ವಿಜ್ಞಾನ-ತಂತ್ರಜ್ಞಾನ

ಟ್ವಿಟ್ಟರ್ ನಲ್ಲಿ ಓದುವ ಸುದ್ದಿಗಳ ಪೈಕಿ ಶೇ.25ರಷ್ಟು ಸುದ್ದಿ ನಂಬಲರ್ಹವಲ್ಲ..!

ಖ್ಯಾತ ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಬರುವ ಸುದ್ದಿಗಳ ಪೈಕಿ ಶೇ.25ರಷ್ಟು ಸುದ್ದಿಗಳು ಸುಳ್ಳುಸುದ್ದಿಗಳಂತೆ. ಇವುಗಳು ನಂಬಲರ್ಹವಲ್ಲದ ಸುದ್ದಿಗಳು ಎಂದು ವರದಿಯೊಂದು ಹೇಳಿದೆ...

ಟ್ವಿಟ್ಟರ್ ನಲ್ಲಿ ಓದುವ ಸುದ್ದಿಗಳ ಪೈಕಿ ಶೇ.25ರಷ್ಟು ಸುದ್ದಿ ನಂಬಲರ್ಹವಲ್ಲ..!
ಟ್ವಿಟ್ಟರ್
Published On :

ನ್ಯೂಯಾರ್ಕ್: ಖ್ಯಾತ ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಬರುವ ಸುದ್ದಿಗಳ ಪೈಕಿ ಶೇ.25ರಷ್ಟು ಸುದ್ದಿಗಳು ಸುಳ್ಳುಸುದ್ದಿಗಳಂತೆ. ಇವುಗಳು ನಂಬಲರ್ಹವಲ್ಲದ ಸುದ್ದಿಗಳು ಎಂದು ವರದಿಯೊಂದು ಹೇಳಿದೆ.

ಖ್ಯಾತ ಮೈಕ್ರೋಬ್ಲಾಗಿಂಗ್ ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಸಿಗುವ ಸುದ್ದಿಗಳ ಪೈಕಿ ಸಾಕಷ್ಟು ಸುದ್ದಿಗಳು ಸುಳ್ಳುಸುದ್ದಿಯಾಗಿದ್ದು, ಇವುಗಳು ನಂಬಲರ್ಹವಲ್ಲ. ನ್ಯೂಯಾರ್ಕ್ ಮೂಲದ ಖಾಸಗಿ ಸಂಶೋಧನಾ ಸಂಸ್ಥೆ ಆ್ಯಡ್ ವೀಕ್ ಡಾಟ್ ಕಾಮ್ ಸಂಶೋಧಕರು ನಡೆಸಿದ ಸಂಶೋಧನೆಯ ಪ್ರಕಾರ ಆಗಾಗ ಟ್ವಿಟ್ಟರ್ ಬಳಕೆ ಮಾಡುವ ಸಾಮಾನ್ಯ ಬಳಕೆದಾರರಿಗೆ ಈ ವಿಚಾರ ತಿಳಿದಿದೆಯಾದರೂ, ಕೆಲ ವ್ಯಕ್ತಿಗಳು ವಿವಿಧ ಕಾರಣಗಳಿಗಾಗಿ ಸುಳ್ಳುಸುದ್ದಿಯನ್ನು ಪ್ರಸರಿಸುತ್ತಾರಂತೆ. ಕೆಲವರು ಅಕಸ್ಮಾತ್ ಆಗಿ ಸುಳ್ಳುಸುದ್ದಿ ಪ್ರಕಟಿಸಿದರೆ, ಕೆಲವರು ಉದ್ದೇಶಪೂರ್ವಕವಾಗಿ ಇಂತಹ ಸುಳ್ಳುಸುದ್ದಿಗಳನ್ನು ಪ್ರಸರಿಸುತ್ತಾರಂತೆ.

ಮತ್ತೆ ಕೆಲವರು ಆ ನಿರ್ಧಿಷ್ಟ ವಿಚಾರದ ಬಗ್ಗೆ ತಮಗಿರುವ ಅಜ್ಞಾನದಿಂದಾಗಿ ಸುಳ್ಳುಸುದ್ದಿ ಪ್ರಕಟಿಸಿದರೆ ಮತ್ತೆ ಕೆಲವರು ಈ ವಿಚಾರದ ಬಗ್ಗೆ ತಮಗಿರುವ ಕುತೂಹಲವನ್ನು ತಣಿಸಲು ಮತ್ತು ಆ ವಿಚಾರವಾಗಿ ಹೆಚ್ಚು ಹೆಚ್ಚು ತಿಳಿಯಲು ಇಂತಹ ಸುಳ್ಳುಸುದ್ದಿಯನ್ನು ಪ್ರಕಟಿಸುತ್ತಾರಂತೆ. ಇನ್ನೊಂದು ಗುಂಪಿಗೆ ಸೇರುವ ವ್ಯಕ್ತಿಗಳಿದ್ದಾರೆ. ಇವರು ಸುಖಾಸುಮ್ಮನೆ ಜನರ ತಲೆ ಕೆಡಿಸಲೆಂದೇ ಸುಳ್ಳುಸುದ್ದಿಗಳನ್ನು ಹಬ್ಬಿಸುತ್ತಾರಂತೆ.

ಉದಾಹರಣೆಗೆ 2014ರಲ್ಲಿ ಎಬೋಲಾ ರೋಗ ಪತ್ತೆಯಾದಾಗ ಇತರೆ ಸಾಮಾಜಿಕ ತಾಣಗಳಿಗೆ ಹೋಲಿಕೆ ಮಾಡಿದರೆ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಮಿಲಿಯನ್ ಗಟ್ಟಲೆ ಇಲ್ಲ ಸಲ್ಲದ ಚರ್ಚೆಗಳು ನಡೆಯಿತಂತೆ. ಈ ಚರ್ಚೆಗಳ ಪೈಕಿ ನಿರ್ಧಿಷ್ಟ ಸಮಾಚಾರ ಅಥವಾ ಸತ್ಯಾಂಶ ಜನರಗೆ ಮುಟ್ಟುವುದಕ್ಕಿಂತ ಹೆಚ್ಚಾಗಿ ಸುಳ್ಳುಸುದ್ದಿಗಳೇ ಪ್ರಸಾರಗೊಂಡಿದ್ದವು ಎಂದು ಸಂಶೋಧಕರು ಹೇಳಿದ್ದಾರೆ.

ಇದಲ್ಲದೆ ರಾಜಕೀಯ ಗಣ್ಯರು, ಸಿನಿಮಾ ನಟ-ನಟಿಯರು, ಇತರೆ ದೊಡ್ಡ-ದೊಡ್ಡ ಬ್ರಾಂಡ್ ನ ಸಂಸ್ಥೆಗಳ ಕುರಿತು ಊಹಾಪೋಹಗಳು ಸೆಕೆಂಡ್ ಗೆ ಒಂದರಂತೆ ಟ್ವಿಟ್ಟರ್ ಗೆ ಅಪ್ಪಳಿಸುತ್ತಿವೆ. ಆದರೆ ಇವುಗಳಲ್ಲಿ ಸತ್ಯಾಂಶ ಎಷ್ಟು ಎಂಬುದೇ ಪ್ರಶ್ನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.