ಸ್ಪರ್ಷ ಸಂವೇದನೆ ಗುರುತಿಸಬಲ್ಲ ಕೃತಕ ಚರ್ಮ ಅಭಿವೃದ್ಧಿ ಪಡಿಸಿದ ವಿಜ್ಞಾನಿಗಳು!
ಸಂವೇದನಾ ಸಂಕೇತಗಳನ್ನು ಮೆದುಳಿಗೆ ತಲುಪಿಸುವ ಸಾಮರ್ಥ್ಯವುಳ್ಳ ಕೃತಕ ಚರ್ಮವನ್ನು ರೂಪಿಸಿರುವುದಾಗಿ ಅಮೆರಿಕದ ಸಂಶೋಧಕರು ಹೇಳಿದ್ದಾರೆ.

ವಾಷಿಂಗ್ಟನ್: ಸಂವೇದನಾ ಸಂಕೇತಗಳನ್ನು ಮೆದುಳಿಗೆ ತಲುಪಿಸುವ ಸಾಮರ್ಥ್ಯವುಳ್ಳ ಕೃತಕ ಚರ್ಮವನ್ನು ರೂಪಿಸಿರುವುದಾಗಿ ಅಮೆರಿಕದ ಸಂಶೋಧಕರು ಹೇಳಿದ್ದಾರೆ.
ಕೃತಕ ತ್ವಚೆ ಹಸ್ತ ಲಾಘವ ಹಾಗೂ ಬಲವಾದ ಹಿಡಿತದ ವೇಳೆ ಉಂಟಾಗುವ ಒತ್ತಡದ ನಡುವಿನ ವ್ಯತ್ಯಾಸವನ್ನು ಗುರುತಿಸುವಷ್ಟು ಸಮರ್ಥವಾಗಿದೆ. ಕೃತಕ ಅಂಗಾಂಗಳನ್ನು ಹೊಂದಿರುವವರು ಕೃತಕ ಚರ್ಮದಿಂದ ಸಂವೇದನೆಯನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ವಿಜ್ಞಾನಕ್ಕೆ ಸಂಬಂಧಿಸಿದ ಅಮೆರಿಕದ ನಿಯತಕಾಲಿಕ ವರದಿ ಮಾಡಿದೆ.
ಇದೇ ಮೊದಲ ಬಾರಿಗೆ ನರಮಂಡಲದ ಘಟಕಕ್ಕೆ ಸ್ಪರ್ಷ ಸಂವೇದನೆ ನೀಡುವಂತೆ ತ್ವಚೆಯ ಮಾದರಿಯ ವಸ್ತುವನ್ನು ಅಭಿವೃದ್ಧಿಪಡಿಸಲಾಗಿದ್ದು ಈ ಸಾಧನೆ ಹಿಂದೆ 17 ಸದಸ್ಯರ ಸಂಶೋಧನಾ ತಂಡದ ಶ್ರಮವಿದೆ ಎಂದು
ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಜ್ಹೆನಾನ್ ಬಾವ್ ಹೇಳಿದ್ದಾರೆ.
ಎರಡು ಪದರಗಳಲ್ಲಿ ರಚನೆಯಾಗಿರುವ ಕೃತಕ ಚರ್ಮದಲ್ಲಿ ಮೊದಲ ಪದರ ಸಂವೇದಿ ವ್ಯವಸ್ಥೆಯನ್ನು ಹೊಂದಿದ್ದರೆ, ಎರಡನೆಯ ಪದರ ವಿದ್ಯುತ್ ಸಂಕೇತಗಳನ್ನು ನರ ಕೋಶಗಳಿಗೆ ಹೊಂದಬಲ್ಲ ಜೀವರಾಸಾಯನಿಕ ಪ್ರಚೋದಕಗಳನ್ನಾಗಿ ಪರಿವರ್ತಿಸಲು ಸರ್ಕ್ಯೂಟ್ ನಂತೆ ಕಾರ್ಯನಿರ್ವಹಿಸಲಿದೆ.
ಎಲೆಕ್ಟ್ರಾನಿಕ್ ಸಂಕೇತಳು ಜೈವಿಕ ನರಕೋಶದಿಂದ ಗುರುತಿಸಲ್ಪಡುತ್ತದೆ ಎಂಬುದನ್ನು ನಿರೂಪಿಸುವುದು ವಿಜ್ಞಾನಿಗಳ ಮುಂದಿರುವ ದೊಡ್ಡ ಸವಾಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


