ಕೊನೆಗೂ ಡಿಸ್‌ಲೈಕ್ ಸೇರಿಸಲು ಫೇಸ್‌ಬುಕ್ ಒಪ್ಪಿಗೆ
ಫೇಸ್‌ಬುಕ್ ಬಳಕೆದಾರರ ಬಹು ಬೇಡಿಕೆಗಳಲ್ಲೊಂದಾದ ಡಿಸ್ ಲೈಕ್ ಆಪ್ಶನ್ ಗೆ ಇದೀಗ ಫೇಸ್‌ಬುಕ್ ಸಂಸ್ಥೆ ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲೇ ಫೇಸ್‌ಬುಕ್ ಜಾಲತಾಣದಲ್ಲಿ 'ಡಿಸ್‌ಲೈಕ್' ಆಪ್ಶನ್ ಬರಲಿದೆ ಎಂದು ಸಂಸ್ಥಾಪಕ ಮಾರ್ಕ್ ಜಕರ್‌ಬರ್ಗ್ ಹೇಳಿದ್ದಾರೆ...

ವಾಷಿಂಗ್ಟನ್: ಫೇಸ್‌ಬುಕ್ ಬಳಕೆದಾರರ ಬಹು ಬೇಡಿಕೆಗಳಲ್ಲೊಂದಾದ ಡಿಸ್ ಲೈಕ್ ಆಪ್ಶನ್ ಗೆ ಇದೀಗ ಫೇಸ್‌ಬುಕ್ ಸಂಸ್ಥೆ ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲೇ ಫೇಸ್‌ಬುಕ್ ಜಾಲತಾಣದಲ್ಲಿ 'ಡಿಸ್‌ಲೈಕ್' ಆಪ್ಶನ್ ಬರಲಿದೆ ಎಂದು ಸಂಸ್ಥಾಪಕ ಮಾರ್ಕ್ ಜಕರ್‌ಬರ್ಗ್ ಹೇಳಿದ್ದಾರೆ.
ವಾಷಿಂಗ್ಟನ್ ನಲ್ಲಿ ನಡೆದ ಕಾರ್ಯಕ್ರಮದ ಪ್ರಶ್ನೋತ್ತರ ಸೆಷನ್ ನಲ್ಲಿ ಮಾತನಾಡಿರುವ ಅವರು, ಫೇಸ್‌ಬುಕ್ ಬಳಕೆದಾರರು ಕಳುಹಿಸಿರುವ ಬೇಡಿಕೆಗಳಲ್ಲಿ ಬಹುತೇಕರು 'ಡಿಸ್‌ಲೈಕ್' ಆಪ್ಶನ್ ಕುರಿತಾಗಿ ಸಾಕಷ್ಟು ಮನವಿಗಳನ್ನು ಮಾಡಿದ್ದರು. ಬಳಕೆದಾರರ ಮನವಿಯನ್ನು ಇದೀಗ ಸಂಸ್ಥೆ ಸ್ವೀಕರಿಸಿದ್ದು, ಈ ಬಗ್ಗೆ ಸಂಸ್ಥೆ ಹಲವು ಪರೀಕ್ಷೆಗಳನ್ನು ನಡುಸುತ್ತದೆ. ಶೀಘ್ರದಲ್ಲೇ ಬಳಕೆದಾರರ ಬೇಡಿಕೆ ಈಡೇರಲಿದೆ ಎಂದು ಹೇಳಿದ್ದಾರೆ.
ಜನರು ಕೆಲವು ಬಾರಿ ಕೆಲವು ದುಖಃಕರ ವಿಚಾರ ಹಾಗೂ ನೋವಿನ ಸಂಗತಿಗಳನ್ನು ಹಂಚಿಕೊಂಡಿರುತ್ತಾರೆ ಈ ವೇಳೆ ಇಂತಹ ವಿಷಯಗಳಿಗೆ ಲೈಕ್ ಕೊಡುವುದು ಹಿತಕರವಲ್ಲ ಎಂಬ ಭಾವನೆಗಳು ಬಳಕೆದಾರರಲ್ಲಿ ಉಂಟುಮಾಡುತ್ತಿದೆ ಎಂದು ಹೇಳಿ ಸಾಕಷ್ಟು ಮನವಿಗಳು ಸಂಸ್ಥೆಗೆ ಬಂದಿತ್ತು. ಈ ಬಗ್ಗೆ ಸಂಸ್ಥೆ ಸಹ ಸಾಕಷ್ಟು ಬಾರಿ ಚರ್ಚೆ ನಡೆಸಿತ್ತು. ಇದೀಗ ಬಳಕೆದಾರರ ಬೇಡಿಕೆ ಕುರಿತಂತೆ ಸಂಸ್ಥೆ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೇ ಡಿಸ್ ಲೈಕ್ ಆಪ್ಶನ್ ನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


