ಆ್ಯಪಲ್ ಸ್ಮಾರ್ಟ್ ವಾಚ್ ಲೋಕಾರ್ಪಣೆ
ಬಹುನಿರೀಕ್ಷಿತ ಆ್ಯಪಲ್ ಸ್ಮಾರ್ಟ್‍ವಾಚ್ ಸೋಮವಾರ ರಾತ್ರಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಲೋಕಾರ್ಪಣೆಗೊಂಡಿದೆ.

ಸ್ಯಾನ್ ಫ್ರಾನ್ಸಿಸ್ಕೋ: ಬಹುನಿರೀಕ್ಷಿತ ಆ್ಯಪಲ್ ಸ್ಮಾರ್ಟ್‍ವಾಚ್ ಸೋಮವಾರ ರಾತ್ರಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಲೋಕಾರ್ಪಣೆಗೊಂಡಿದೆ. ಸಂಸ್ಥಾಪಕ ಸ್ಟೀವ್ ಜಾಬ್ಸ್ ನಿಧನರಾದ ಬಳಿಕ ಆ್ಯಪಲ್ ಸಂಸ್ಥೆಯು ಬಿಡುಗಡೆ ಮಾಡುತ್ತಿರುವ ಮೊದಲ ಉತ್ಪನ್ನ ಇದಾಗಿದೆ.
ಭಾರತೀಯ ಕಾಲಮಾನ 10.37ಕ್ಕೆ ಸರಿಯಾಗಿ ಸ್ಯಾನ್ ಫ್ರಾನ್ಸಿಸ್ಕೋದ ಯೆರ್ಬಾ ಬಿಯೋನಾ ಸೆಂಟರ್‍ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಆ್ಯಪಲ್ ಸಿಇಒ ಟಿಮ್ ಕುಕ್ ಅವರು ಸ್ಮಾಟ್ರ್ ವಾಚ್ ಅನ್ನು ಅನಾವರಣಗೊಳಿಸಿದರು.
ಇದು ಏಪ್ರಿಲ್‍ನಲ್ಲಿ ಅಮೆರಿಕದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಇದರ ಬೆಲೆ 349 ಡಾಲರ್(ರು. 21870) ಎನ್ನಲಾಗಿದೆ. ಮೊದಲು ಅಮೆರಿಕದಲ್ಲಿ ಈ ವಾಚ್ ದೊರೆಯಲಿದ್ದು, ಭಾರತದ ಮಾರುಕಟ್ಟೆಗೆ ಯಾವಾಗ ಪ್ರವೇಶಿಸಲಿದೆ ಎಂಬುದನ್ನು ಕಂಪನಿ ಸ್ಪಷ್ಟಪಡಿಸಿಲ್ಲ. ಇದೇ ವೇಳೆ, ಆ್ಯಪಲ್ ಸಂಸ್ಥೆಯು ಹೊಸ ಮ್ಯಾಕ್‍ಬುಕ್ ಅನ್ನೂ ಬಿಡುಗಡೆ ಮಾಡಿದ್ದು, ಇದು ಚಿನ್ನದ ಬಣ್ಣದಲ್ಲಿದೆ. ದೀರ್ಘಬಾಳಿಕೆಯ ಬ್ಯಾಟರಿಯೇ ಇದರ ವಿಶೇಷ.
ಏನಿದರ ವೈಶಿಷ್ಟ್ಯ?
* ಇ-ಮೇಲ್, ಸಂದೇಶ, ದೂರವಾಣಿ ಕರೆಗಳು, ಸುದ್ದಿಗಳು ಹಾಗೂ ಇತರೆ ನೋಟಿಫಿಕೇಷನ್ ಗಳನ್ನು ಈ ವಾಚ್‍ನಲ್ಲಿ ನೋಡಬಹುದು.
* ನಿಮ್ಮ ಪ್ರತಿಯೊಂದು ಹೆಜ್ಜೆಯನ್ನೂ ಲೆಕ್ಕ ಮಾಡುವ ಆಕ್ಸೆಲರೋಮೀಟರ್ ಇರುತ್ತದೆ. ಜತೆಗೆ, ನಿಮ್ಮ ಹೃದಯದ ಬಡಿತವನ್ನೂ ಇದು ಎಣಿಸಿ ಹೇಳುತ್ತದೆ
* ಇದರಲ್ಲಿ ಥ್ರೋನ್ ಟ್ರೇಲರ್ ಗೇಮ್ ಕೂಡ ಇದೆ.
* ಯಾವುದೇ ಕೇಬಲ್ ಅಥವಾ ಉಪಗ್ರಹ ಸಂಪರ್ಕವಿಲ್ಲದೇ ಈ ವಾಚ್‍ನಲ್ಲಿ ಎಚ್‍ಬಿಒ ಟಿವಿಯನ್ನು ವೀಕ್ಷಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


