ವಿಜ್ಞಾನ-ತಂತ್ರಜ್ಞಾನ

ಮಕ್ಕಳ ದಿನಾಚರಣೆ ಸಂಭ್ರಮಕ್ಕೆ ಗೂಗಲ್ ಡೂಡಲ್

ವಿಶಾಖಪಟ್ನಂನ ೯ ವರ್ಷದ ಬಾಲಕ ಪಿ ಕಾರ್ತಿಕ್ ರಚಿಸಿರುವ ಕಲಾಕೃತಿ ಗೂಗಲ್ ಡೂಡಲ್ ಸ್ಪರ್ಧೆಯಲ್ಲಿ ಗೆದ್ದಿದ್ದು ಮಕ್ಕಳ ದಿನಾಚರಣೆ ಅಂಗವಾಗಿ

ಮಕ್ಕಳ ದಿನಾಚರಣೆ ಸಂಭ್ರಮಕ್ಕೆ ಗೂಗಲ್ ಡೂಡಲ್
ಮಕ್ಕಳ ದಿನಾಚರಣೆ ಸಂಭ್ರಮಕ್ಕೆ ಪಿ ಕಾರ್ತಿಕ್ ರಚಿಸಿರುವ ಗೂಗಲ್ ಡೂಡಲ್
Published On :

ಬೆಂಗಳೂರು: ವಿಶಾಖಪಟ್ನಂನ ೯ ವರ್ಷದ ಬಾಲಕ ಪಿ ಕಾರ್ತಿಕ್ ರಚಿಸಿರುವ ಕಲಾಕೃತಿ ಗೂಗಲ್ ಡೂಡಲ್ ಸ್ಪರ್ಧೆಯಲ್ಲಿ ಗೆದ್ದಿದ್ದು ಮಕ್ಕಳ ದಿನಾಚರಣೆ ಅಂಗವಾಗಿ ಇಂದು ಗೂಗಲ್ ಮುಖಪುಟದಲ್ಲಿ ರಾರಾಜಿಸಿದೆ.

ವಿವಿಧ ಸಂಭ್ರಮಗಳ ಸಮಯದಲ್ಲಿ ಗೂಗಲ್ ಡೂಡಲ್ ಸ್ಪರ್ಧೆಯನ್ನು ಏರ್ಪಡಿಸುತ್ತದೆ. ಇದು ಗೂಗಲ್ ನಡೆಸಿರುವ ಏಳನೇ ಡೂಡಲ್ ಸ್ಪರ್ಧೆ.

ಪರಿಸರ ರಕ್ಷಣೆಯ ಥೀಮ್ ಹೊಂದಿರುವ ಈ ಕಲಾಕೃತಿಯಲ್ಲಿ ಪ್ಲಾಸ್ಟಿಕ್ ಅನ್ನು ರೀ ಸೈಕಲ್ ಮಾಡಿ ಪರಿಸರ ಉಳಿಸುವ ಸಂದೇಶ ಹೊಂದಿದೆ.

ದೇಶದ ಪ್ರಥಮ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಅವರ ಜನ್ಮ ಜಯಂತಿಯನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.