ವಿಜ್ಞಾನ-ತಂತ್ರಜ್ಞಾನ

ಹೊಸ ಟ್ವಿಟ್ಟರ್ ಖಾತೆಯೊಂದಿಗೆ ಗಿನ್ನಿಸ್ ದಾಖಲೆ ಮುರಿದ ಒಬಾಮ

ಟ್ವಿಟ್ಟರ್ ನಲ್ಲಿ ಒಂದು ದಶಲಕ್ಷ ಅನುಯಾಯಿಗಳನ್ನು ಅತಿ ವೇಗವಾಗಿ ಪಡೆದ ಗಿನ್ನಿಸ್ ದಾಖಲೆಯನ್ನು ಅಮೇರಿಕಾ ಅಧ್ಯಕ್ಷ ಒಬಾಮಾ ಮುರಿದಿದ್ದಾರೆ.

ಹೊಸ ಟ್ವಿಟ್ಟರ್ ಖಾತೆಯೊಂದಿಗೆ ಗಿನ್ನಿಸ್ ದಾಖಲೆ ಮುರಿದ ಒಬಾಮ
ಬರಾಕ್ ಒಬಾಮಾ ಟ್ವಿಟ್ಟರ್ ಖಾತೆ
Published On :

ವಾಶಿಂಗ್ಟನ್: ಟ್ವಿಟ್ಟರ್ ನಲ್ಲಿ ಒಂದು ದಶಲಕ್ಷ ಅನುಯಾಯಿಗಳನ್ನು ಅತಿ ವೇಗವಾಗಿ ಪಡೆದ ಗಿನ್ನಿಸ್ ದಾಖಲೆಯನ್ನು ಅಮೇರಿಕಾ ಅಧ್ಯಕ್ಷ ಒಬಾಮಾ ಮುರಿದಿದ್ದಾರೆ. ಅವರ ಟ್ವಿಟ್ಟರ್ ಖಾತೆ @POTUS ಐದು ಘಂಟೆಗಳಿಗೂ ಕಡಿಮೆ ಅವಧಿಯಲ್ಲಿ ಒಂದು ದಶಲಕ್ಷ ಬೆಂಗಲಿಗರನ್ನು ದಾಟಿದೆ.

ಅಧಿಕೃತ ವಿಶ್ವ ದಾಖಲೆಗಳನ್ನು ಪರಿಶೀಲಿಸುವ-ದಾಖಲಿಸುವ ಗಿನ್ನಿಸ್ ವಿಶ್ವ ದಾಖಲೆ ಸಂಸ್ಥೆ ಮಂಗಳವಾರ ತಮ್ಮ ಅಂತರ್ಜಾಲ ತಾಣದಲ್ಲಿ ಅಮೇರಿಕಾ ಅಧ್ಯಕ್ಷ ಒಂದು ದಿನದ ಕೆಳಗೆ ವಿಶ್ವ ದಾಖಲೆ ಮಾಡಿರುವ ಬಗ್ಗೆ ಘೋಷಣೆ ಮಾಡಿದ್ದಾರೆ.

ಐದು ಘಂಟೆಗಳಿಗೂ ಕಡಿಮೆ ಸಮಯದಲ್ಲಿ ೧ ಮಿಲಯನ್ ಹಿಂಬಾಲಕರನ್ನು ಪಡೆದು ಒಬಾಮ ನಟ ರಾಬರ್ಟ್ ದೌನೆ ಜೂನಿಯರ್ ಅವರ ಹಿಂದಿನ ದಾಖಲೆಯನ್ನು ಅಳಿಸಿಹಾಕಿದ್ದಾರೆ ಎಂದಿದೆ. ಈ ಹಿಂದೆ ಈ ನಟ ಏಪ್ರಿಲ್ ೨೦೧೪ರಲ್ಲಿ ೨೩ ಘಂಟೆ ೨೨ ನಿಮಿಷಗಳಲ್ಲಿ ಒಂದು ದಶಲಕ್ಷ ಅನುಯಾಯಿಗಳನ್ನು ಪಡೆದ ದಾಖಲೆ ಮಾಡಿದ್ದರು.

"ಹಲ್ಲೋ, ಟ್ವಿಟ್ಟರ್! ನಾನು ಬರಾಕ್. ನಿಜವಾಗಿಯೂ! ಆರು ವರ್ಷ ಕಳೆಯಿತು. ಕೊನೆಗೂ ಅವರು ನನ್ನದೇ ಆದ ಒಂದು ಖಾತೆಯನ್ನು ನೀಡಿದ್ದಾರೆ" ಎಂದು ಒಬಾಮ ಮೊದಲ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.