ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ ಇನ್ನು ಪಾಸ್‌ವರ್ಡ್ ಮುಕ್ತ
ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನಲ್ಲಿ ಬಯೋವುಟ್ರಿಕ್ ಸೈನ್ ಇನ್ ಆಪ್ಶನ್ ತರುವ ಮೂಲಕ ಪ್ರಸ್ತುತ ...

ಸೀಟೆಲ್: ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನಲ್ಲಿ ಬಯೋವುಟ್ರಿಕ್ ಸೈನ್ ಇನ್ ಆಪ್ಶನ್ ತರುವ ಮೂಲಕ ಪ್ರಸ್ತುತ ಆಪರೇಟಿಂಗ್ ಸಿಸ್ಟಂನ್ನು ಪಾಸ್‌ವರ್ಡ್ ಮುಕ್ತಗೊಳಿಸಲು ಮೈಕ್ರೋಸಾಫ್ಟ್ ಸಂಸ್ಥೆ ತೀರ್ಮಾನಿಸಿದೆ. ಈ ಸೌಲಭ್ಯ 2015ರ ನಂತರ ಲಭ್ಯವಾಗಲಿದೆ.
ವಿಂಡೋಸ್ 10ನ ಈ ವೈಶಿಷ್ಟ್ಯಕ್ಕೆ ವಿಂಡೋಸ್ ಹೆಲೋ ಎಂದು ಹೆಸರಿಡಲಾಗಿದ್ದು, ಲಾಗಿನ್ ಆಗಬೇಕಾದರೆ ಬಳಕೆದಾರರು ಅವರ ಮುಖ, ಕಣ್ಣಿನ ಪಾಪೆ ಅಥವಾ ಬೆರಳಚ್ಚು ನಮೂದಿಸುವ ಮೂಲಕ ವಿಂಡೋಸ್ ಫೋನ್, ಲ್ಯಾಪ್‌ಟಾಪ್ ಅಥವಾ ಪರ್ಸನಲ್ ಕಂಪ್ಯೂಟರ್‌ಗೆ ಲಾಗಿನ್ ಆಗಬಹುದಾಗಿದೆ.
ಈ ವೈಶಿಷ್ಟ್ಯದ ಬಗ್ಗೆ ಮೈಕ್ರೋಸಾಫ್ಟ್ ಗುರುವಾರ ಘೋಷಣೆ ಮಾಡಿದ್ದು, ಬಳಕೆದಾರರ ಬಯೋವುಟ್ರಿಕ್ ಡಾಟಾ ಡಿವೈಸ್‌ಗಳ ಲೋಕಲ್ ಡ್ರೈವ್‌ಗಳಲ್ಲಿ ಸೇವ್ ಆಗಲಿದ್ದು, ಹ್ಯಾಕರ್‌ಗಳಿಂದ ರಕ್ಷಣೆ ಒದಗಿಸುತ್ತದೆ.
ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ ಹೊಂದಿರುವ ಡಿವೈಸ್‌ಗಳಲ್ಲಿ ಮಾತ್ರ ಈ ವೈಶಿಷ್ಟ್ಯ ಕಾರ್ಯ ನಿರ್ವಹಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


