ಗೂಗಲ್ ಗೆ 17ನೇ ಹುಟ್ಟುಹಬ್ಬ
ಭಾನುವಾರ ಗೂಗಲ್ ಗೆ 17ನೇ ವರ್ಷದ ಹುಟ್ಟುಹಬ್ಬ ಸಂಭ್ರಮ.ಈ ಹಿನ್ನೆಲೆಯಲ್ಲಿ ಇಂದಿನ ಗೂಗಲ್ ಮುಖಪುಟದ...

ನವದೆಹಲಿ: ಭಾನುವಾರ ಗೂಗಲ್ ಗೆ 17ನೇ ವರ್ಷದ ಹುಟ್ಟುಹಬ್ಬ ಸಂಭ್ರಮ.ಈ ಹಿನ್ನೆಲೆಯಲ್ಲಿ ಇಂದಿನ ಗೂಗಲ್ ಮುಖಪುಟದ ವಿನ್ಯಾಸ ಬದಲಾಗಿದೆ.
1990ರ ದಶಕದಲ್ಲಿ ವೆಬ್ ಸೈಟ್ ಗಳ ವಿನ್ಯಾಸ, ಪುಟವನ್ನು ನೆನಪಿಸಲು ಗೂಗಲ್ ರೇಖಾಚಿತ್ರ ಬಿಡಿಸಿದೆ. ಇಂದು ಗೂಗಲ್ ನ ಮುಖಪುಟವನ್ನು ರೆಟ್ರೋ ಸ್ಟೈಲ್ ನಲ್ಲಿ ಪ್ಲಾಸ್ಟಿಕ್ ಪಿಸಿ, ಲಾವಾ ಲ್ಯಾಂಪ್ ಮತ್ತು 1998ರ ಗೂಗಲ್ ಚಿಹ್ನೆಯನ್ನು ಸಹ ತೋರಿಸಲಾಗಿದೆ. ಗಾಳಿ ತುಂಬಿದ ಬಲೂನ್ ಗಳನ್ನು ವಿನ್ಯಾಸ ಮಾಡಿ ಮತ್ತು ಮಾನಿಟರ್ ಮೇಲೆ ಬರ್ತ್ ಡೆ ಕ್ಯಾಪ್ ಇಡಲಾಗಿದೆ.ಬಲದ ಕಡೆಯಲ್ಲಿ ಡೆಸ್ಕ್ ಪಕ್ಕದಲ್ಲಿ ಹಸಿರು ಕಲರ್ ನ ಲಾವಾ ಲ್ಯಾಂಪ್ ಇಡಲಾಗಿದೆ. ಇವುಗಳ ಮೇಲೆ ಕ್ಲಿಕ್ ಮಾಡಿದರೆ ಗೂಗಲ್ ನ ನಿಜವಾದ ಹುಟ್ಟುಹಬ್ಬ ಯಾವಾಗ ಎಂಬುದು ಗೊತ್ತಾಗುತ್ತದೆ.
ವಿಶ್ವದಲ್ಲಿ ಯಾವುದೇ ಮಾಹಿತಿ, ಸ್ಥಳ ಮತ್ತು ಇತರ ವಿಷಯಗಳ ಹುಡುಕುವಿಕೆಯ ಜಾಲತಾಣವಾದ ಗೂಗಲ್ ನ 4ನೇ ಹುಟ್ಟುಹಬ್ಬ ಸೆಪ್ಟೆಂಬರ್ 27ರಂದು ಮತ್ತು ಡೂಡಲ್ ನ 5ನೇ ಹುಟ್ಟುಹಬ್ಬ ಸೆಪ್ಟೆಂಬರ್ 8 ಎಂಬ ಮಾಹಿತಿ ನಮೂದಿಸಲಾಗಿದೆ. 5ನೇ ಹುಟ್ಟುಹಬ್ಬ ಸೆಪ್ಟೆಂಬರ್ 8, 6ನೇಯದ್ದು ಸೆಪ್ಟೆಂಬರ್ 7 ಮತ್ತು 7ನೇ ಹುಟ್ಟುಹಬ್ಬವನ್ನು ಸೆಪ್ಟೆಂಬರ್ 26ರಂದು ಆಚರಿಸಿಕೊಂಡಿತ್ತು. ಆದರೆ ಸ್ವತಹ ಗೂಗಲ್ ಗೆ ಅದರ ಹುಟ್ಟುಹಬ್ಬ ಯಾವಾಗ ಎಂದು ಸ್ಪಷ್ಟವಾಗಿ ತಿಳಿದಂತಿಲ್ಲ. 2006ರಿಂದ ಸೆಪ್ಟೆಂಬರ್ 27ರಂದು ಡೂಡಲ್ ನೊಂದಿಗೆ ಆಚರಿಸಿಕೊಂಡು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


