರದೇಶ ಮತ್ತು ಒರಿಸ್ಸಾಗಳೇ ಆ ಎಂಟು ವಲಯಗಳು.
ಈ ಮೂಲಕ ಇನ್ನು ಭಾರ್ತಿ ಏರ್ ಟೆಲ್ ತನ್ನ ಗ್ರಾಹಕರಿಗೆ 4ಜಿ ಸೇವೆ ಒದಗಿಸಲು ಸಾಧ್ಯವಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


