ಮಾರುಕಟ್ಟೆಗೆ ಎಲ್ಯುಗಾ ಎಲ್ ಪ್ರವೇಶ
ಮೊಬೈಲ್ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಕ್ಷಿಪ್ರ ತಾಂತ್ರಿಕ ನಾವೀನ್ಯತೆ ಮತ್ತು ಅಭಿವೃದ್ಧಿಗೆ ಅನುಗುಣವಾಗಿ ಪ್ಯಾನಸೋನಿಕ್ ಕಂಪನಿಯು ತನ್ನ ಸ್ಮಾರ್ಟ್ ಫೋನ್ ಶ್ರೇಣಿಯ...

ಮೊಬೈಲ್ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಕ್ಷಿಪ್ರ ತಾಂತ್ರಿಕ ನಾವೀನ್ಯತೆ ಮತ್ತು ಅಭಿವೃದ್ಧಿಗೆ ಅನುಗುಣವಾಗಿ ಪ್ಯಾನಸೋನಿಕ್ ಕಂಪನಿಯು ತನ್ನ ಸ್ಮಾರ್ಟ್ ಫೋನ್ ಶ್ರೇಣಿಯ ಹೊಸ
ಉತ್ಪನ್ನ `ಎಲ್ಯುಗಾ ಎಲ್'ನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಅತ್ಯುನ್ನತ ಶ್ರೇಣಿಯ ಹಾರ್ಡ್ ವೇರ್‍ಗಳನ್ನು ಒಳಗೊಂಡಿರುವ `ಎಲ್ಯುಗಾ ಎಲ್' ಸ್ಮಾರ್ಟ್ ಫೋನ್ ಗಳು ವಿನೂತನ ವಿನ್ಯಾಸ, ಉನ್ನತ ಗುಣಮಟ್ಟ ಮತ್ತು ಬಳಕೆದಾರರ ಸಂಪರ್ಕಕ್ಕಾಗಿ
ಅಳವಡಿಸಲಾಗಿರುವ ವಿಶೇಷ ವಿಧಗಳಿಂದ ಗುರುತಿಸಲ್ಪಟ್ಟಿದೆ. ಆಕಾರ, ಕಾರ್ಯಕ್ಷಮತೆ ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ.
`ಎಲ್ಯುಗಾ' 6.1 ಮಿಮೀ ನಷ್ಟು ತೆಳುವಾಗಿದ್ದು, ಹಗುರ ಮತ್ತು ಹೊಳಪಿನ ವಿನ್ಯಾಸ ಹೊಂದಿದೆ. ಇದರ ಎರಡೂ ಬದಿಗಳಿಗೂ ಉತ್ತಮ ರಕ್ಷಣೆಗಾಗಿ ಕೋರ್ನಿಂಗ್ ಗೊರಿಲ್ಲಾ ಗ್ಲಾಸ್ ಅಳವಡಿಸಲಾಗಿದೆ. ನಿಚ್ಚಳ ಮತ್ತು ವೈವಿಧ್ಯ ದೃಶ್ಯಗಳಿಗೆ 12.7 ಸೆ.ಮೀ.(5) ಎಚ್‍ಡಿ ಎಪಿಎಸ್ ಡಿಸ್‍ಪ್ಲೇ ಅಳವಡಿಸಲಾಗಿದೆ. ಒಟ್ಟಾರೆ ಜನರ ಉಪಯೋಗಕ್ಕೆ ತಕ್ಕಂತೆ ಸಿದ್ಧಪಡಿಸಲಾಗಿದೆ ಎಂದು ಪ್ಯಾನಸೋನಿಕ್‍ನ ವ್ಯವಸ್ಥಾಪಕ ನಿರ್ದೇಶಕ ಮನಿಸ್ ಶರ್ಮಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


