ವಿಜ್ಞಾನ-ತಂತ್ರಜ್ಞಾನ

ಡಿಆರ್ ಡಿಒ ದಿಂದ ಇಂಟರ್ಸೆಪ್ಟರ್ ಕ್ಷಿಪಣಿ ಯಶಸ್ವಿ ಪರೀಕ್ಷಾರ್ಥ ಪ್ರಯೋಗ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ನ.22 ರಂದು ಸುಧಾರಿತ ವಾಯು ರಕ್ಷಣಾ(ಎಎಡಿ) ಇಂಟರ್ಸೆಪ್ಟರ್ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ನಡೆಸಿದೆ.

ಡಿಆರ್ ಡಿಒ ದಿಂದ ಇಂಟರ್ಸೆಪ್ಟರ್ ಕ್ಷಿಪಣಿ ಯಶಸ್ವಿ ಪರೀಕ್ಷಾರ್ಥ ಪ್ರಯೋಗ
ಡಿಆರ್ ಡಿಒ
Published On :

ಭುವನೇಶ್ವರ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ನ.22 ರಂದು ಸುಧಾರಿತ ವಾಯು ರಕ್ಷಣಾ(ಎಎಡಿ) ಇಂಟರ್ಸೆಪ್ಟರ್ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ನಡೆಸಿದೆ.
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿರುವ ಅಬ್ದುಲ್ ಕಲಾಂ ದ್ವೀಪದಲ್ಲಿ ಎಎಡಿ ಇಂಟರ್ಸೆಪ್ಟರ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆದಿದೆ. ದೇಶಿಯ ನಿರ್ಮಿತ ಇಂಟರ್ಸೆಪ್ಟರ್ ಕ್ಷಿಪಣಿಯನ್ನು ಬೆಳಿಗ್ಗೆ 9 :40 ರ ವೇಳೆಗೆ ಯಶಸ್ವಿ ಪ್ರಯೋಗ ನಡೆಸಲಾಯಿತು ಎಂದು ಡಿಆರ್ ಡಿಒ ಅಧಿಕಾರಿಗಳು ತಿಳಿಸಿದ್ದಾರೆ.
ಟ್ರ್ಯಾಕಿಂಗ್ ರೆಡಾರ್ ನಿಂದ ಸಂಕೇತ ಪಡೆದ ನಂತರ ಒಳಬರುವ ಕ್ಷಿಪಣಿಯನ್ನು ಮಧ್ಯ ಮಾರ್ಗದಲ್ಲಿಯೇ ಹೊಡೆದುರುಳಿಸುವ ಪಥದಲ್ಲಿ ಕ್ಷಿಪಣಿ ಹಾರಾಟ ನಡೆಸಿದೆ ಎಂದು ರಕ್ಷಣಾ ಸಂಸ್ಥೆಯ ಮೂಲಗಳು  ಮಾಹಿತಿ ನೀಡಿವೆ. ಕ್ಷಿಪಣಿ ಉಡಾವಣೆಯ ಪರಿಣಾಮ ಖಚಿತಪಡಿಸಿಕೊಳ್ಳುವುದಕ್ಕಾಗಿ ರಡಾರ್ ಗಳಿಂದ ಪಡೆದ ಡೇಟಾ ವಿಶ್ಲೇಷಣೆ ಮಾಡುತ್ತಿರುವುದಾಗಿ ಡಿ.ಆರ್.ಡಿ.ಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.