ಸ್ಟಾರ್ಟ್‍ಅಪ್‍ಗೆ ನಾಸ್ಕಾಂ 10 ಅಂಶಗಳ ಕಾರ್ಯತಂತ್ರ
ಸ್ಟಾರ್ಟ್‍ಅಪ್ ಕ್ಷೇತ್ರದಲ್ಲಿ ಭಾರತ ವೇಗವಾಗಿ ಮುನ್ನಡೆಯುತ್ತಿದೆ. ಕಳೆದ ವರ್ಷ ವಿಶ್ವದಲ್ಲಿ ನಾಲ್ಕನೆ ಸ್ಥಾನದಲ್ಲಿದ್ದದು ಈ ವರ್ಷ 3ನೇ ಸ್ಥಾನಕ್ಕೆ ಏರಿದೆ...

ಬೆಂಗಳೂರು: ಸ್ಟಾರ್ಟ್‍ಅಪ್ ಕ್ಷೇತ್ರದಲ್ಲಿ ಭಾರತ ವೇಗವಾಗಿ ಮುನ್ನಡೆಯುತ್ತಿದೆ. ಕಳೆದ ವರ್ಷ ವಿಶ್ವದಲ್ಲಿ ನಾಲ್ಕನೆ ಸ್ಥಾನದಲ್ಲಿದ್ದದು ಈ ವರ್ಷ 3ನೇ ಸ್ಥಾನಕ್ಕೆ ಏರಿದೆ ಎಂದು ದೇಶದ ಸಾಫ್ಟ್ ವೇರ್ ಕಂಪನಿಗಳ ಒಕ್ಕೂಟ ನಾಸ್ಕಾಂ ಅಧ್ಯಕ್ಷ ಆರ್.ಚಂದ್ರಶೇಖರ್ ಹೇಳಿದರು.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ವರ್ಷದಲ್ಲಿ ಭಾರತದಲ್ಲಿ ಇದುವರೆಗೂ ಸ್ಟಾರ್ಟ್‍ಅಪ್ ಗಳಲ್ಲಿ 500 ಕೋಟಿ ಡಾಲರ್ ಬಂಡವಾಳ ಹೂಡಿಕೆಯಾಗಿದೆ. ಈ ಕಂಪನಿಗಳಲ್ಲಿ 80 ರಿಂದ 85 ಸಾವಿರ ಜನ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಹೆಚ್ಚು ಹೆಚ್ಚು ಜನ ಇಂಟರ್‍ನೆಟ್ ಸಂಪರ್ಕ ಪಡೆಯುತ್ತಿರುವುದರಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ಟಾರ್ಟ್‍ಅಪ್ ಗಳು ಬೆಳೆಯಲು ಸಾಕಷ್ಟು ಅವಕಾಶಗಳಿವೆ ಎಂದ ಅವರು, ಸರ್ಕಾರದ ನೀತಿಗಳನ್ನು ಇದಕ್ಕೆ ಅನುಗುಣವಾಗಿ ರೂಪಿಸುವ ಅಗತ್ಯವಿದೆ ಎಂದರು.
ಸ್ಟಾರ್ಟ್‍ಅಪ್‍ಗಳಿಗೆ ಬಂಡವಾಳ ಕಲ್ಪಿಸುವುದು, ತೆರಿಗೆ ನೀತಿ, ಬ್ರಾಂಡ್ ಇಂಡಿಯಾ ಮಾಡುವುದು ಸೇರಿದಂತೆ ಹತ್ತು ಪ್ರಮುಖ ಅಂಶಗಳನ್ನು ಒಳಗೊಂಡ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಚಂದ್ರಶೇಖರ್ ತಿಳಿಸಿದರು. ನಾಸ್ಕಾಂ ಪ್ರಾಡಕ್ಟ್ ಕೌನ್ಸಿಲ್ ಅಧ್ಯಕ್ಷರಾದ ರವಿ ಗುರುರಾಜ್ ಮಾತನಾಡಿ, ಭಾರತದಲ್ಲಿ ಸ್ಟಾರ್ಟ್‍ಅಪ್‍ಗಳ ಸ್ಥಾಪನೆ ಶೇ.123ರಷ್ಟು ವೇಗದಲ್ಲಿ ಪ್ರಗತಿ ಕಾಣುತ್ತಿದೆ. 30 ವರ್ಷದೊಳಗಿನವರು ಹೆಚ್ಚಾಗಿ ಸಂಸ್ಥೆಗಳನ್ನು ಆರಂಭಿಸುತ್ತಿದ್ದಾರೆ ಎಂದು ತಿಳಿಸಿದರು. ಭಾರತದಲ್ಲಿ ಬೆಂಗಳೂರು, ಮುಂಬೈ ಮತ್ತು ನವದೆಹಲಿ ಮುಂಚೂಣಿಯಲ್ಲಿದೆ.
ಪ್ರತಿದಿನ 3ರಿಂದ 4 ಸ್ಟಾರ್ಟ್‍ಅಪ್‍ಗಳನ್ನು ಆರಂಭಿಸಲಾಗುತ್ತಿದೆ ಎಂದ ಅವರು, ಪ್ರತಿ ವಾರ 95 ದಶಲಕ್ಷ ಡಾಲರ್ ಹೂಡಿಕೆಯಾಗುತ್ತಿದೆ ಎಂದು ತಿಳಿಸಿದರು. ನಾಸ್ಕಾಂನ ಪ್ರಾಡಕ್ಟ್ ಶೃಂಗಸಭೆ ಮೂರು ದಿನಗಳ ಕಾಲ ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆಯುತ್ತಿದ್ದು ದೇಶ ಸೇರಿದಂತೆ ವಿದೇಶಿಗಳ ನೂರಾರು ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


