ವಿಜ್ಞಾನ-ತಂತ್ರಜ್ಞಾನ

ವಿನಾಶದತ್ತ ಪ್ರಾಣಿ ಸಂಕುಲ ದಾಪುಗಾಲು; ಮಾನವನೇ ಮೊದಲ ಬಲಿ

ಮಾನವ ಸೇರಿದಂತೆ ಭೂಮಿಯ ಮೇಲಿನ ಎಲ್ಲ ಪ್ರಾಣಿಗಳು ವೇಗವಾಗಿ ವಿನಾಶದತ್ತ ಸಾಗಿವೆ ಎಂದು ಜೀವಶಾಸ್ತ್ರ ತಜ್ಞರು ಎಚ್ಚರಿಸಿದ್ದಾರೆ...

ವಿನಾಶದತ್ತ ಪ್ರಾಣಿ ಸಂಕುಲ ದಾಪುಗಾಲು; ಮಾನವನೇ ಮೊದಲ ಬಲಿ
ವಿನಾಶದತ್ತ ಪ್ರಾಣಿ ಸಂಕುಲ ದಾಪುಗಾಲು; ಮಾನವನೇ ಮೊದಲ ಬಲಿ
Published On :

ಮಿಯಾಮಿ: ಮಾನವ ಸೇರಿದಂತೆ ಭೂಮಿಯ ಮೇಲಿನ ಎಲ್ಲ ಪ್ರಾಣಿಗಳು ವೇಗವಾಗಿ ವಿನಾಶದತ್ತ ಸಾಗಿವೆ ಎಂದು ಜೀವಶಾಸ್ತ್ರ ತಜ್ಞರು ಎಚ್ಚರಿಸಿದ್ದಾರೆ.

ಭೂಮಿ ಆರನೇ ಸರ್ವನಾಶದತ್ತ ದಾಪುಗಾಲಿಟ್ಟಿದ್ದು ಪ್ರಾಣಿ ಸಂಕುಲದ ನಾಶ ಈ ಹಿಂದಿಗಿಂತಲೂ ನೂರು ಪಟ್ಟು ವೇಗವಾಗಿ ಸಾಗಿದೆ. ಈ ಪ್ರಕ್ರಿಯೆಯಲ್ಲಿ ಮಾನವನೇ ಮೊದಲ ಬಲಿ ಎಂದು ಹೇಳಿದ್ದಾರೆ. ಡೈನೋಸಾರ್‍ಗಳು ಸರ್ವನಾಶವಾದ 66 ದಶಲಕ್ಷ ವರ್ಷಗಳ ನಂತರದಲ್ಲಿ ಭೂಮಿ ಮೇಲಿನ ಜೀವಗಳು ಇಷ್ಟೊಂದು ವೇಗವಾಗಿ ನಶಿಸಿರಲಿಲ್ಲ ಎಂದು ಸ್ಟಾನ್ಸ್ ಫೋರ್ಡ್ ವಿವಿ, ಪ್ರಿನ್ಸ್ ಟನ್ ವಿವಿ ಮತ್ತು ಬರ್ಕ್‍ಲಿಯಲ್ಲಿನ ಕ್ಯಾಲಿಫೋರ್ನಿಯಾ ವಿವಿ ತಜ್ಞರು ನಡೆಸಿದ ಅಧ್ಯಯನ ಹೇಳಿದೆ.

ಮಾನವ ಸರ್ವನಾಶದತ್ತ ದಾಪುಗಾಲಿಟ್ಟಿದ್ದಾನೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸ್ಟಾನ್ ಫೋರ್ಡ್ ವಿವಿಯ ಜೀವಶಾಸ್ತ್ರ ಪ್ರೊಫೆಸರ್ ಪಾಲ್ ಎಲಿಚ್ ಹೇಳಿದ್ದಾರೆ. ಈ ವಿದ್ಯಮಾನ ಸಂಭವಿಸಿದರೆ ಜೀವ ಮರುಸೃಷ್ಟಿಯಾಗಲು ಹಲವು ದಶಲಕ್ಷ ವರ್ಷಗಳೇ ಬೇಕಾಗಲಿದೆ ಎಂದು ತಂಡದ ಮುಖ್ಯಸ್ಥ ಗೆರಾರ್ಡೊ ಸೆಬಲೊಸ್ ಹೇಳಿದ್ದಾರೆ. ಈಗಾಗಲೆ ಸರ್ವನಾಶ ಹೊಂದಿರುವ ಕಪ್ಪೆಗಳು, ಸರಿಸೃಪಗಳು, ಹುಲಿ ಮತ್ತಿತರ ಪ್ರಾಣಿಗಳ ಬೆನ್ನುಮೂಳೆ, ಅಸ್ಥಿಪಂಜರಗಳ ಚಾರಿತ್ರಿಕ ಅಂಕಿಅಂಶಗಳನ್ನು ವಿಶ್ಲೇಷಿಸುವ ಮೂಲಕ ಈ ಅಧ್ಯಯನ ಮಾಡಲಾಗಿದೆ.

ಭೂಮಿ ಮೇಲೆ ಮಾನವನ ಚಟುವಟಿಕೆಗಳು ಆರಂಭಗೊಳ್ಳುವುದಕ್ಕೂ ಮುನ್ನ ಜೀವಗಳು ನೈಸರ್ಗಿಕವಾಗಿ ನಾಶಗೊಂಡಿರುವ ವೇಗದೊಂದಿಗೆ ಮಾನವನ ಚಟುವಟಿಕೆ ಆರಂಭಗೊಂಡ ನಂತರ ಅಂದರೆ ಆಧುನಿಕ ಕಾಲದಲ್ಲಿ ಪ್ರಾಣಿಸಂಕುಲದ ನಾಶದ ವೇಗವನ್ನು ಹೋಲಿಸಲಾಗಿದೆ. ಅರಣ್ಯನಾಶ ಮತ್ತು ಮಾಲಿನ್ಯದಿಂದ ಹೆಚ್ಚಿನ ಪ್ರಭೇದಗಳು ನಾಶವಾಗುತ್ತಿವೆ ಎಂದು ಅಧ್ಯಯನ ಹೇಳಿದೆ.

ಅಧ್ಯಯನದಲ್ಲಿ ಕಡಿಮೆ ವೇಗವನ್ನು ಪರಿಗಣಿಸಲಾಗಿದೆ. ಜೈವಿಕ ವೈವಿಧ್ಯತೆ ಮೇಲೆ ಮಾನವನ ಪರಿಣಾಮವನ್ನು ಕನಿಷ್ಟ ಮಟ್ಟದಲ್ಲಿ ಲೆಕ್ಕಹಾಕಲಾಗಿದೆ. ಅಂತಾರಾಷ್ಟ್ರೀಯ ನೈಸರ್ಗಿಕ ಸಂರಕ್ಷಣಾ ಸಂಸ್ಥೆ ವರದಿಗಳ ಪ್ರಕಾರ ಶೇ.41ರಷ್ಟು ಉಭಯವಾಸಿಗಳು ಮತ್ತು ಶೇ.26ರಷ್ಟು ಸಸ್ತನಿಗಳು ವಿನಾಶದ ಅಂಚಿನಲ್ಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.